News

E.g., 15/06/2021
ER NEWS

Subject 'ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ 27.29 ಲಕ್ಷ ಜನರಿಗೆ ಸಾಲ'

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ ಈವರೆಗೆ 27.29 ಲಕ್ಷ ಜನರಿಗೆ ಸಾಲ ನೀಡಲಾಗಿದ್ದು, ಮುದ್ರಾ ಯೋಜನೆಯಲ್ಲಿ ಕರ್ನಾಟಕಕ್ಕೆ ನಂಬರ್ 1 ಸ್ಥಾನ ಲಭಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮುದ್ರಾ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರರು, 'ಕಳೆದ 70 ವರ್ಷಗಳ ಇತಿಹಾಸದಲ್ಲಿ ಮುದ್ರಾ ಯೋಜನೆ ದೇಶದ ಅತಿದೊಡ್ಡ ಸಾಲ ವಿತರಣಾ ಯೋಜನೆಯಾಗಿದ್ದು, ದೇಶದಾದ್ಯಂತ ಈವರೆಗೆ ಒಟ್ಟು 8.4 ಕೋಟಿ ಜನರು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು...
Post date: 16-10-1717

ER NEWS

Subject ಜೆಡಿಎಸ್ಗೆ ಹೋಗ್ತಿನಂತ ಯಾವ ಮುಠ್ಠಾಳ ಹೇಳಿದ್ದು: ಈಶ್ವರಪ್ಪ ಕಿಡಿ

ಮುಂಬರುವ ವಿಧಾನಸಭೆ ಚುನಾವಣೆಯ ವೇಳೆಗೆ ಜೆಡಿಎಸ್ ಪಕ್ಷಕ್ಕೆ ಹೋಗ್ತಿನಂತ ಯಾವ ಮುಠ್ಠಾಳ ಹೇಳಿದ್ದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.ಗಂಗಾವತಿಯ ಆನೆಗೊಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ನನಗೆ ತಾಯಿಯಿದ್ದಂತೆ, ನನ್ನ ಉಸಿರು ಇದ್ದಂತೆ. ಯಡಿಯೂರಪ್ಪ ಮತ್ತು ನಾನು ಅಣ್ಣ ತಮ್ಮಂದಿರಿದ್ದಂತೆ ಎಂದು ತಿಳಿಸಿದ್ದಾರೆ.

ಬಿಎಸ್ವೈ ಮತ್ತು ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ವಿಪಕ್ಷಗಳು ಉದ್ದೇಶಪೂರ್ವಕವಾಗಿ ಇಂತಹ ವದಂತಿಗಳನ್ನು ಹರಡಿಸುತ್ತಿವೆ ಎಂದು ಕಿಡಿಕಾರಿದ್ದಾರೆ. ನನ್ನ ಜೀವನದಲ್ಲಿ ಬಿಜೆಪಿಯನ್ನು ಬಿಟ್ಟು ಯಾವ...
Post date: 16-10-1717

ER NEWS

Subject ನೆಹರು ಕನಸಿನ ಭಾರತ ಸಾಕಾರಕ್ಕೆ ಕಾಂಗ್ರೆಸ್ ಗಿಂತ ಬಿಜೆಪಿ ಕೊಡುಗೆಯೇ ಹೆಚ್ಚು: ಪ್ರಧಾನಿ ಮೋದಿ

ಕಾಂಗ್ರೆಸ್ ಪಕ್ಷದ ಹಲವು ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಗುಜರಾತ್ ಗಾಂಧಿನಗರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆ ಗುಜರಾತ್ ನಲ್ಲಿ ವಿಪಕ್ಷಗಳಿಗೆ ನಡುಕ ಶುರುವಾಗಿದೆ ಎಂದರು. ಇದೇ ವೇಳೆ ಬೋಪೋರ್ಸ್ ಹಗರಣವನ್ನು ಮತ್ತೆ ಪ್ರಸ್ತಾಪಿಸಿದ ಮೋದಿ ಈ ಹಗರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನಿಸಿತ್ತು. ಕಾಂಗ್ರೆಸ್ ನ...
Post date: 16-10-1717

ER NEWS

Subject ಆರೋಪ ಸುಳ್ಳಾದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳುವೆ : ಬಿ.ಜೆ.ಪುಟ್ಟಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಡಿನೋಟಿಫೈ ಆರೋಪ ಸಂಬಂಧ ಬಿಜೆಪಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ದೂರು ನೀಡಿದ್ದು, ಈ ಸಂಬಂಧ ನನ್ನ ಆರೋಪ ಸುಳ್ಳಾದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳುವೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.

ಸೋಮವಾರ ನಗರದ ರೇಸ್ಕೋರ್ಸ್ ರಸ್ತೆಯ ಎಸಿಬಿ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭೂಪಸಂದ್ರದಲ್ಲಿ 6.36 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ. ಈ ಹಿನ್ನೆಲೆ ಎಸಿಬಿಗೆ ದೂರು ನೀಡಿದ್ದೇನೆ ಎಂದರು. ಎಸಿಬಿ...
Post date: 16-10-1717

ER NEWS

Subject ಸೌರಮಂಡಲದಲ್ಲಿ 9ನೇ ಗ್ರಹದ ಇರುವಿಕೆಗೆ ಹಲವು ಪುರಾವೆ: ನಾಸಾ

ಸೌರಮಂಡಲದಲ್ಲಿ ಈವರೆಗೂ ಕಾಣದಿರುವ ಒಂಬತ್ತನೇ ಗ್ರಹದ ಇರುವಿಕೆ ಕುರಿತು ನಾಸಾ ವಿಜ್ಞಾನಿಗಳು ವಿವರಿಸಿದ್ದಾರೆ. ಭೂಮಿಗಿಂತ 10ಪಟ್ಟು ಹೆಚ್ಚು ದ್ರವ್ಯರಾಶಿ ಹಾಗೂ ಸೂರ್ಯನಿಂದ ನೆಪ್ಚೂನ್‌ ದೂರಕ್ಕಿಂತಲೂ 20ಪಟ್ಟು ಹೆಚ್ಚು ಅಂತರದಲ್ಲಿ ಇರಬಹುದು ಎಂದಿದ್ದಾರೆ. ಯುರೇನಸ್‌ ಹಾಗೂ ನೆಪ್ಚೂನ್‌ಗಳಿಗಿಂತ ಕಡಿಮೆ ದ್ರವ್ಯರಾಶಿ ಹೊಂದಿರುವ ಒಂಬತ್ತನೇ ಗ್ರಹವೇ ಸೌರಮಂಡಲದಲ್ಲಿ ಕಾಣದಿರುವ ‘ಮಹಾಪೃಥ್ವಿ’ ಆಗಿರಬಹುದೆಂದು ಊಹಿಸಲಾಗಿದೆ.

ಐದು ಭಿನ್ನ ಗ್ರಹಿಕೆಗಳು ಒಂಬತ್ತನೇ ಗ್ರಹದ ಇರುವಿಕೆಗೆ ಪುರಾವೆ ಒದಗಿಸುತ್ತವೆ. ಅಂಥದ್ದೊಂದು ಗ್ರಹ ಇಲ್ಲವೆಂದು ಸಾಬೀತು ಪಡಿಸಬೇಕಾದರೆ, ಐದು ಭಿನ್ನ ಸಿದ್ಧಾಂತಗಳನ್ನು...
Post date: 16-10-1717

ER NEWS

Subject ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ 'ಜುಮ್ಲಾಗಳ ಮಳೆ' ಸುರಿಯಲಿದೆ

"ಹವಾಮಾನ ವರದಿ: ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಗುಜರಾತ್ ನಲ್ಲಿ ಜುಮ್ಲಾಗಳ ಮಳೆ ಸುರಿಯಲಿದೆ". ಇಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರನ್ನು ರಾಹುಲ್ ಗಾಂಧಿ ಕುಟುಕಿದ್ದು ಹೀಗೆ. ಇದೇ ರೀತಿ ಇನ್ನೊಂದು ಟ್ವೀಟ್ ಅನ್ನು ಕೂಡ ರಾಹುಲ್ ಪೋಸ್ಟ್ ಮಾಡಿದ್ದು, "ಚುನಾವಣಾ ದಿನಾಂಕವನ್ನು ಎದುರು ನೋಡುತ್ತಿರುವ ಗುಜರಾತ್ 12,500 ಕೋಟಿ ರೂ. ಮೊತ್ತದ ಯೋಜನೆಗಳನ್ನು ಗಿಟ್ಟಿಸಿಕೊಂಡಿದೆ" ಎನ್ನುವ ಹಿಂದೂಸ್ತಾನ್ ಟೈಮ್ಸ್ ನ ವರದಿಯನ್ನೂ ಅವರು ಟ್ಯಾಗ್ ಮಾಡಿದ್ದಾರೆ.

ಹಿಮಾಚಲ ಪ್ರದೇಶ ಹಾಗು ಗುಜರಾತ್ ನಲ್ಲಿ ಏಕಕಾಲದಲ್ಲಿ ಚುನಾವಣಾ ದಿನಾಂಕ ಘೋಷಿಸದಂತೆ ಬಿಜೆಪಿ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿದೆ...
Post date: 16-10-1717

ER NEWS

Subject ಆ.22 ರಂದು ಬಿಜೆಪಿ ಅಥವಾ ಜೆಡಿಎಸ್ ಸೇರುವ ಬಗ್ಗೆ ತೀರ್ಮಾನ: ಸಿ.ಪಿ.ಯೋಗೇಶ್ವರ್

ಮುಂಬರುವ ಕೆಲ ದಿನಗಳಲ್ಲಿ ಯಾವ ಪಕ್ಷ ಸೇರುತ್ತೇನೆ ಎನ್ನುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಆಕ್ಟೋಬರ್ 22 ರಂದು ಬೆಂಬಲಿಗರ ಸಭೆ ಕರೆದಿದ್ದೇನೆ. ಸಭೆಯ ನಂತರ ಬಿಜೆಪಿ, ಅಥವಾ ಜನತಾ ದಳ ಸೇರುವ ಬಗ್ಗೆ ಘೋಷಿಸುತ್ತೇನೆ. ನನ್ನ ಕುಟುಂಬದವರು ಯಾರೂ ರಾಜಕೀಯಕ್ಕೆ ಬರೋಲ್ಲ. ರಾಜಕೀಯದಲ್ಲಿ ನನ್ನ ಕುಟುಂಬದವರಿಗೆ ಆಸಕ್ತಿಯಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಡೆಯಿಂದಾಗಿ ಬೇಸತ್ತ ಯೋಗೇಶ್ವರ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಹಿರಿಯ...
Post date: 16-10-1717

ER NEWS

Subject ಇದೇನಿದು ರಾಹುಲ್ ಮಾತುಗಳಲ್ಲಿ ಹಾಸ್ಯ, ವ್ಯಂಗ್ಯದ ಹೊನಲು!

'ಬಿಜೆಪಿಯ ಉತ್ತರಗಳಿಗೆ ಪ್ರಶ್ನೆ ಕೇಳಲೇಬೇಕು' ಎಂದು ಬರೋಡಾದಲ್ಲಿ ವಿದ್ಯಾರ್ಥಿಗಳ ಮುಂದೆ ಅಬ್ಬರಿಸಿ ಅಪಹಾಸ್ಯಕ್ಕೀಡಾಗಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯವರು, ಟ್ವಿಟ್ಟರಲ್ಲಿ ಇಂದು ಹವಾಮಾನ ತಜ್ಞರಾಗಿದ್ದಲ್ಲದೆ, ತಮ್ಮ ಹಾಸ್ಯಪ್ರಜ್ಞೆಯನ್ನೂ ಮೆರೆದಿದ್ದಾರೆ.
'ಇಂದಿನ ಹವಾಮಾನದ ವರದಿ : ಚುನಾವಣೆಗೆ ಮೊದಲೇ ಇಂದು ಗುಜರಾತಿನಲ್ಲಿ ಬಣ್ಣಬಣ್ಣದ ಮಾತುಗಳ ಸುರಿಮಳೆಯಾಗಲಿದೆ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಣ್ಣದ ಮಾತುಗಳನ್ನು ಆಡಿದ್ದಾರಲ್ಲದೆ, ಸೋಮವಾರ ಗುಜರಾತಿನಲ್ಲಿರುವ ಮೋದಿಯವರ ಕಾಲನ್ನು ಎಳೆದಿದ್ದಾರೆ. ಅಚ್ಚರಿಯ ಸಂಗತಿಯೇನೆಂದರೆ, ಆಡಿದ ಮಾತುಗಳಿಗಾಗಿ...
Post date: 16-10-1717

ER NEWS

Subject ಫುಟ್ಬಾಲ್ ಪಂದ್ಯಾಟದಲ್ಲಿ ಒಬ್ಬರಿಗೊಬ್ಬರು ಡಿಕ್ಕಿ; ಗೋಲ್ ಕೀಪರ್ ಸಾವು!

ಲಾಮೋಂಗಾನ್ ಫೂಟ್ ಬಾಲ್ ಕ್ಲಬ್ ಹಾಗೂ ಸೆಮೆನ್ ಪಡಾಂಗ್ ನಡುವಿನ ಪಂದ್ಯಾಟದ ಸಂದರ್ಭದಲ್ಲಿ ಗೋಲ್ ಅನ್ನು ತಡೆಯುವಾಗ ತಮ್ಮದೇ ತಂಡದ ಸಹ ಆಟಗಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಇಂಡೋನೇಷ್ಯಾದ ಗೋಲ್ ಕೀಪರ್ ಕೋಯಿರುಲ್ ಹುಡಾ(38) ಸಾವನ್ನಪ್ಪಿರುವ ಆಘಾತಕಾರಿ ಸೋಮವಾರ ಘಟನೆ ನಡೆದಿದೆ.

ಹುಡಾ ಇಂಡೋನೇಷ್ಯಾ ಫುಟ್ಬಾಲ್ ಪಂದ್ಯದ ದಂತಕಥೆಯಾಗಿದ್ದರು, ಲಾಮೋಂಗಾನ್ ತಂಡದಲ್ಲಿ ಕೋಯಿರುಲ್ ಸುಮಾರು 500ಕ್ಕೂ ಅಧಿಕ ಫುಟ್ಬಾಲ್ ಪಂದ್ಯದಲ್ಲಿ ಆಟವಾಡಿದ್ದರು.

ಪಂದ್ಯದ ವೇಳೆ ಎದುರಾಳಿ ಆಟಗಾರ ಗೋಲ್ ಹೊಡೆಯುವುದನ್ನು ಹಿಡಿಯಲು ಹುಡಾ ಮುಂದಾಗಿದ್ದಾರೆ. ಈ ವೇಳೆ ಡಿಫೆಂಡರ್ ರಾಮನ್ ರೊಡ್ರಿಗಸ್ ಸಹ ಚೆಂಡನ್ನು ತಡೆಯಲು...
Post date: 16-10-1717

Pages