News

E.g., 15/06/2021
ER NEWS

Subject 30 ಸಾವಿರ ಮಂದಿಗೆ ಉದ್ಯೋಗ ; ಮಂಗಳೂರಿನಲ್ಲಿ ₹1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್‌ಗೆ ಶೀಘ್ರ ಮಂಜೂರಾತಿ: ಅನಂತ್ ಕುಮಾರ್

ಮಂಗಳೂರಿನಲ್ಲಿ ₹ 1,000 ಕೋಟಿ ವೆಚ್ಚದ ಪ್ಲಾಸ್ಟಿಕ್ ಉತ್ಪಾದನಾ ಪಾರ್ಕ್ ಗೆ ಮುಂದಿನ ವಾರ ಮಂಜೂರಾತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದರು. ನಗರದ ಪುರಭವನದಲ್ಲಿ ಸೋಮವಾರ ನಡೆದ ಮುದ್ರಾ ಪ್ರೋತ್ಸಾಹ ಎಲ್ಲ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಪಾರ್ಕ್ ನಿಂದ 30,000 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.


Post date: 16-10-1717
ER NEWS

Subject ಕಟ್ಟಡ ಕುಸಿತ ಪ್ರಕರಣ : ಸಾವಿನ ಸಂಖ್ಯೆ 5ಕ್ಕೆ ಏರಿಕೆ -ಮೂರು ವರ್ಷದ ಮಗು ಪವಾಡ ಸದೃಶವಾಗಿ ಪಾರು

ಈಜಿಪುರದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ಈ ನಡುವೆ ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಎನ್ನಲಾಗಿದ್ದ ಮೂರು ವರ್ಷದ ಮಗುವೊಂದು ಪವಾಡ ಸದೃಶವಾಗಿ ಪಾರಾಗಿದೆ.ಮೂರು ವರ್ಷದ ಸಂಜನಾ ಸೇರಿದಂತೆ ಆರು ಜನ ಕಟ್ಟಡದ ಅವಶೇಷಗಳಡಿ ಸಿಲುಕ್ಕಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಸಂಜನಾ ಜೀವಂತವಾಗಿರುವುದು ಪತ್ತೆಯಾಗಿದೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸಂಜನಾಳನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಕಟ್ಟಡದಲ್ಲಿದ್ದ ಗರ್ಭಿಣಿ ಅಶ್ವಿನಿ (22) ಪೆರುಮಾಳ್ (42), ಕಲಾವತಿ (68) ರವಿಚಂದ್ರ (30) ಹಾಗೂ ನೆರೆಮನೆಯ...
Post date: 16-10-1717

ER NEWS

Subject ವಿಶ್ವನಾಥ್ ಗೆ ಕಾಂಗ್ರೆಸ್ ನಲ್ಲಿ ಕಿಮ್ಮತ್ತಿರಲಿಲ್ಲ' : ಸಿದ್ದರಾಮಯ್ಯ ವಾಗ್ದಾಳಿ

ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರನ್ನು ಕರೆತರಲು ನಾನೇ ಕಾರಣ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವವರಿಗೆ ಪಕ್ಷದಲ್ಲಿ ಕಿಮ್ಮತ್ತು ಇರಲಿಲ್ವಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪಕ್ಷದಲ್ಲಿ ಕಿಮ್ಮತ್ತೇ ಇರದವರು ನನ್ನನ್ನು ಹೇಗೆ ಪಕ್ಷಕ್ಕೆ ಸೇರಿಸಲು ಸಾಧ್ಯವಾಯಿತು? ಎಂದು ಅವರು ಮಾಜಿ ಸಂಸದ ಎಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದರು.

ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 'ಪಕ್ಷದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ಈಗ ಪಕ್ಷ ತೊರೆದು ನನಗೆ...
Post date: 16-10-1717

ER NEWS

Subject ಟಿಕೆಟ್‌ ಬೇಕಾದರೆ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರಥಯಾತ್ರೆ ಯಶಸ್ವಿಗೊಳಿಸಿ' ಬಿ.ಎಸ್‌. ಯಡಿಯೂರಪ್ಪ

"ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಬೇಕಾದರೆ ನ.2ರಿಂದ ನಡೆಯಲಿರುವ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರಥಯಾತ್ರೆ ಯಶಸ್ವಿಗೊಳಿಸಿ' ಎಂಬ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅಲಿಖೀತ ನಿರ್ದೇಶನ ಅಭ್ಯರ್ಥಿ ಆಕಾಂಕ್ಷಿಗಳಲ್ಲಿ ತಳಮಳ ಹುಟ್ಟಿಸಿದೆ.

ಕಳೆದ ಜೂನ್‌ನಲ್ಲಿ ವಿಸ್ತಾರಕ್‌ ಯೋಜನೆ ರೂಪಿಸಿದ್ದ ಬಿಜೆಪಿ, ಅಭ್ಯರ್ಥಿ ಆಕಾಂಕ್ಷಿಗಳಿಗೆ ತಮ್ಮ ಕ್ಷೇತ್ರವಲ್ಲದೆ, ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಪ್ರಭಾವ ಹೊಂದಿರುವವರಿಗೆ ಟಿಕೆಟ್‌ ಹಂಚಿಕೆ ವೇಳೆ ಆದ್ಯತೆ ನೀಡುವುದಾಗಿ ಹೇಳಿತ್ತು. ಆ ಮೂಲಕ ಪಕ್ಕದ ಕ್ಷೇತ್ರದಲ್ಲಿ 15 ದಿನ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸುವ ಟಾಸ್ಕ್ ನೀಡಿ...
Post date: 16-10-1717

ER NEWS

Subject ಮತ್ತೆ ಚರ್ಚೆ ಹುಟ್ಟು ಹಾಕಿದ ಟಿಪ್ಪು ಜಯಂತಿ ಆಚರಣೆ

ಇದೀಗ ಮತ್ತೆ ಟಿಪ್ಪು ಜಯಂತಿ ಆಚರಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕೊಡಗು ಜಿಲ್ಲಾ ಪಂಚಾಯತಿ ಟಿಪ್ಪು ಜಯಂತಿ ಆಚರಿಸುವುದಿಲ್ಲ ಅನ್ನೋ ನಿರ್ಣಯವನ್ನ ಕೈಗೊಂಡಿದ್ದು, ಬಿಜೆಪಿಯೂ ಸಹ ಟಿಪ್ಪು ಜಯಂತಿ ಆಚರಣೆ ಬೇಡ ಅಂತಾ ಪಟ್ಟು ಹಿಡಿದಿದೆ. ಆದರೆ, ಇದ್ಯಾವುದಕ್ಕೂ ಕ್ಯಾರೆ ಅನ್ನದ ರಾಜ್ಯ ಸರ್ಕಾರ ಮಾತ್ರ ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಅಂತಾ ರೆಡಿಯಾಗಿದೆ. ಟಿಪ್ಪು ಜಯಂತಿ ಆಚರಣೆ ಬೇಡವೇ ಬೇಡ ಅಂತಿದೆ ಬಿಜೆಪಿ

ಮೈಸೂರು ಹುಲಿ ಎಂದೇ ಹೆಸರಾದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮತ್ತೆ ವಿವಾದಕ್ಕೀಡಾಗಿದೆ. ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಣೆ ಮಾಡಲಾಗುತ್ತಿದೆ. ಈ ಹಿಂದೆ ಟಿಪ್ಪು ಜಯಂತಿ...
Post date: 16-10-1717

ER NEWS

Subject ಜಪಾನ್ನಲ್ಲಿ ಮುಳುಗಿದ ಹಡಗು: 10 ಭಾರತೀಯರು ಕಣ್ಮರೆ

ಜಪಾನ್ ಕರಾವಳಿಯಲ್ಲಿ ಸರಕು ಸಾಗಾಣಿಕೆ ಹಡಗು ಮುಳುಗಿದ ಘಟನೆಯಲ್ಲಿ 10 ಮಂದಿ ಭಾರತೀಯರು ಇನ್ನೂ ಕಣ್ಮರೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ರವೀಶ್ ಕುಮಾರ್ ಈ ಸಂಬಂಧ ಟ್ವೀಟ್ ಮಾಡಿ, "ಕಣ್ಮರೆಯಾದ ಕ್ಯಾಪ್ಟರ್ ನಯ್ಯರ್ ರಜನೀಶ್ ರಾಮಚಂದ್ರನ್, ಸೆಕೆಂಡ್ ಆಫೀಸರ್ ರಾಹುಲ್ ಕುಮಾರ್, ಮೂರನೆ ಅಧಿಕಾರಿ ಸುಬ್ರಹ್ಮಣ್ಯನ್ ಗಿರಿಧರ್ ಕುಮಾರ್, ಮುಖ್ಯ ಎಂಜಿನಿಯರ್ ರಜಪೂತ್ ಶ್ಯಾಮಸಿಂಗ್, ನಾಲ್ಕನೆ ಎಂಜಿನಿಯರ್ ಸುಬ್ಬಯ್ಯ ಸುರೇಶ್ ಕುಮಾರ್, ಕಿರಿಯ ಎಂಜಿನಿಯರ್ ಚೌಹಾಣ್ ಅಶೋಕ್ ಕುಮಾರ್, ಪೆರುಮಲಸಾಮಿ ಗುರುಮೂರ್ತಿ, ಮಲವರನನ್ ಸಿಲಂಬರಸನ್ ಮುರುಗನ್ ಗೌತಮ್...
Post date: 16-10-1717

ER NEWS

Subject ದೇಶೀ ಸಮರ ನೌಕೆ INS Kiltan ರಾಷ್ಟ್ರ ಸೇವೆಗೆ ಸಮರ್ಪಣೆ

ಜಲಾಂತರ್ಗಾಮಿ ನಿಗ್ರಹ ಸಮರಕ್ಕಾಗಿ ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ ಐಎನ್‌ಎಸ್‌ ಕಿಲ್ತಾನ್‌ ನೂತನ ಭಾರತೀಯ ಸಮರ ನೌಕೆಯನ್ನು ಇಂದು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿಶಾಖಪಟ್ಟಣದ ನೌಕಾಪಡೆ ಧಕ್ಕೆಯಲ್ಲಿ ದೇಶ ಸೇವೆಗೆ ಅರ್ಪಿಸಿದರು.

ಐಎನ್‌ಎಸ್‌ ಕಿಲ್ತಾನ್‌ ಸಮರ ನೌಕೆಯನ್ನು ದೇಶ ಸೇವೆಗೆ ಸಮರ್ಪಿಸುವ ಈ ಕಾರ್ಯಕ್ರಮದಲ್ಲಿ ಅಡ್ಮಿರಲ್‌ ಸುನೀಲ್‌ ಲಾಂಬಾ, ಪಿವಿಎಸ್‌ಎಂ, ಎವಿಎಸ್‌ಎಂ, ಎಡಿಸಿ, ನೌಕಾಪಡೆ ಮುಖ್ಯಸ್ಥರು ಹಾಗೂ ಇನ್ನೂ ಅನೇಕ ಹಿರಿಯ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು. ಐಎನ್‌ಎಸ್‌ ಕಿಲ್ತಾನ್‌, ಸಮರ ನೌಕೆಯು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡಿದ್ದು ಕೋಲ್ಕತಾದ...
Post date: 16-10-1717

ER NEWS

Subject ಗೋಲ್ಡ್‌ ಬಿಸ್ಕೆಟ್‌ ಸ್ವೀಕರಿಸಲು ಬಿಜೆಪಿ, ಜೆಡಿಎಸ್‌ ನಕಾರ

ವಿಧಾನಸೌಧದ ವಜ್ರ ಮಹೋತ್ಸವ ನೆನಪಿಗೆ ಚಿನ್ನದ ಬಿಸ್ಕೆಟ್‌ ನೀಡಿದರೆ ಅದನ್ನು ತಿರಸ್ಕರಿಸಲು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ ನಿರ್ಧರಿಸಿವೆ. ದುಂದು ವೆಚ್ಚಕ್ಕೆ ಆಸ್ಪದ ಮಾಡಿಕೊಡುವ ಇಂಥ ಪ್ರಸ್ತಾಪಕ್ಕೆ ಆಡಳಿತಾರೂಢ ಕಾಂಗ್ರೆಸ್‌ನಲ್ಲೂ ವಿರೋಧ ವ್ಯಕ್ತವಾಗಿದೆ.
ವಜ್ರ ಮಹೋತ್ಸವದ ಸವಿ ನೆನಪಿಗೆ ಉಭಯ ಸದನಗಳ ಸದಸ್ಯರಿಗೆ ಚಿನ್ನದ ಬಿಸ್ಕೆಟ್‌ ಉಡುಗೋರೆ ನೀಡಲು ಮುಂದಾಗಿರುವ ಬಗ್ಗೆ Electreps ಭಾನುವಾರ ವರದಿ ಪ್ರಕಟ ಮಾಡಿತ್ತು. ರಾಜಕೀಯ ವಲಯದಲ್ಲಿ ಇದು ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇದರ ಬೆನ್ನಿಗೇ ಚಿನ್ನದ ಬಿಸ್ಕೆಟ್‌ ಕೊಡುಗೆ ತಿರಸ್ಕರಿಸುವಂತೆ ತಮ್ಮ ಶಾಸಕರಿಗೆ ಸೂಚನೆ ಕೊಡುವ...
Post date: 16-10-1717

ER NEWS

Subject ಕೇರಳ ರಾಜ್ಯಕ್ಕೆ 60 ಸಾವಿರ ಕೋಟಿ ರು. ಅನುದಾನ ಘೋಷಿಸಿದ ಸಚಿವ ನಿತಿನ್ ಗಡ್ಕರಿ

ಕೇಂದ್ರ ಸಚಿವ ನಿತಿನ್ ಗಡ್ಕರಿ ಕೇರಳಗೆ 60 ಸಾವಿರ ಕೋಟಿ ರು. ಅನುದಾನ ಘೋಷಿಸಿದ್ದಾರೆ, ಕೊಲ್ಲಂ ನಲ್ಲಿ ಏರ್ಪಡಿಸಿದ್ದ ಜನ ರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಹಿತಾಸಕ್ತಿಯಲ್ಲಿ ಬಿಜೆಪಿ ಎಂದಿಗೂ ರಾಜಕೀಯ ಬೆರೆಸುವುದಿಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ ಸಭೆ ನಡೆಸಲಾಗುವುದು, ಆ ವೇಳೆ ಕೇರಳ ರಾಜ್ಯಕ್ಕೆ 60 ಸಾವಿರ ಕೋಟಿ ರು, ಅನುದಾನದ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸಿಪಿಎಂ, ಕಾಂಗ್ರೆಸ್, ಮತ್ತು ಇತರೆ ರಾಜಕೀಯ ಪಕ್ಷಗಳು ಏನು ಬೇಡಿಕೆ ಇಟ್ಟಿದ್ದವೋ ಅದನ್ನು ನಾನು...
Post date: 16-10-1717

Pages