News

E.g., 14/06/2021
Public News
PublicNext-474861-514600-Politics-node
Subject ಬ್ರೇಕಿಂಗ್ : 3ನೇ ಪ್ಯಾಕೇಜ್ ಘೋಷಿಸಿದ ಸಿಎಂ : ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ 1 ಲಕ್ಷ ಪರಿಹಾರ

ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಕೋವಿಡ್ ನಿಂದ ಸಾವನ್ನಪ್ಪಿದರೆ ಆ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಘೋಷಿಸಿ ಸಿಎಂ ಆದೇಶಿಸಿದ್ದಾರೆ. ಇನ್ನು 3 ನೇ ಬಾರಿ ಘೋಷಿಸಿದ ಕೋವಿಡ್ ಪ್ಯಾಕೇಜ್ ಗೆ ಸರ್ಕಾರ 250 ರಿಂದ 300 ಕೋಟಿ ರೂ ಮೀಸಲಿಡಲಾಗಿದೆ.


Category: Politics
Post date: 14-06-2121
Public News
PublicNext-474856-514626-Cinema-node
Subject ಬ್ರೇಕಿಂಗ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ʼಸಂಚಾರಿʼ ಇನ್ನಿಲ್ಲ

ಬೆಂಗಳೂರು: ಬೈಕ್ ಅಪಘಾತದಲ್ಲಿ ಮೆದುಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ.

ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ವಿಜಯ ಜೀವನದ ಸಂಚಾರ ಮುಗಿಸಿದ್ದಾರೆ.


Category: Cinema
Post date: 14-06-2121
Kshetra Samachara
PublicNext--514512--node-nid
Subject ಕೂಳೂರು ಸೇತುವೆ ಮೇಲೆ ಸಂಚರಿಸುವವರಿಗೆ ಸಂಚಕಾರ : ಚಾಲಕರ ಪರದಾಟ

ಮಂಗಳೂರು : ರಸ್ತೆ ಸರಳವಾಗಿರುವಾಗಲೇ ಮಳೆಗಾಲದಲ್ಲಿ ವಾಹನ ಓಡಾಟ ತುಸು ಕಷ್ಟ ಇದರ ಮಧ್ಯೆ ಕೂಳೂರು ಹಳೆ ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳಲ್ಲಿ ಮಳೆ ನೀರು ತುಂಬಿದ್ದು ವಾಹನ ಚಾಲಕರು ಪರದಾಡುವಂತಾಗಿದೆ. ಮೈಕ್ರೋ ಟೆಕ್ನಾಲಜಿ ಮೂಲಕ 38 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾದ ಕೂಳೂರು ಹಳೇ ಸೇತುವೆಯ ಇಕ್ಕೆಲಗಳಲ್ಲಿ ಇದೀಗ ಹೊಂಡ ಬೀಳಲಾರಂಭಿಸಿದೆ. ಡಾಮರು ತೇಪೆ ಹಾಕಿ ಒಂದೆರಡು ತಿಂಗಳು ಕಳೆಯುವುದರೊಳಗೆ ಒಂದೇ ಮಳೆಗೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಸೋಮವಾರ ಮಳೆಯ ನಡುವೆ ಹೆದ್ದಾರಿ ಇಲಾಖೆ ತೇಪೆ ಹಾಕಲು ಮುಂದಾಗಿದ್ದು ಲಾಕ್ ಡೌನ್ ವಿನಾಯಿತಿ ಸಂದರ್ಭ ನೂರಾರು ವಾಹನಗಳು ಹೆದ್ದಾರಿ ಉದ್ದಕ್ಕೂ ಸಾಲುಗಟ್ಟಿ...
Category: Infrastructure
Post date: 14-06-2121
City: Udupi, Mangalore

Kshetra Samachara
Kshetra Samachara
Subject ಹುಬ್ಬಳ್ಳಿ: ಸೋಂಕು ತಗುಲಿದರೆ ಹೆದರಬೇಡಿ, ಯೋಗ ಮಾಡಿ ಪುಸ್ತಕ ಓದಿ: ಲಿಂಗರಾಜ ಅಂಗಡಿ

ಹುಬ್ಬಳ್ಳಿ:ಕೊರೊನಾ ಹಾವಳಿ ನಡುವೆಯೂ ಅದೆಷ್ಟೋ ಸೋಂಕಿತರು ಭಯದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಭಯ ಬಿಟ್ಟು ಯೋಗ ಮಾಡಿ, ರೋಗದಿಂದ ಮುಕ್ತರಾಗಿ ಎಂದು ಸೋಂಕಿನಿಂದ ಗುಣಮುಖರಾಗಿ ಬಂದ ಕಸಾಪ ಜಿಲ್ಲಾಧ್ಯಕ್ಷ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಲಿಂಗರಾಜ ಅಂಗಡಿ ಸಲಹೆ ನೀಡಿದ್ದಾರೆ.


Category: Health & Fitness, COVID
Post date: 14-06-2121
City: Hubballi-Dharwad
Kshetra Samachara
Kshetra Samachara
Subject ಸಹಜ ಸ್ಥಿತಿಯತ್ತ ವಾಣಿಜ್ಯ ನಗರಿ

ಹುಬ್ಬಳ್ಳಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿತ್ತು, ಸದ್ಯ ಕೊರೊನಾ ಹಂತ ಹಂತವಾಗಿ ಕಡಿಮೆ ಆಗುತ್ತಿರುವುದರಿಂದ, ಇಂದಿನಿಂದ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಅನ್ ಲಾಕ್ ಮಾಡಲಾಗಿದೆ.
ಅನ್ ಕಾಲ್ ಮಾಡಲಾದ ಜಿಲ್ಲೆಯಲ್ಲಿ ಧಾರವಾಡವು ಒಂದಾಗಿದ್ದು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಘಂಟೆಯ ವರೆಗೆ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡಿರುವುದರಿಂದ ಈಗ ವಾಣಿಜ್ಯ ನಗರಿ ಹುಬ್ಬಳ್ಳಿ ಸಹಜ ಸ್ಥಿತಿಯತ್ತ ಸಾಗಿದೆ.


Category: Health & Fitness, Law and Order, COVID
Post date: 14-06-2121
City: Hubballi-Dharwad
Public News
Public News
Subject ಇಂದು ವಿಶ್ವ ರಕ್ತದಾನಿಗಳ ದಿನಾಚರಣೆ': ಸದಾ ಇರಲಿ ಈ ಮಾನವೀಯ ಗುಣ ಸಂಪನ್ನರ ಸ್ಮರಣೆ

ವರದಿ : ಮನೋಜ್ ಕೆ.ಬೆಂಗ್ರೆ

ಮಂಗಳೂರು: ಇಂದು ಜೂನ್ 14. ಈ ಸುದಿನವನ್ನು 'ವಿಶ್ವ ರಕ್ತದಾನಿಗಳ ದಿನ' ವೆಂದು ಜಗತ್ತಿನಾದ್ಯಂತ ವರ್ಷಂಪ್ರತಿ ಆಚರಿಸಲಾಗುತ್ತಿದೆ.
ವಿಶ್ವ ಸಂಸ್ಥೆ 2005 ರಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆಗೆ ಘೋಷಣೆ ಮಾಡಿತ್ತು. ಇದು ಇಡೀ ಜಗತ್ತಿನ ಪ್ರತಿ ಸಹೃದಯಿ ರಕ್ತದಾನಿಗೆ ಸಲ್ಲಿಸುವ ಮಹಾ ಗೌರವವೂ ಹೌದು.

'ರಕ್ತದಲ್ಲಿ ಆರ್ ಎಚ್ ಫ್ಯಾಕ್ಟರ್' ಕಂಡು ಹುಡುಕಿದ, ನೊಬೆಲ್ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಸಂಸ್ಮರಣೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಡೆಯುತ್ತದೆ.

ಇಂದು ಪ್ರತಿ 2 ಸೆಕೆಂಡ್ ಗೆ ಯಾರಾದರೊಬ್ಬರಿಗೆ ರಕ್ತದ...
Category: Cultural Activity
Post date: 14-06-2121

Public News
PublicNext--514590--node-nid
Subject ಸಂಚಾರಿ ವಿಜಯ್ ಸ್ಥಿತಿ ಗಂಭೀರ : ಚಿಕಿತ್ಸೆ ವೆಚ್ಚ ಭರಿಸುವುದಾಗಿ ಡಿಸಿಎಂ ಭರವಸೆ

ಬೆಂಗಳೂರು: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಟ ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತದಲ್ಲಿ ಮೆದುಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನಟನ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ತಾವು ಭರಿಸುವುದಾಗಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

ಸದ್ಯ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ನ್ಯೂರೋ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಉಸಿರಾಟವನ್ನೂ ನಿಲ್ಲಿಸಿದ್ದಾರೆ, ಮೆದುಳು...
Category: Politics, Cinema, Accident
Post date: 14-06-2121

Kshetra Samachara
Kshetra Samachara
Subject ಪಡುಪಣಂಬೂರು: ಲಸಿಕೆ ಪಡೆದುಕೊಂಡು ಜೀವ ರಕ್ಷಣೆಗೆ ಮುಂದಾಗಿ: ಉಮಾನಾಥ ಕೋಟ್ಯಾನ್

ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾ ಶಿಭಿರ ಕಾರ್ಯಕ್ರಮ ಸಭಾಂಗಣದಲ್ಲಿ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಕೋರೋನ ಲಸಿಕೆ ಮುಖಾಂತರ ಜೀವವನ್ನು ರಕ್ಷಿಸಿಕೊಳ್ಳಲು ಎಲ್ಲರೂ ಮುಂದಾಗಬೇಕಾಗಿದೆ.

ಕೋರೋನ ಲಸಿಕೆ ಬಗ್ಗೆ ಯಾರು ಗೊಂದಲ ಪಡಬೇಕಾದ ಅಗತ್ಯವಿಲ್ಲ ಜೂ 21ರ ಬಳಿಕ ದೇಶವಾಸಿಗಳಿಗೆ ಕಡ್ಡಾಯ ಕೊರೋನಾ ಲಸಿಕೆ ವಿತರಿಸಬೇಕು ಎಂದು ಪ್ರಧಾನ ಮಂತ್ರಿಗಳು ಆದೇಶ ನೀಡಿದ್ದಾರೆ ಎಂದರು.

ಈ ಸಂದರ್ಭ ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಮಾಜಿ ಸದಸ್ಯ ಜೀವನ್ ಪ್ರಕಾಶ್, ಪಡುಪಣಂಬೂರು ಗ್ರಾಪಂ...
Category: Health & Fitness
Post date: 14-06-2121
City: Udupi, Mangalore

Public News
PublicNext--514502--node-nid
Subject ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯತೆ ಹಂತದಲ್ಲಿದೆ: ವೈದ್ಯರ ಮಾಹಿತಿ

ಬೆಂಗಳೂರು: ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯತೆ ಹಂತಕ್ಕೆ ತಲುಪಿದೆ ಎಂದು ಅಪೊಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಜಯ್ ಅವರು ಆಸ್ಪತ್ರೆಗೆ ದಾಖಲಾಗಿ 36 ಗಂಟೆಗಳ ಅವಧಿಯಲ್ಲಿ ‍ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ‌. ಬಲಭಾಗದ ಮಿದುಳಿಗೆ ಮಿದುಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೊಡಬೇಕಿದ್ದ ಎಲ್ಲ ಚಿಕಿತ್ಸೆಯನ್ನೂ ಕೊಟ್ಟಿದ್ದೇವೆ. ಸದ್ಯ ಅವರು ಕೋಮಾದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


Category: Cinema, Accident
Post date: 14-06-2121

Pages