News

E.g., 14/06/2021
ER NEWS

Subject ಕಾಂಗ್ರೇಸ್ ತೊರೆದು ಬಿಜೆಪಿ ಸೇರಲಿರುವ ಹಲವು ಕೈ ಶಾಸಕರು

ಕಾಂಗ್ರೆಸ್‍ನ ಹಿರಿಯ ಮುಖಂಡರು ಹಾಗೂ ಶಾಸಕರಾದ ಎ.ಬಿ.ಮಾಲಕ ರೆಡ್ಡಿ ಹಾಗೂ ಮಾಲಿಕಯ್ಯ ಗುತ್ತೇದಾರ್ ಸದ್ಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟ ಪುನಾರಚನೆ ಸಂದರ್ಭದಲ್ಲಿ ಈ ಇಬ್ಬರಿಗೂ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ವಿರುದ್ದ ತೀವ್ರ ಅಸಮಾಧಾನಗೊಂಡಿದ್ದರು.

ಎಐಸಿಸಿ ಮುಖಂಡ ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸದ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಭವಿಷ್ಯ ನೆಲೆ ಕಂಡುಕೊಳ್ಳುವ ದೃಷ್ಟಿಕೋನದ...
Post date: 19-10-1717

ER NEWS

Subject ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪುಷ್ಪಕ ವಿಮಾನದಲ್ಲಿ ಬಂದಿಳಿದ ರಾಮ-ಸೀತೆ!

ಪೌರಾಣಿಕ, ಧಾರ್ಮಿಕ ಪುಸ್ತಕಗಳಲ್ಲಿ ಉಲ್ಲೇಖಿಸಿದ ತ್ರೇತಾ ಯುಗದ ಪುಷ್ಪಕ ವಿಮಾನಕ್ಕೆ ಬಲವಾದ ತಿರುಗುವ ಬ್ಲೇಡ್‌ಗಳು ಇಲ್ಲದಿರಬಹುದು, ಆದರೆ ಉತ್ತರ ಪ್ರದೇಶ ಸರಕಾರ ಅಯೋಧ್ಯೆಯಲ್ಲಿ ದಿವ್ಯಾ ದೀಪಾವಳಿ ಆಚರಿಸಲು ರಚಿಸಿರುವ ಪುಷ್ಪಕ ವಿಮಾನಕ್ಕೆ ಶಕ್ತಿಯುತ ಬ್ಲೇಡ್‌ಗಳಿವೆ.

ಹೌದು, 14 ವರ್ಷಗಳ ವನವಾಸದ ನಂತರ ರಾಮ-ಸೀತೆಯನ್ನು ಲಕ್ಷ್ಮಣನೊಂದಿಗೆ ಆಯೋಧ್ಯೆಗೆ ಮರಳಿ ಕರೆ ತಂದ ಪುಷ್ಪಕ ವಿಮಾನದ ಸಂಕೇತವೆಂಬಂತೆ ಈ ವಿಮಾನವನ್ನು ಸೃಷ್ಟಿಸಲಾಗಿದೆ. ರಾಮ ಕಥಾ ಪಾರ್ಕಿನಲ್ಲಿ ಸೇರಿದ ಸಾವಿರಾರು ಜನರ ಸಮ್ಮುಖದಲ್ಲಿ ಈ ಹೆಲಿಕಾಪ್ಟರ್ ಹಾರಿದ್ದು, ಶ್ರೀ ರಾಮನ ಮಂತ್ರ ಘೋಷಗಳೊಂದಿಗೆ, ಕೆಳಗೆ ಇರುವವವರಿಗೆ ಪುಷ್ಪ ಮಳೆ...
Post date: 19-10-1717

ER NEWS

Subject ಡಿಕೆಶಿ, ಯೋಗೇಶ್ವರ್ ಬ್ರದರ್ಸ್ ನಡುವೆ ಶುರುವಾಯ್ತು ರಂಗೀಲಾ ರಾಜಕಾರಣ

ಇಂಡಿಪೆಂಡೆಂಟ್ ಆಗಿ ಗೆದ್ದು ಕ್ಷೇತ್ರದ ಶಾಸಕರಾದ ಯೋಗೇಶ್ವರ್ ಇದೀಗ ಮತ್ತೆ ಇಂಡಿಪೆಂಡೆಂಟ್ ಆಗಲು ಹೊರಟಿದ್ದಾರಾ? ರಾಜಕಾರಣದಲ್ಲಿ ಶತೃ-ಮಿತ್ರ ಯಾರೂ ಇಲ್ಲ ಎಂಬಂತೆ ಕೈ ಜೋಡಿಸಿ ಇದೀಗ ಅದೇ ಕೈ ಕುಲುಕಾಟವನ್ನು ಕಡೆಗಣಿಸಲಾರಂಭಿಸಿದ್ದಾರಾ? ಮತ್ತೊಂದೆಡೆ ಅದೇ ಯೋಗೇಶ್ವರ್‍ ಅವರ ರಾಜಕೀಯ ಬೆಳವಣಿಗೆಗೆ ಡಿಕೆಶಿ ಸೋದರರು ಕಳೆದ ಹದಿನೆಂಟು ವರ್ಷಗಳಿಂದ ಎಡರು ತೊಡರಾಗಿದ್ದಾರಾ? ಅದೆಲ್ಲವೂ ನಿಗೂಢ. ಆದರೆ ಸತ್ಯವಾಗಿರುವುದು ಬಣ್ಣದ ಬೊಂಬೆಗಳಿಗೆ ಖ್ಯಾತಿ ಪಡೆದಿರುವ ಬೊಂಬೆನಗರಿ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ತಲೆ ಎತ್ತಿರುವ ರಂಗೀಲಾ ಜಕಾರಣವಷ್ಟೆ.
ಯೋಗೇಶ್ವರ್ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೋ ಏನೋ...
Post date: 19-10-1717

ER NEWS

Subject ಪ್ರತ್ಯೇಕ ಧರ್ಮದ ವಿಷಯದಲ್ಲಿ ಪೇಜಾವರ ಶ್ರೀಗಳು ತಲೆ ಹಾಕುವುದು ಬೇಡ : ಸಚಿವ ವಿನಯ್ ಕುಲಕರ್ಣಿ

-ಲಿಂಗಾಯಿತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಉಡುಪಿ ಕೃಷ್ಣ ಮಠದ ಪೇಜಾವರ ಶ್ರೀಗಳು ಪದೇ ಪದೇ ತಲೆ ಹಾಕುವುದು ಬೇಡ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ, ಲಿಂಗಾಯಿತ ಸಮಾಜದ ಮುಖಂಡ ವಿನಯ್ ಕುಲಕರ್ಣಿ ಹೇಳಿದ್ದಾರೆ. ಧಾರವಾಡದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಮ್ಮ ಸಮುದಾಯದಲ್ಲಿ ಮಠಮಂದಿರಗಳಿವೆ. ಸ್ವಾಮೀಜಿಗಳಿದ್ದಾರೆ. ನಮ್ಮ ಧರ್ಮದ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರತ್ಯೇಕ ಲಿಂಗಾಯಿತ ಹೋರಾಟ ವಿಚಾರದ ಬಗ್ಗೆ ಪೇಜಾವರ ಶ್ರೀಗಳು ತಲೆಕೆಡಿಸಿಕೊಳ್ಳುವುದು ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಲಿಂಗಾಯಿತ ಸಮುದಾಯ ಒಂದು ವಿಭಿನ್ನ ಸಮುದಾಯ. ನಮ್ಮಲ್ಲಿ ಪ್ರತ್ಯೇಕ ಲಿಂಗಾಯಿತ...
Post date: 19-10-1717

ER NEWS
Subject ಬ್ರೇಕಿಂಗ್ ನ್ಯೂಸ್; ಕೊಲ್ಕತ್ತಾ ಎಲ್‌ಐಸಿ ಕಟ್ಟಡದಲ್ಲಿ ಅಗ್ನಿ ದುರಂತ

ಕೊಲ್ಕತ್ತಾದ ಜವಾಹರ್ ಲಾಲ್ ನೆಹರು ರಸ್ತೆಯ ಎಲ್‌ಐಸಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಎಲ್ಲೆಡೆ ಆವರಿಸುತ್ತಿರುವ ಜ್ವಾಲೆ ನಂದಿಸಲು 10 ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ


Post date: 19-10-1717
ER NEWS

Subject ಕಲ್ಯಾಣಮಸ್ತು: ಅರ್ಚಕರನ್ನು ಮದುವೆಯಾದರೆ 3 ಲಕ್ಷ ರೂ. !

ದೇವಸ್ಥಾನಗಳಲ್ಲಿ ಅರ್ಚಕರಾಗಿ ಕೆಲಸ ಮಾಡುವ ಯುವಕರನ್ನು ಮದುವೆಯಾಗುವ ಮಹಿಳೆಯರಿಗೆ 3 ಲಕ್ಷ ರೂ. ಗಳನ್ನು ನೀಡಲು ತೆಲಂಗಾಣ ಸರಕಾರ ನಿರ್ಧರಿಸಿದೆ. "ಕಲ್ಯಾಣಮಸ್ತು' ಎಂಬ ಹೆಸರಿನ ಈ ಯೋಜನೆ ಮುಂದಿನ ತಿಂಗಳಿಂದಲೇ ಜಾರಿಗೆ ಬರಲಿದೆ. ದೇವಸ್ಥಾನಗಳ ಅರ್ಚಕರು ಹಾಗೂ ಪುರೋಹಿತರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಕನ್ಯಾಪಿತೃಗಳು ಹಿಂದೇಟು ಹಾಕುತ್ತಾರೆ. ಆದಾಯ ಕಡಿಮೆ ಇರುವುದೂ ಒಂದು ಕಾರಣ ಎಂಬುದನ್ನು ಮನಗಂಡಿರುವ ಸರಕಾರ, ಅರ್ಚಕರನ್ನು ವರಿಸಲು ಮುಂದಾಗುವವರಿಗೆ ಇಂಥ ಆಫ‌ರ್‌ ನೀಡಿದೆ. ಇದರೊಂದಿಗೆ, ಮದುವೆ ಸಮಾರಂಭ ನೆರವೇರಿಸಲು ಯುವತಿಯ ಮನೆಯವರಿಗೂ ಒಂದು ಲಕ್ಷ ರೂ.ಗಳನ್ನು ಸರಕಾರವೇ ಕೊಡಲಿದೆ!

ಏಕೀ...
Post date: 19-10-1717

ER NEWS

Subject ಸಕ್ರಿಯ ರಾಜಕೀಯಕ್ಕೆ ಪರಮೇಶ್ವರ್ ಗುಡ್ ಬೈ?

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು 2018 ರ ನಂತರ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಈ ಕುರಿತು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ, ನಾನು ಈ ಚುನಾವಣೆಯಲ್ಲಿ ಕೊರಟಗೆರೆಯಿಂದಲೇ ಸ್ಪರ್ಧಿಸುತ್ತೇನೆ ಎಂದು ಪರಮೇಶ್ವರ್ ಎಂದು ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಕೊರಟಗೆರೆಯಲ್ಲಿ ಪರಮೇಶ್ವರ್ ಒಂದು ವಾರ ಕಾಲ ಬೀಡು ಬಿಟ್ಟಿದ್ದರು.

ಕೆಲವೊಂದು ವೈಯಕ್ತಿಕ ಕಾರಣಗಳಿಂದ ಪರಮೇಶ್ವರ್ ಅವರು ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಆದರೆ ಪರಮೇಶ್ವರ್ ಅವರ ಮಾತು ಎಷ್ಟು ಸತ್ಯ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Post date: 19-10-1717
ER NEWS
Subject ರಾಮನಗರ : ಕೆರೆಗೆ ನುಗ್ಗಿದ ಕಾರು, ಇಬ್ಬರು ಮಕ್ಕಳು ಸೇರಿದಂತೆ ಮೂವರ ಸಾವು

ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಕೆರೆಗೆ ನುಗ್ಗಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ರಾಮನಗರ ಸಮೀಪದ ಮನಗಾನಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ಗಣಪತಿಪುರ ನಿವಾಸಿ ಶಶಾಂಕ್, ಅಕ್ಕನ ಮಕ್ಕಳೊಂದಿಗೆ ತಮ್ಮ ಸಂಬಂಧಿಕರ ಮನೆಗೆ ತೆರಳುವ ವೇಳೆ ಈ ದುರಂತ ಸಂಭವಿಸಿದೆ. ಈ ವೇಳೆ ಗ್ರಾಮಸ್ಥರು ಕೆರೆಗೆ ಧುಮುಕಿ ಕಾರಿನಲ್ಲಿದ್ದವರನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ ಇಬ್ಬರು ಮಕ್ಕಳು ಮತ್ತು ಕಾರು ಚಾಲನೆ ಮಾಡುತ್ತಿದ್ದ ಶಶಾಂಕ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ದಿಲೀಪ್ ರಕ್ಷಿಸಲ್ಪಟ್ಟಿದ್ದಾನೆ.
ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
Post date: 19-10-1717

ER NEWS

Subject ಒಡಿಶಾ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಸಾವು, 20 ಮಂದಿಗೆ ಗಾಯ

ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿನ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಉಂಟಾದ ಭೀಕರ ಸ್ಫೋಟಕೆ ಕನಿಷ್ಠ ಎಂಟು ಮಂದಿ ಬಲಿಯಾಗಿ ಇತರ 20 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಬಾಲಸೋರ್‌ ಪಟಾಕಿ ಕಾರ್ಖಾನೆಯಲ್ಲಿನ ಈ ದುರಂತಕ್ಕೆ ಕಾರಣವಾದ ಸ್ಫೋಟವು ಯಾವುದರಿಂದಾಗಿ ಸಂಭವಿಸಿತೆಂದು ತಿಳಿದು ಬಂದಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಬುಧವಾರ ರೂರ್ಕೆಲ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಓರ್ವ ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದರು. ದೀಪಾವಳಿ ಹಬ್ಬ ಸಾಗುತ್ತಿರುವಂತೆಯೇ ದೇಶದ ವಿವಿಧೆಡೆಗಳಿಂದ ಒಂದೊಂದಾಗಿ ಬೆಂಕಿ ಆಕಸ್ಮಿಕ ದುರಂತಗಳು...
Post date: 19-10-1717

Pages