News

E.g., 14/06/2021
ER NEWS

Subject ಇಂದಿನ ರಾಶಿ ಭವಿಷ್ಯ: 19 ಅಕ್ಟೋಬರ್ 2017

ಮೇಷ:- ಭಾವನಾತ್ಮಕ ಒತ್ತಡಗಳಿಗೆ ಸಿಲುಕದಿರಿ. ಪ್ರಯತ್ನಶೀಲರಿಗೆ ಜಯವು ದೊರೆಯುವುದು. ಗುರುವಿನ ಕೃಪೆಗಾಗಿ ಪ್ರಾರ್ಥನೆ ಮಾಡಿರಿ. ಈದಿನ ಕಾಲು ಕೆಜಿ ಕಡಲೆಕಾಳನ್ನು ದಾನ ಮಾಡಿರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ವೃಷಭ:- ಇಂದು ನಿಮ್ಮ ಮನಸ್ಸು ನಿರಾಳವಾಗಿರುವುದು. ಅಲ್ಲದೆ ಮನಸ್ಸಿನ ತಾಕಲಾಟಗಳಿಗೆ ಮುಕ್ತಿ ದೊರೆಯುವುದು. ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾಡುವುದು ಉತ್ತಮವಲ್ಲ.

ಮಿಥುನ:- ಅತ್ಯಂತ ವಿವೇಕಶಾಲಿ ಮತ್ತು ಬುದ್ಧಿಶಾಲಿಯಾದ ನಿಮ್ಮ ಇಡೀ ವ್ಯಕ್ತಿತ್ವದ ಒಂದು ದೊಡ್ಡ ಸರಕು. ನಿಮ್ಮ ಪ್ರಾಮಾಣಿಕತನವು ಎಲ್ಲರಿಂದ ಪ್ರಶಂಸೆಗೆ ಒಳಪಡುವುದು. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ...
Post date: 19-10-1717

ER NEWS

Subject ಈ ಬಾರಿಯೂ ಪರಮೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷದವರೇ ಸೋಲಿಸಲಿದ್ದಾರೆ'

ಕಾಂಗ್ರೆಸ್ ತೊರೆದು ಬಿಜೆಪಿಗೆ ಬರುವಂತೆ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಆಹ್ವಾನ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಎಷ್ಟು ಬೇಗ ಪರಮೇಶ್ವರ್ ಕಾಂಗ್ರೆಸ್ ಬಿಡುತ್ತಾರೋ ಅಷ್ಟು ಬೇಗ ಅವರ ಭವಿಷ್ಯ ಉಜ್ವಲವಾಗಲಿದೆ. ಎಂದು ಹೇಳಿದ್ದಾರೆ. ಕಳೆದ ಬಾರಿ ಕೊರಟಗೆರೆಯಲ್ಲಿ ಸೋಲಿಸಿದಂತೆ ಈ ಬಾರಿಯೂ ಪರಮೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷದವರೇ ಸೋಲಿಸಲಿದ್ದಾರೆ. ಪರಮೇಶ್ವರ್ ಅವರನ್ನು ಕಾಂಗ್ರೆಸ್ ಮೂಲೆಗುಂಪು ಮಾಡಲಿದ್ದು, ಅವರು ಬಿಜೆಪಿಗೆ ಬಂದರೆ ಉತ್ತಮ ಸ್ಥಾನ ಸಿಗಲಿದೆ' ಎಂದರು.


Post date: 18-10-1717
ER NEWS

Subject ತಾಜ್ ಮಹಲ್ ಇರುವಲ್ಲಿ ಹಿಂದೆ ಶಿವಾಲಯ ಇತ್ತು: ಬಿಜೆಪಿ ಸಂಸದ

ಆಗ್ರಾದಲ್ಲಿರುವ ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಕಟ್ಟಡ ಇರುವಲ್ಲಿ ಮೊದಲು ಶಿವ ದೇವಾಲಯ ಇತ್ತು; ಮೊಘಲರು ಅದನ್ನು ಧ್ವಂಸಗೈದರು; ಬಳಿಕ ಅಲ್ಲಿ ತಾಜಮಹಲ್ ಕಟ್ಟಲಾಯಿತು ಎಂದು ಬಿಜೆಪಿಯ ಸಂಸದ ವಿನಯ ಕಟಿಯಾರ್ ಹೇಳಿದ್ದಾರೆ ಮತ್ತು ಆ ಮೂಲಕ ತಾಜ್ ಮಹಲ್ ಕುರಿತಾದ ವಿವಾದಗಳಿಗೆ ಹೊಸ ತಿರುವನ್ನು ಕೊಟ್ಟಿದ್ದಾರೆ. ಸಂಸದ ಕಟಿಯಾರ್ ಅವರು 1990ರ ದಶಕದ ಆದಿಯಲ್ಲಿ ನಡೆದಿದ್ದ ಆಯೋಧ್ಯಾ ರಾಮ ಮಂದಿರ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದವರು.

ತಾಜ್ ಮಹಲ್ ಇರುವಲ್ಲಿ ಮೊದಲು ಇದ್ದ ಶಿವ ದೇವಾಲಯ ಮತ್ತು ಶಿವ ಲಿಂಗವನ್ನು ಮೊಘಲರು ನಾಶಪಡಿಸಿದ್ದಲ್ಲದೆ ಹಿಂದೂಗಳ ಹೆಚ್ಚಿನೆಲ್ಲ ಆರಾಧನಾ ಸ್ಥಳಗಳನ್ನು ಕೂಡ...
Post date: 18-10-1717

ER NEWS

Subject ಅಯೋಧ್ಯೆಯಲ್ಲಿ CM ಯೋಗಿ ಅದಿತ್ಯನಾಥ್‌ ಬೃಹತ್‌ ದೀಪೋತ್ಸವ

ಬೆಳಕಿನ ಹಬ್ಬ ದೀಪಾವಳಿಯ ಅತೀ ದೊಡ್ಡ ಅಚರಣೆಯ ರೂಪದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಯೋಧ್ಯೆಯ ಸರಯೂ ನದೀ ತಟದಲ್ಲಿ ಬೃಹತ್‌ ದೀಪೋತ್ಸವವನ್ನು ಆಚರಿಸಿದರು. ದೀಪಾವಳಿಯ ಮುನ್ನಾ ದಿನ ಎರಡು ಸಾವಿರಕ್ಕೂ ಅಧಿಕ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಎರಡು ಲಕ್ಷ ದೀಪಗಳನ್ನು ಉರಿಸಿರುವುದನ್ನು ಗಿನ್ನೆಸ್‌ ವಿಶ್ವ ದಾಖಲೆಯಲ್ಲಿ ಸೇರ್ಪಡೆಗೊಳಿಸಲು ಅಯೋಧ್ಯಾ ನಗರಿ ಈಗ ಕಾತರದಿಂದ ಕಾಯುತ್ತಿದೆ.

ಇಂದು ಬೃಹತ್‌ ದೀಪೋತ್ಸವಕ್ಕೆ ಚಾಲನೆ ನೀಡಲು ಯೋಗಿ ಆದಿತ್ಯನಾಥ್‌ ಅವರು ನಿಗದಿತ ವೇಳೆಗೆ ಒಂದು ತಾಸು ಮುನ್ನವೇ ಅಯೋಧ್ಯಾ ನಗರಿಗೆ ಆಗಮಿಸಿದರು. ವಿಶ್ವ ದಾಖಲೆಯಾಗಿ ದೀಪೋತ್ಸವವನ್ನು...
Post date: 18-10-1717

ER NEWS

Subject ಟ್ರಂಪ್‌ ಎಫೆಕ್ಟ್‌: ಉದ್ಯೋಗಾಂಕ್ಷಿಗಳಿಗೆ ಅಮೆರಿಕಕ್ಕಿಂಗ ಭಾರತದ ಮೇಲೆ ವ್ಯಾಮೋಹ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಾರಿಗೆ ತಂದಿರುವ ವಲಸೆ ನೀತಿಯಿಂದಾಗಿ ಅಮೆರಿಕದಲ್ಲಿ ಕೆಲಸ ಅರಸಿ ಹೋಗುವ ಭಾರತೀಯರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ಭಾರತದ ಮೇಲೆ ಈಗ ವ್ಯಾಮೋಹ ಹೆಚ್ಚಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಬರುವ ಮುನ್ನವೇ ಅಂದರೆ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ 2017ರವರೆಗೆ ಅಮೆರಿಕ್ಕೆ ತೆರಳಲು ಬಯಸಿದ್ದ ಭಾರತೀಯರ ಸಂಖ್ಯೆ ಶೇ 38 ರಿಂದ 42ರಷ್ಟು ಇಳಿಕೆಯಾಗಿದೆ.

ಅಮೆರಿಕದಲ್ಲಿ ಕೆಲಸಕ್ಕಾಗಿ ವಲಸೆ ಹೋಗುವವರ ಸಂಖ್ಯೆ ಈ ಹಿಂದಿನಿಂದಲೂ ಏರಿಕೆಯಾಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಇದರ ಸಂಖ್ಯೆ ಕಡಿಮೆಯಾಗಿದೆ....
Post date: 18-10-1717

ER NEWS

Subject ಮಂಡ್ಯ: ವೈದ್ಯರಿಲ್ಲದೇ ಸರ್ಕಾರಿ ಆಸ್ಪತ್ರೆ ಮುಂದೆ ಗಂಟೆಗಟ್ಟಲೇ ನರಳಾಡಿದ ಗರ್ಭಿಣಿ

ವೈದ್ಯರಿಲ್ಲದ ಕಾರಣ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ 22 ವರ್ಷದ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಗಂಟೆಗೂ ಹೆಚ್ಚು ಕಾಲ ನರಳಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಗರ್ಭಿಣಿ ಮಹಿಳೆಯರನ್ನು ಅವರ ಪೋಷಕರು ಬೆಳಗ್ಗೆ 7.30 ರ ವೇಳೆಗೆ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಆಸ್ಪತ್ರೆ ಮುಚ್ಚಿದ್ದ ಕಾರಣ ಆಸ್ಪತ್ರೆಯ ಮುಂಭಾಗದಲ್ಲೇ ಗರ್ಭಿಣಿ ನರಳಾಡಿದ್ದಾರೆ.

ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್​ ನೀಡುವಂತೆ ಮನವಿ ಮಾಡಿದರೆ, ಆಸ್ಪತ್ರೆ...
Post date: 18-10-1717

ER NEWS

Subject ಅಬ್ಬಾ....ಮೂರೂವರೆ ಗಂಟೆ ಭಾಷಣ ಮಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌

ಚೀನಾ ಆಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅತ್ಯಂತ ಸುಧೀರ್ಘ ಭಾಷಣ ಮಾಡಿದ್ದಾರೆ.ಅದು ಒಂದಲ್ಲ ಎರಡಲ್ಲ, ಮೂರುವರೆ ಗಂಟೆಗಳ ಸುದೀರ್ಘ ಭಾಷಣ. ಕಮ್ಯುನಿಸ್ಟ್‌ ಪಾರ್ಟಿ ಕಾಂಗ್ರೆಸ್‌ನ ಸಮಾವೇಶದಲ್ಲಿ ಕ್ಸಿ ಜಿನ್‌ಪಿಂಗ್‌ ಈ ಭಾಷಣ ಮಾಡಿದರು.

ಚೀನಾ ಮಾಧ್ಯಮಗಳಲ್ಲಿ ಈ ಭಾಷಣವನ್ನು ಪ್ರಸಾರ ಮಾಡಲಾಯಿತು. ಬಹುತೇಕ ಎಲ್ಲರೂ ಈ ಭಾಷಣವನ್ನು ಆಲಿಸಿದರು.

ಗ್ರೇಟ್‌ ಹಾಲ್‌ ಆಫ್‌ ದ ಪೀಪಲ್‌ ಸಭಾಂಗಣದಲ್ಲಿ ಸುಮಾರು 2,300 ಅತಿಥಿಗಳ ಸಮ್ಮುಖದಲ್ಲಿ ಕ್ಸಿ ಜಿನ್‌ಪಿಂಗ್ ಭಾಷಣ ಮಾಡಿದರು. ಮಧ್ಯೆ ಮಧ್ಯೆ ಕೆಲವೊಮ್ಮೆ ಲಘು ಪಾನೀಯ ಸೇವಿಸಿದ್ದು ಬಿಟ್ಟರೆ ಎಲ್ಲೂ ವಿಶ್ರಾಂತಿ ತೆಗೆದುಕೊಳ್ಳದೇ ಮೂರುವರೆ ಗಂಟೆ ಭಾಷಣ ಮಾಡಿದರು....
Post date: 18-10-1717

ER NEWS

Subject ಮುಂದಿನ ಮುಖ್ಯಮಂತ್ರಿಯಾಗಿ ಮಾಜಿ ಸಂಸದೆ, ನಟಿ ರಮ್ಯ!? ಹೀಗೆ ಹೇಳಿದ್ದು ಯಾರು ಗೊತ್ತಾ?

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮುಖ್ಯಮಂತ್ರಿಯಾಗುತ್ತಾರೆ ಹೀಗೆ ಹೇಳಿದ್ದು ಬೇರೆ ಯಾರು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗಳಿಗೆ ಬೇಸತ್ತು ಪಕ್ಷ ತೊರೆದು ಸದ್ಯ ಜೆಡಿಎಸ್ ನಲ್ಲಿರುವ ಎಂದು ಮಾಜಿ ಸಂಸದ ಹೆಚ್. ವಿಶ್ವನಾಥ್. ಕನ್ನಡದ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ತಮ್ಮ ಅಭಿಪ್ರಾಯದಲ್ಲಿ ಹಂಚಿಕೊಂಡಿರುವ ಅವರು ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಮ್ಯ ಅವರು ಮುಖ್ಯಮಂತ್ರಿ ಹುದ್ದೆಗೇರಲು ಅವರಿಗಿರುವ ಅರ್ಹತೆಗಳೇನು ಎನ್ನುವುದನ್ನು ಅವರು ಬಿಡಿಸಿ ಹೇಳಿದ್ದಾರೆ.

ಇದೇ ವೇಳೆ ಅವರು ಸಿದ್ದರಾಮಯ್ಯ ಅಂದುಕೊಂಡಂತೆ ಮತ್ತೆ ಸಿಎಂ ಆಗಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಕಾಂಗ್ರೆಸ್ಗೆ...
Post date: 18-10-1717

ER NEWS

Subject ಹಿಮಾಚಲ, ಗುಜರಾತ್ ಖರ್ಚಿಗೆ ರಾಜ್ಯದಲ್ಲಿ ಲೂಟಿ

ಮುಂದಿನ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗೆ ಹಣ ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಿಂದ ಹಣ ಲೂಟಿ ಮಾಡುತ್ತಿದ್ದು, ಕರ್ನಾಟಕ ಇವರ ಪಾಲಿಗೆ ಹುಲ್ಲುಗಾವಲಿನಂತಾಗಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ರಾಜ್ಯ ಸರ್ಕಾರವು ಬೊಕ್ಕಸವನ್ನು ಖಾಲಿ ಮಾಡಿದೆ ಎಂದು ಆಪಾದಿಸಿದರು. ರಾಜಕಾಲುವೆ ಹೂಳೆತ್ತಲು ನಿಗದಿಪಡಿಸಿದ ದರಕ್ಕಿಂತ ಶೇ.22ಕ್ಕಿಂತ ಹೆಚ್ಚಿನ ದರಕ್ಕೆ ಕಾಮಗಾರಿ ನೀಡಲಾಗಿದೆ....
Post date: 18-10-1717

Pages