News

E.g., 14/06/2021
ER NEWS

Subject ದಿಗ್ವಿಜಯ್ ಸಿಂಗ್ ಅಳಿಯ 1.15 ಕೋಟಿ ಲಂಚ ಪಡೆದಿದ್ದಾರೆ: ಬಾಬುರಾವ್ ಚೌಹಾಣ್

ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಚೌಹಾಣ್ ಇಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ಪ್ರೆಸ್ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ ರಾಜಸ್ತಾನದ ಜಯಪುರ ಮೂಲದವರು. ಬೆಂಗಳೂರಿನ ಜೆ.ಪಿ.ನಗರದ ಬಾಲಾಜಿ ಎಲೆಕ್ಟ್ರಿಕ್ಸ್ ಮಾಲೀಕ ಕೆ. ಚಂದ್ರಬಾಬುಗೆ ರಾಜ್ಯ ಸರ್ಕಾರ ವಿದ್ಯುತ್ ಗುತ್ತಿಗೆಯೊಂದನ್ನು ಟೆಂಡರ್ ಮುಖಾಂತರ ಕೊಡಿಸುವುದಾಗಿ ವಂಚಿಸಿ, 1.15 ಕೋಟಿ ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚೆಕ್...
Post date: 17-10-1717

ER NEWS

Subject ಬಿಜೆಪಿಗೆ ಸೇರುವ ಯೋಗೇಶ್ವರ್ ಮದ್ದೂರಲ್ಲಿ ಸ್ಪರ್ಧೆ ಬಹುತೇಕ ಖಚಿತ

ಬಿಜೆಪಿಯಲ್ಲಿದ್ದು, ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಪಿ. ಯೋಗೇಶ್ವರ್ ಇದೀಗ ಕಾಂಗ್ರೆಸ್ ತೊರೆದಿದ್ದು ಬಿಜೆಪಿಗೆ ಸೇರ್ಪಡೆಯಾಗಿ ಚನ್ನಪಟ್ಟಣ ಕ್ಷೇತ್ರ ಬಿಟ್ಟು ಮದ್ದೂರಲ್ಲಿ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯಿಂದ ಬೇಸತ್ತು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳುವ ಸಿ.ಪಿ. ಯೋಗೇಶ್ವರ್ ಸದ್ಯ ನಾನು ಯಾವ ಪಕ್ಷಕ್ಕೆ ಸೇರಬೇಕು ಎನ್ನುವುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳುತ್ತಿದ್ದಾರೆಯಾದರೂ ಅವರು ಈಗಾಗಲೇ ಬಿಜೆಪಿಯತ್ತ ಮನಸ್ಸು ಮಾಡಿದ್ದು...
Post date: 17-10-1717

ER NEWS

Subject ಬ್ರೇಕಿಂಗ್ ನ್ಯೂಸ್: ಬಿಜೆಪಿ ಸೇರಲ್ಲ, ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

ಸಚಿವ ಪ್ರಮೋದ್ ಮಧ್ವರಾಜ್ ಅವರು ಇತ್ತೀಚಿನ ದಿನಗಳಲಿಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗೆ ತೆರೆ ಬಿದ್ದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಧ್ವರಾಜ್ ಯಾವ ಕಾರಣಕ್ಕೂ ಬಿಜೆಪಿ ಸೇರಲ್ಲ ಅಲ್ಲದೆ ಇದುವರೆಗೆ ಅಮಿತ್ ಶಾ ಮುಖ ಸಹ ನೋಡಿಲ್ಲ ಎಂದು ಉಡುಪಿಯಲ್ಲಿ ElectReps ನ ಮೂಲಗಳಿಗೆ ತಿಳಿಸಿದ್ದಾರೆ. ತಾವು ಕಾಂಗ್ರೆಸ್ ನಲ್ಲೆ ಮುಂದುವರಿಯುವದಾಗಿಯೂ ಸ್ಪಷ್ಟಪಡಿಸಿದ್ದಾರೆ . ನಿನ್ನೆ ಕೇಂದ್ರ ಸಚಿವ ಅನಂತ ಕುಮಾರ್ ಬ್ರಹ್ಮಾವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವ ಮಧರಾಜ್ ಭೇಟಿಯಾಗಿದ್ದ ಫೋಟೋ ElectReps ನಲ್ಲಿ ಪ್ರಕಟವಾಗಿತ್ತು ಅಲ್ಲದೆ ಪ್ರಮೋದ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ...
Post date: 17-10-1717

ER NEWS

Subject ಉಸ್ತುವಾರಿ ವೇಣುಗೋಪಾಲ್ ಎದುರಲ್ಲೇ ಕಾಂಗ್ರೆಸ್ ಮುಖಂಡರ ಗಲಾಟೆ

ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರ ನಡುವೆ ವಾಕ್ಸಮರ ನಡೆದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಉಸ್ತುವಾರಿ ಸಚಿವ ಹೆಚ್. ಆಂಜನೇಯ ಅವರ ಸಮ್ಮುಖದಲ್ಲೇ ಪಕ್ಷದ ಮುಖಂಡರು ಗಲಾಟೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗದ ವೀರಸೌಧದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾರಂಭದಲ್ಲಿ ವೇಣುಗೋಪಾಲ್ ಮಾತನಾಡುವಾಗ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ. ಸರ್ದಾರ್ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇದಕ್ಕೆ ಅಲ್ಲಿದ್ದ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಆರ್. ಮಂಜುನಾಥ್...
Post date: 17-10-1717

ER NEWS

Subject ಉತ್ತರ ಪ್ರದೇಶದ "ಮರ್ಯಾದಾ ಮನೆ"ಗೆ ಪ್ರಧಾನಿ ಮೋದಿ ಶ್ಲಾಘನೆ

ಬಿಜೆಪಿ ಸರಕಾರದ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಉತ್ತರ ಪ್ರದೇಶದಲ್ಲಿ "ಮರ್ಯಾದಾ ಮನೆ' ಎಂಬ ಹೆಸರಿನಲ್ಲಿ ಶೌಚಾಲಯ ನಿರ್ಮಾಣವಾಗುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಬಹುವಾಗಿ ಪ್ರಶಂಸಿಸಿದ್ದಾರೆ.ಉತ್ತರ ಪ್ರದೇಶ ಸರಕಾರ ಶೌಚಾಲಯ ನಿರ್ಮಾಣಕ್ಕೆ "ಇಜ್ಜತ್‌ ಘರ್‌' (ಮರ್ಯಾದಾ ಮನೆ) ಎಂಬ ಹೆಸರು ಕೊಟ್ಟಿರುವುದನ್ನು ಮೋದಿ "ಒಂದು ವಿಭಿನ್ನ ಹಾಗೂ ಅನನ್ಯ ಆಲೋಚನೆ' ಎಂದು ಹೇಳಿದರು.

ಭಾರತೀಯ ಮಹಿಳೆಯ ಘನತೆ, ಗೌರವಗಳನ್ನು ಎತ್ತಿ ಹಿಡಿಯುವುದರ ಸಂಕೇತವಾಗಿ "ಮಾರ್ಯಾದಾ ಮನೆ'' - "ಇಜ್ಜತ್‌ ಘರ್‌''ಎಂಬ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಉತ್ತರ ಪ್ರದೇಶ ಸರಕಾರ ಶೌಚಾಲಯಗಳ ನಿರ್ಮಾಣಕ್ಕೆ ತೊಡಗಿರುವುದು...
Post date: 17-10-1717

ER NEWS

Subject ರಾಹುಲ್‌ ಮುಂದಿನ ಪ್ರಧಾನಿ ನಿಶ್ಚಿತ: ವೇಣುಗೋಪಾಲ್‌

ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಪಾಠ ಕಲಿಸಲಿದ್ದು, ರಾಹುಲ್‌ಗಾಂಧಿ ದೇಶದ ಪ್ರಧಾನಮಂತ್ರಿ ಆಗುವುದು ನಿಶ್ಚಿತ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬೂತ್ ಕಮಿಟಿ ಅಧ್ಯಕ್ಷರ, ಪದಾಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು

ಕಾಂಗ್ರೆಸ್‌ನಲ್ಲಿ ರಾಹುಲ್‌ಗಾಂಧಿಗೆ ಪಟ್ಟ ಕಟ್ಟಲು ಸಿದ್ಧತೆ ನಡೆದಿರುವ ಹೊತ್ತಲ್ಲಿಯೇ ವೇಣುಗೋಪಾಲ್ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ಆಡಳಿತದ ಬಗ್ಗೆ ಜನಕ್ಕೆ ಸದಾಭಿಪ್ರಾಯ ಇಲ್ಲ. ಅಚ್ಛೇದಿನ್ ಎಂಬುದು ಅಂಬಾನಿ, ಅದಾನಿ, ಜೈಶ್‌ಗೆ ಮಾತ್ರ...
Post date: 17-10-1717

ER NEWS

Subject ಶ್ರೀಶಾಂತ್‌ ಕನಸು ಭಗ್ನ; ಬಿಸಿಸಿಐ ಆಜೀವ ನಿಷೇಧ ಎತ್ತಿ ಹಿಡಿದ ಹೈಕೋರ್ಟ್

ಈ ವರ್ಷದ ಆಗಸ್ಟ್‌ನಲ್ಲಿ ಏಕ ಸದಸ್ಯ ನ್ಯಾಯಪೀಠವು ಎಸ್. ಶ್ರೀಶಾಂತ್ ಪರ ನೀಡಿರುವ ತೀರ್ಪಿನ ವಿರುದ್ಧವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿರುವ ಮನವಿಯನ್ನು ಪುರಸ್ಕರಿಸಿರುವ ಕೇರಳ ಹೈಕೋರ್ಟ್‌, ಈ ಬಲಗೈ ವೇಗಿ ಮೇಲಿನ ಆಜೀವ ನಿಷೇಧವನ್ನು ಎತ್ತಿ ಹಿಡಿದಿದೆ.
ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಈ ಹಿಂದೆ ಆಗಸ್ಟ್‌ನಲ್ಲಿ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಆದರೆ ಬಿಸಿಸಿಐ ಮಾತ್ರ ನಿಷೇಧ ಹಿಂಪಡೆಯಲು ನಿರಾಕರಿಸಿತ್ತಲ್ಲದೆ ತೀರ್ಪು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು.

ಮುಖ್ಯ ನ್ಯಾಯಮೂರ್ತಿ ನವ್‌ನೀತಿ...
Post date: 17-10-1717

ER NEWS

Subject ಮನ್ ಕಿ ಬಾತ್' ಬದಲಾಗಿ ಸಿಎಂ ಸಿದ್ದರಾಮಯ್ಯ ನವರಿಂದ 'ಲೂಟ್ ಕೀ ಬಾತ್; ಯಡಿಯೂರಪ್ಪ

ಬಡವರೊಂದಿಗೆ ಚೆಲ್ಲಾಟವಾಡುತ್ತಿರುವ ಸಿಎಂ ಆಧುನಿಕ ಭಸ್ಮಾಸುರ. ರಾಜ್ಯ ಪ್ರವಾಸ ಮಾಡುವ ವೇಳೆ ಈ ಸರಕಾರದ ಬಣ್ಣ ಬಯಲು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಹಿರಿಯೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಬದಲಾಗಿ ಸಿಎಂ ಸಿದ್ದರಾಮಯ್ಯ 'ಲೂಟ್ ಕೀ ಬಾತ್' ಮಾಡುತ್ತಿದ್ದಾರೆ. ಪ್ರಧಾನಿಯನ್ನು ಟೀಕೆ ಮಾಡಿದರೆ ನಾನು ದೊಡ್ಡವನಾಗುತ್ತೇನೆ ಅನ್ನೋ ಭ್ರಮೆಯಲ್ಲಿ ಸಿಎಂ ಇದ್ದಾರೆ. ಬಿಬಿಎಂಪಿನಲ್ಲಿನ ಕಾರ್ನರ್ ನಿವೇಶನಗಳನ್ನು ಅಡ ಇಟ್ಟು ಸಾವಿರ ಕೋಟಿ ಪಡೆದಿದ್ದಾರೆ. ಅದೂ ಸಾಲದು ಅಂತ ಮತ್ತೆ ಎಂಟುನೂರು ಕೋಟಿ ಪಡೆಯಲು ನೋಟಿಸ್ ಕೊಡುವ ಮೂಲಕ ಸರಕಾರದ ಖಜಾನೆ...
Post date: 17-10-1717

ER NEWS

Subject ದೇಶದ ಪರಂಪರೆ, ಇತಿಹಾಸದ ಬಗ್ಗೆ ಹೆಮ್ಮೆಪಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕನಿಗೆ ಮೋದಿ ಪ್ರತ್ಯುತ್ತರ

ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲ, ಇದನ್ನು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂಬ ಬಿಜೆಪಿ ಶಾಸಕನ ಸಂಗೀತ್ ಸೋಮ್ ಹೇಳಿಕೆಯನ್ನು ಉಲ್ಲೇಖಿಸುತ್ತಾ, ದೇಶದ ಹೆಮ್ಮೆಯನ್ನು ಹೆಚ್ಚಿಸುವ ಪರಂಪರೆಯನ್ನು, ಇತಿಹಾಸವನ್ನು ಬಿಟ್ಟು ದೇಶ ಇರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಮ್ಮ ಪರಂಪರೆ, ಇತಿಹಾಸದ ಬಗ್ಗೆ ಹೆಮ್ಮೆ ಪಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಕಾಲಕ್ರಮೇಣ ನಾವು ನಮ್ಮತನವನ್ನು, ಸ್ವತಂತಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಪ್ರದಾನಿ ಮೋದಿ ಹೇಳಿದ್ದಾರೆ. ಷಹಜಹಾನ್'ನನ್ನು ಭಾರತದ...
Post date: 17-10-1717

Pages