News

E.g., 15/06/2021
ER NEWS

Subject ಹಿಮಾಚಲ, ಗುಜರಾತ್ ಖರ್ಚಿಗೆ ರಾಜ್ಯದಲ್ಲಿ ಲೂಟಿ

ಮುಂದಿನ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗೆ ಹಣ ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಿಂದ ಹಣ ಲೂಟಿ ಮಾಡುತ್ತಿದ್ದು, ಕರ್ನಾಟಕ ಇವರ ಪಾಲಿಗೆ ಹುಲ್ಲುಗಾವಲಿನಂತಾಗಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ರಾಜ್ಯ ಸರ್ಕಾರವು ಬೊಕ್ಕಸವನ್ನು ಖಾಲಿ ಮಾಡಿದೆ ಎಂದು ಆಪಾದಿಸಿದರು. ರಾಜಕಾಲುವೆ ಹೂಳೆತ್ತಲು ನಿಗದಿಪಡಿಸಿದ ದರಕ್ಕಿಂತ ಶೇ.22ಕ್ಕಿಂತ ಹೆಚ್ಚಿನ ದರಕ್ಕೆ ಕಾಮಗಾರಿ ನೀಡಲಾಗಿದೆ....
Post date: 18-10-1717

ER NEWS

Subject ಕೌಟುಂಬಿಕ ಹಿಂಸೆ: ಯುವರಾಜ್‌, ತಾಯಿ ವಿರುದ್ಧ ಅತ್ತಿಗೆ ಕೇಸ್‌

ಭಾರತೀಯ ಕ್ರಿಕೆಟ್‌ನ ಖ್ಯಾತ ಆಲ್‌ ರೌಂಡರ್‌ ಯುವರಾಜ್‌ ಸಿಂಗ್‌, ಆತನ ಸಹೋದರ ಜೋರಾವರ್‌ ಸಿಂಗ್‌ ಮತ್ತು ತಾಯಿ ಶಬ್ನಂ ಸಿಂಗ್‌ ವಿರುದ್ಧ ಜೋರಾವರ್‌ ಪತ್ನಿ ಹಾಗೂ ಬಿಗ್‌ ಬಾಸ್‌ 10ನೇ ಆವೃತ್ತಿಯ ಸ್ಪರ್ಧಿಯಾಗಿರುವ ಆಕಾಂಕ್ಷಾ ಸಿಂಗ್‌ ಕೌಟುಂಬಿಕ ಹಿಂಸೆಯ ಕೇಸನ್ನು ದಾಖಲಿಸಿದ್ದಾರೆ.
ಈ ಕೇಸಿನ ಮೊದಲ ವಿಚಾರಣೆಯನ್ನು ಇದೇ ಅ.21ಕ್ಕೆ ನಿಗದಿಸಲಾಗಿದೆ. ಈ ಕೇಸಿನ ಬಗ್ಗೆ ಯಾವುದೇ ಹೇಳಿಕೆಯನ್ನು ತಾನು ನೀಡೆನೆಂದು ಆಕಾಂಕ್ಷಾ ಹೇಳಿದ್ದಾರೆ. ಆದರೆ ಆಕೆಯ ವಕೀಲೆ ಸ್ವಾತಿ ಸಿಂಗ್‌, ಕೇಸು ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ.

ಕೇಸಿನ ಬಗ್ಗೆ ವಕೀಲೆ ಸ್ವಾತಿ ಸಿಂಗ್‌ ಹೀಗೆ ಹೇಳಿದ್ದಾರೆ :

"...
Post date: 18-10-1717

ER NEWS

Subject ದೀಪ ಬೆಳಗಿ ದೀಪಾವಳಿ ಆಚರಿಸಿದ ಟ್ರಂಪ್‌, ಪುತ್ರಿ ಇವಾಂಕಾ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶ್ವೇತಭವನದಲ್ಲಿ ಭಾರತೀಯ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ್ದಾರೆ. ಟ್ರಂಪ್‌ ಹಾಗೂ ಅವರ ಪುತ್ರಿ ಇವಾಂಕಾ ಅವರು ದೀಪ ಬೆಳಗಿಸಿ, ಅಜ್ಞಾನದ ಕತ್ತಲನ್ನು ದೂರ ಮಾಡುವ ಬೆಳಕಿನ ಹಬ್ಬ ದೀಪಾವಳಿಗೆ ಸಡಗರದ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನೆರೆದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಉದ್ಯಮ ಮತ್ತು ಶಿಕ್ಷಣವೇ ಮುಂತಾಗಿ ಹಲವಾರು ಕ್ಷೇತ್ರಗಳಲ್ಲಿ ಅಸಾಮಾನ್ಯ ಕೊಡುಗೆ ನೀಡುತ್ತಿರುವ ಮತ್ತು ಅಮೆರಿಕದ ಅಭಿವೃದ್ಧಿಯಲ್ಲಿ ತಮ್ಮ ಯೋಗದಾನ ಸಲ್ಲಿಸುತ್ತಿರುವ ಭಾರತೀಯ ಅಮೆರಿಕನ್ನರ...
Post date: 18-10-1717

ER NEWS

Subject 'ಸಿದ್ದರಾಮಯ್ಯ ಹಿಂದೆ ಬಿಜೆಪಿ ಸೇರಲು ಯತ್ನಿಸಿದ್ದರು'

ಸಿಎಂ ಸಿದ್ದರಾಮಯ್ಯ ಜೆಡಿಎಸ್ ತೊರೆದ ನಂತರ ಕಾಂಗ್ರೆಸ್ ಸೇರುವ ಬದಲು ಬಿಜೆಪಿಗೆ ಸೇರುವ ಪ್ರಯತ್ನ ನಡೆಸಿದ್ದರು ಎಂಬ ಅಂಶವನ್ನು ಕುಮಾರಸ್ವಾಮಿ ಬಹಿರಂಗಪಡಿಸಿದರು.ಬಿಜೆಪಿ ವರಿಷ್ಠರ ಜತೆ ಮಾತುಕತೆಯೂ ನಡೆದಿತ್ತು. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್'ಗೆ ಹೋದರು ಎಂದರು.
ಸಿದ್ದರಾಮಯ್ಯ ಇದೀಗ ದುರಹಂಕಾರದ ಮಾತುಗಳನ್ನಾಡುತ್ತಿದ್ದು, ದುಡ್ಡಿನ ಮದ ಏರಿದೆ. ಅವರಿಗೆ ಪೊಲೀಸ್ ಜೀಪ್ಗಳಲ್ಲಿ ಹಣ ಸಾಗಿಸುವುದು ಕರಗತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಮತ್ತು ಹುಣಸೂರಿನ ಕ್ಷೇತ್ರದಿಂದ ಎಚ್.ವಿಶ್ವನಾಥ್ ಅವರು ಸ್ಪರ್ಧಿಸುತ್ತಾರೆ. ಮುಖ್ಯಮಂತ್ರಿಗಳು ಬರಲಿ ನೋಡೋಣ ಎಂದು ಸವಾಲು ಹಾಕಿದರು.

...
Post date: 18-10-1717

ER NEWS

Subject ಎಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ರೆಡಿಯಾಗಿದೆ ಹೈಟೆಕ್ ಬಸ್

ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ 2018 ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಹೌದು, ಕುಮಾರಸ್ವಾಮಿ ಅವರು ನವೆಂಬರ್ 1 ರಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿದ್ದು, ಅದಕ್ಕಾಗಿ ಹೈಟೆಕ್ ಬಸ್ ಸಿದ್ದಪಡಿಸಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್ ಬಸ್ ಬಳಕೆಗೆ ಎಚ್.ಡಿಕೆ ಮುಂದಾಗಿದ್ದಾರೆ. ಈ ಬಸ್ ಚೆನ್ನೈನಲ್ಲಿ ಸಿದ್ಧವಾಗಿದೆ.

ಈ ಬಸ್ ಮಿನಿ ಮನೆಯಂತೆಯೇ ಇದ್ದು, ಹೈಡ್ರಾಲಿಕ್ ಬಳಸಿ ಲಿಫ್ಟ್ ಮೂಲಕ ಭಾಷಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಇದರಲ್ಲಿ ಒಂದು ಕೊಡಠಿಯಿದ್ದು, ಪತ್ರೇಕ ಶೌಚಗೃಹವಿದೆ. ಬಸ್ ನಲ್ಲಿ...
Post date: 18-10-1717

ER NEWS

Subject Mamata a 'born rebel'; she humiliated, insulted me, says Pranab Mukherjee

Former President Pranab Mukherjee has described Mamata Banerjee as a "born rebel" and recalled how she once stormed out of a meeting, leaving him feeling "humiliated and insulted".
Noting that there was an aura about her which was "difficult to explain but impossible to ignore", Mukherjee said in his new book 'The Coalition Years' that she had built her career fearlessly and aggressively and was the "outcome of her own struggle".
"Mamata Banerjee is a born rebel," he wrote,...
Post date: 18-10-1717

ER NEWS

Subject ಆರ್‌ಎಸ್‌ಎಸ್ ಮುಖಂಡ ಗೋಸಾಯ್ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಮುಖಂಡ ರವೀಂದರ್ ಗೋಸಾಯ್ ಅವರ ಹತ್ಯೆಯ ಹಂತಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲೂದಿಯಾನದಲ್ಲಿ ನಡೆದ ಆರ್‌ಎಸ್‌ಎಸ್ ಮುಖಂಡ ರವಿಂದರ್ ಗೋಸಾಯ್ ಹತ್ಯೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹಿಂಸೆಯನ್ನು ಒಪ್ಪಲಾಗದು, ಗೋಯಾಸ್ ಹಂತಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಗೋಸಾಯ್ ಅವರನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಲೂದಿಯಾನದ ಕೈಲಾಶ್ ನಗರದಲ್ಲಿ ಅಪರಿಚಿತರು ಬೈಕ್ ನಲ್ಲಿ ಬಂದು ಗೋಸಾಯ್ ಅವರ ಮೇಲೆ...
Post date: 18-10-1717

ER NEWS

Subject ಅಗ್ಗವಾಗಲಿದೆ ಹೋಟೆಲ್ ಊಟ-ತಿಂಡಿ

ಹೋಟೆಲ್ ಗಳ ತೆರಿಗೆ ಭಾರವನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈವರೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು. ಅದನ್ನು ಶೇ.12ಕ್ಕೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಅಷ್ಟೇ ಅಲ್ಲ ಹೋಟೆಲ್ ಗಳಿಗಿದ್ದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವನ್ನೂ ಪಾಪಸ್ ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆ ವಿವಿಧ ರಾಜ್ಯಗಳ ಹಣಕಾಸು ಸಚಿವರನ್ನೊಳಗೊಂಡ ಸಮಿತಿ ಚರ್ಚೆ ನಡೆಸಿದೆ. ಹೊಸ ತೆರಿಗೆ ನೀತಿಯಿಂದ ಹೋಟೆಲ್ ಗಳು ಲಾಭ ಮಾಡಿಕೊಳ್ಳುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ ಅನ್ನೋ ದೂರು ಕೇಳಿಬಂದಿತ್ತು.
1 ಕೋಟಿ ರೂಪಾಯಿ ವಹಿವಾಟು ನಡೆಸುವ ಹೋಟೆಲ್...
Post date: 18-10-1717

ER NEWS

Subject ಮನೆ ಕೆಲಸಗಾರರಿಗೂ ಕನಿಷ್ಠ ವೇತನ, ಸಾಮಾಜಿಕ ಭದ್ರತೆ

ಮನೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುವ ಲಕ್ಷಾಂತರ ಜನರು ಶೀಘ್ರದಲ್ಲಿ ಸಮಾನ ಮತ್ತು ಕನಿಷ್ಠ ವೇತನದ ಹಾಗೂ ಸಾಮಾಜಿಕ ಭದ್ರತೆಯ ಹಕ್ಕನ್ನು ಪಡೆಯಲಿದ್ದಾರೆ. ಜೊತೆಗೆ, ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಪ್ರಯೋಜನ ಪಡೆಯುವ ಮತ್ತು ಬೇರೆ ವರ್ಗದ ಕೆಲಸಗಾರರು/ಕಾರ್ಮಿಕರ ರೀತಿಯಲ್ಲಿ ಒಕ್ಕೂಟ ಅಥವಾ ಸಂಘಟನೆ ರಚಿಸುವ ಹಕ್ಕನ್ನೂ ಅವರು ಪಡೆಯಲಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕ ಕಾನೂನಿನ ಅಡಿಯಲ್ಲಿಯೇ ಈ ಎಲ್ಲ ಅನುಕೂಲಗಳು ಅವರಿಗೆ ಸಿಗಲಿವೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮನೆ ಕೆಲಸಗಾರರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕರಡು ನೀತಿಯನ್ನು ಸಿದ್ಧಪಡಿಸಿದ್ದು, ಇದೇ ನವೆಂಬರ್‌ 16ರ ಒಳಗಾಗಿ...
Post date: 18-10-1717

Pages