News

E.g., 14/06/2021
ER NEWS

Subject ಒಂದರಿಂದ ಹತ್ತನೇ ತರಗತಿವರೆಗೂ ಕಡ್ಡಾಯ ಕನ್ನಡ

ಒಂದರಿಂದ ಹತ್ತನೇ ತರಗತಿವರೆಗೆ ಶಾಲೆಗಳಲ್ಲಿ ಕಡ್ಡಾಯ ಕನ್ನಡ ಬೋಧಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದನ್ವಯ ರಾಜ್ಯದ ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕಿದೆ. ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರಾಜ್ಯದ ಪಠ್ಯಕ್ರಮ ಬೋಧಿಸುವ ಆಂಗ್ಲ ಮಾಧ್ಯಮ ಶಾಲೆಗಳು ಸಹ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕಿದೆ.


Post date: 17-10-1717
ER NEWS

Subject ಯಾವುದೇ ಅರ್ಜಿ ಭರ್ತಿ ಮಾಡಿದರೂ, ಇದು ಮೋದಿಯ ಕೆಲಸ. ನಿಮ್ಮ ಬ್ಯಾಂಕ್‌ ಖಾತೆಯ ವಿವರ ಕೇಳಿಕೊಂಡು ಅವನು ಬರುತ್ತಾನೆ ಎಂದು ವ್ಯಾಪಾರಸ್ಥರನ್ನು ಪ್ರಚೋದಿಸಲಾಗುತ್ತಿದೆ’ ಮೋದಿ

ಜಿಎಸ್‌ಟಿ ನಿರ್ಧಾರವನ್ನು ಮೋದಿ ಒಬ್ಬನೇ ತೆಗೆದುಕೊಂಡಿದ್ದಲ್ಲ. ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ರಾಜ್ಯಗಳ ತಂಡವೇ ಅದನ್ನು ನಿರ್ವಹಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗಾಂಧಿನಗರದಲ್ಲಿ ಸೋಮವಾರ ಮಾತನಾಡಿದ ಅವರು,‘ಜಿಎಸ್‌ಟಿಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರದಲ್ಲಿ ಕಾಂಗ್ರೆಸ್‌ ಕೂಡ ಸಮಾನ ಪಾಲುದಾರ. ಈ ಬಗ್ಗೆ ಸುಳ್ಳು ಹರಡಬಾರದು’ ಎಂದು ಹೇಳಿದರು.

‘ಯಾವುದೇ ಅರ್ಜಿ ಭರ್ತಿ ಮಾಡಿದರೂ, ಇದು ಮೋದಿಯ ಕೆಲಸ. ನಿಮ್ಮ ಬ್ಯಾಂಕ್‌ ಖಾತೆಯ ವಿವರ ಕೇಳಿಕೊಂಡು ಅವನು ಬರುತ್ತಾನೆ ಎಂದು ವ್ಯಾಪಾರಸ್ಥರನ್ನು ಪ್ರಚೋದಿಸಲಾಗುತ್ತಿದೆ’ ಎಂದು...
Post date: 17-10-1717

ER NEWS

Subject ದಿನ ಭವಿಷ್ಯ: 17 ಅಕ್ಟೋಬರ್‌ 2017

ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮನ್ನು ಮಾತನಾಡಿಸಿ ತಪ್ಪು ಹುಡುಕುವ ಜನರಿಂದ ಈದಿನ ಎಚ್ಚರದಿಂದಿರಿ. ಮೂರ್ಖರ ಜತೆ ವಾದ ಮಾಡಿ ಪ್ರಯೋಜನವಿಲ್ಲ. ಆದಷ್ಟು ಈದಿನ ಮೌನವಾಗಿದ್ದು ಗಣಪತಿಯ ಆರಾಧನೆ ಮಾಡಿರಿ.

ವೃಷಭ:- ಹಿರಿಯರ ಆಶೀರ್ವಾದದಿಂದ ಈದಿನ ನಿಮ್ಮ ಕಾರ್ಯಗಳು ಕೈಗೂಡುವವು. ಹೀಗಾಗಿ ಹಿರಿಯರ ಸಹಾಯವನ್ನು ಕಡೆಗಣಿಸದಿರಿ. ನಿಮಗೆ ಇರದ ಅನುಭವಗಳ ಭಂಡಾರ ಹಿರಿಯರಿಂದ ಇಂದು ನಿಮಗೆ ಲಭ್ಯವಾಗಲಿದೆ.

ಮಿಥುನ:- ಕುಟುಂಬ ಕಲಹದಿಂದ ಮನಸ್ಸಿಗೆ ಅಶಾಂತಿ ಉಂಟಾಗುವುದು. ಹಿರಿಯರ ಮಧ್ಯಸ್ಥಿಕೆಯಿಂದ ಕಲಹ ಶಮನಗೊಳ್ಳುವುದು. ಪತಿ-ಪತ್ನಿಯರು ಈದಿನ ಶಿವನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿರಿ.

ಕಟಕ:-...
Post date: 17-10-1717

ER NEWS

Subject ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಅಗ್ನಿ ಅವಘಡ

ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಮುಂಜಾನೆ 3 ಗಂಟೆ 30 ನಿಮಿಷದ ಸುಮಾರಿಗೆ ಪ್ರಧಾನ ಮಂತ್ರಿ ಕಾರ್ಯಾಲಯದ ಕೊಠಡಿ ಸಂಖ್ಯೆ 242ರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ 10 ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಪ್ರಧಾನಿ ಕಾರ್ಯಾಲಯದತ್ತ ಧಾವಿಸಿದ್ದವು.

ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ 20 ನಿಮಿಷಗಳಲ್ಲೇ ಪರಿಸ್ಥಿತಿಯನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿವೆ. ಹೀಗಾಗಿ ಯಾವುದೇ ದೊಡ್ಡ ಮಟ್ಟದ ಹಾನಿ ನಡೆದಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ.


Post date: 17-10-1717
ER NEWS

Subject ಪ್ರತಿ ಕ್ಷೇತ್ರದಿಂದ 5 ಹೆಸರು ಕೇಳಿರುವ ಅಮಿತ್‌ ಷಾ

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಕೂಲವಾಗುವಂತೆ ಪ್ರತಿ ಕ್ಷೇತ್ರದಿಂದಲೂ ತಲಾ ಐವರು ಸಂಭವನೀಯರ ಹೆಸರು ಕಳುಹಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸೂಚಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಮೊದಲು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮುಖಂಡರಾದ ಈಶ್ವರಪ್ಪ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ‘ಕರ್ನಾಟಕ ಪರಿವರ್ತನೆ ರಥ ಯಾತ್ರೆ’ ಮುಗಿದ ಬಳಿಕ ಪ್ರತಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ಕಳುಹಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಕ್ಷೇತ್ರದಲ್ಲಿ ಜನರ...
Post date: 17-10-1717

ER NEWS

Subject ತಲಕಾವೇರಿಯಲ್ಲಿ ತೀರ್ಥೋದ್ಭವ

ಕರ್ನಾಟಕ ಜೀವನದಿಗಳಲ್ಲಿ ಒಂದಾದ ಕಾವೇರಿ ನದಿಯ ತೀಥೋದ್ಭವ ಮಂಗಳವಾರ ಆಗಲಿದೆ.ಪವಿತ್ರ ಕುಂಡಿಕೆಯಿಂದ ತೀರ್ಥವಾಗಿ ಬರಲಿರುವ ಕಾವೇರಿ ನದಿಯ ದರ್ಶನಕ್ಕೆ ಈಗಾಗಲೇ ಲಕ್ಷಾಂತರ ಭಕ್ತರು ಕಾತರರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ 12.33 ಸಮಯಕ್ಕೆ ತುಲಾ ಸಂಕ್ರಮನ ಮುಹೂರ್ತದಲ್ಲಿ ತೀರ್ಥೋದ್ಭವವಾಗಲಿದೆ.

ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.ಬೆಂಗಳೂರು, ತಮಿಳುನಾಡು, ಕೇರಳ ಹಾಗೂ ಇತರೆ ಕಡೆಗಳಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಪೊಲೀಸ್‌ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇತರೆ...
Post date: 16-10-1717

ER NEWS

Subject ಕೇಂದ್ರ ಸರ್ಕಾರದ ಪರ ಶೇ.85 ರಷ್ಟು ಜನತೆಗೆ ವಿಶ್ವಾಸ, ಶೇ.27 ರಷ್ಟು ಮಂದಿಗೆ ಬೇಕಂತೆ ಮತ್ತಷ್ಟು ದೃಢ ನಾಯಕತ್ವ: ಪ್ಯೂ ಸಮೀಕ್ಷೆ

ಕೇಂದ್ರ ಸರ್ಕಾರದ ಪರ ಶೇ.85 ರಷ್ಟು ಜನತೆ ನಂಬಿಕೆ ಹೊಂದಿದ್ದು, ಶೇ.27 ರಷ್ಟು ಮಂದಿ ದೇಶಕ್ಕೆ ಮತ್ತಷ್ಟು ದೃಢ ನಾಯಕ್ವ ಬೇಕೆಂದು ಪ್ಯೂ ಸಮೀಕ್ಷೆಯ ವರದಿ ಹೇಳಿದೆ. 2012 ರಿಂದ ದೇಶದ ಆರ್ಥಿಕತೆ ಸರಾಸರಿ ಶೇ.6.9 ರಷ್ಟು ಬೆಳೆದಿದ್ದು, ಶೇ.85 ರಷ್ಟು ಜನತೆ ಕೇಂದ್ರ ಸರ್ಕಾರದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಅಚ್ಚರಿಯೆಂದರೆ ದೇಶದಲ್ಲಿ ಮಿಲಿಟರಿ ಆಡಳಿತ, ಸರ್ವಾಧಿಕಾರತ್ವಕ್ಕೂ ಭಾರಿ ಬೆಂಬಲ ವ್ಯಕ್ತವಾಗಿದೆ ಎಂಬ ಅಂಶ ಸಮೀಕ್ಷೆ ವರದಿಯಲ್ಲಿ ದಾಖಲಾಗಿದೆ.

ಆಡಳಿತ ಹಾಗೂ ನಂಬಿಕೆಗೆ ಸಂಬಂಧಿಸಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆದಿದ್ದು, ಶೇ.55 ರಷ್ಟು ಭಾರತೀಯರು ಒಂದಲ್ಲಾ ಒಂದು ರೀತಿಯಲ್ಲಿ ನಿರಂಕುಶ...
Post date: 17-10-1717

ER NEWS

Subject 11 ತಿಂಗಳಿಗೆ ರೆಂಟ್ ಅಗ್ರಿಮೆಂಟ್ ಮಾಡಲು ಕಾರಣವೇನು ಗೊತ್ತಾ?

ಬಾಡಿಗೆ ಮನೆ ಮಾಡಲು ನೀವು ರೆಂಟಲ್ ಅಗ್ರಿಮೆಂಟ್ ಗೆ ಸಹಿ ಹಾಕಲೇಬೇಕು. ಆದ್ರೆ ಸಾಮಾನ್ಯವಾಗಿ ಮನೆ ಮಾಲೀಕರೆಲ್ಲ 11 ತಿಂಗಳ ಒಪ್ಪಂದ ಮಾಡಿಕೊಳ್ತಾರೆ. ಕೇವಲ 11 ತಿಂಗಳ ರೆಂಟಲ್ ಅಗ್ರಿಮೆಂಟ್ ಮಾಡಿಕೊಳ್ಳೋದು ಯಾಕೆ ಅನ್ನೋದು ಮನೆ ಮಾಲೀಕರಿಗಾಗ್ಲಿ, ಬಾಡಿಗೆದಾರರಿಗಾಗ್ಲಿ ಅಥವಾ ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೂ ಗೊತ್ತಿಲ್ಲ. ಮನೆ ಮಾಲೀಕ ಹಾಗೂ ಬಾಡಿಗೆದಾರನ ನಡುವಣ ಒಪ್ಪಂದ ಇದು. ಅಗ್ರಿಮೆಂಟ್ ನಲ್ಲಿ ಕೆಲವೊಂದು ಟರ್ಮ್ಸ್ & ಕಂಡಿಷನ್ಸ್ ಇರುತ್ತವೆ. ಪ್ರಾಪರ್ಟಿ ಅಡ್ರೆಸ್, ಟೈಪ್, ಸೈಜ್ ಗಳ ಬಗ್ಗೆ ಮಾಹಿತಿ ಇರುತ್ತದೆ. ತಿಂಗಳ ಬಾಡಿಗೆ, ಸೆಕ್ಯೂರಿಟಿ ಡೆಪಾಸಿಟ್ ವಿವರವೂ ಇರುತ್ತದೆ.

ಅಷ್ಟಕ್ಕೂ ರೆಂಟಲ್...
Post date: 17-10-1717

ER NEWS

Subject 'ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ 27.29 ಲಕ್ಷ ಜನರಿಗೆ ಸಾಲ'

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ ಈವರೆಗೆ 27.29 ಲಕ್ಷ ಜನರಿಗೆ ಸಾಲ ನೀಡಲಾಗಿದ್ದು, ಮುದ್ರಾ ಯೋಜನೆಯಲ್ಲಿ ಕರ್ನಾಟಕಕ್ಕೆ ನಂಬರ್ 1 ಸ್ಥಾನ ಲಭಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮುದ್ರಾ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರರು, 'ಕಳೆದ 70 ವರ್ಷಗಳ ಇತಿಹಾಸದಲ್ಲಿ ಮುದ್ರಾ ಯೋಜನೆ ದೇಶದ ಅತಿದೊಡ್ಡ ಸಾಲ ವಿತರಣಾ ಯೋಜನೆಯಾಗಿದ್ದು, ದೇಶದಾದ್ಯಂತ ಈವರೆಗೆ ಒಟ್ಟು 8.4 ಕೋಟಿ ಜನರು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು...
Post date: 16-10-1717

Pages