News

E.g., 15/06/2021
Kshetra Samachara
Kshetra Samachara
Subject ಕಾಪು : ಬಲಿಗಾಗಿ ಕಾಯುತ್ತಿದೆ ಮರಣ ಗುಂಡಿ, ಗುಂಡಿಯನ್ನು ಕಾಯುತ್ತಿದೆ ಪ್ಲಾಸ್ಟಿಕ್ ಬಕೆಟ್

ಕಾಪು : ಕಾಪು ಪೇಟೆಯ ವೈಶಾಲಿ ಹೋಟೆಲ್ ಪಕ್ಕದಲ್ಲಿ ನೂರಾರು ಜನ ಓಡಾಡುವ ಮುಖ್ಯ ರಸ್ತೆಯಲ್ಲಿ ಚರಂಡಿಯು ಬಾಯಿ ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೆ.

ಕಳೆದ ಮಳೆಗಾಲದಲ್ಲೂ ಇದೆ ರೀತಿಯಲ್ಲಿ ಮ್ಯಾನ್ ಹೋಲ್ ಕುಸಿದಿದ್ದು ಬಳಿಕ ಪುರ ಸಭೆಯು ಮಣ್ಣು ತುಂಬಿ ದುರಸ್ಥಿ ಪಡಿಸಿತ್ತು. ಈಗ ಅದೇ ರೀತಿಯಲ್ಲಿ ಬಾಯಿ ತೆರೆದು ಕೊಂಡಿddu ಮತ್ತಷ್ಟು ಅಪಾಯದ ಭೀತಿ ಎದುರಾಗಿದೆ. ಆದಷ್ಟು ಶೀಘ್ರದಲ್ಲಿ ಇಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವಲ್ಲಿ ಪುರಸಭೆ ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದರೆ


Category: Infrastructure
Post date: 14-06-2121
City: Udupi, Mangalore
Kshetra Samachara
Kshetra Samachara
Subject ಫುಡ್ ಕಿಟ್ ನೆಪದಲ್ಲಿ ಮಕ್ಕಳ ಬಳಕೆ: ಪ್ರಚಾರದ ಬರದಲ್ಲಿ ನಿಯಮ ಉಲ್ಲಂಘಿಸಿದ ಲಾಡ್

ಹುಬ್ಬಳ್ಳಿ : ರಾಜಕೀಯ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಕೂಡ ಇಲ್ಲೊಬ್ಬ ಕಾಂಗ್ರೆಸ್ ನಾಯಕ ಲಾಕ್ ಡೌನ್ ಸಂದರ್ಭದಲ್ಲಿ ಫುಡ್ ಕಿಟ್ ವಿತರಣೆಯ ನೆಪದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

ಫುಡ್ ಕಿಟ್ ಹಂಚುವ ನೆಪದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಮಕ್ಕಳ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದು ಮಾಸ್ಕ್ ಧರಿಸದೇ ಸಾವಿರಾರು ಜನರನ್ನು ಸೇರಿಸುತ್ತಿರುವ ಸಂತೋಷ ಲಾಡ್ ಸರ್ಕಾರದ ಕೋವಿಡ್ ನಿಯಮಕ್ಕೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ...
Category: Politics, Health & Fitness, Law and Order, COVID
Post date: 14-06-2121
City: Hubballi-Dharwad

Public News
PublicNext--514778--node-nid
Subject ಕೇಂದ್ರ ಸರ್ಕಾರದ ಮೇಲೆ ಮತ್ತೆ ಗುಡುಗಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದು ಮುಂದುವರೆದಿದೆ. ಟ್ವಿಟರ್​ನಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದಿರುವ ಅವರು, ಕೇಂದ್ರ ಸರ್ಕಾರ ಸುಳ್ಳು ಮತ್ತು ಖಾಲಿ ಘೋಷಣೆಗಳನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಸರ್ಕಾರದಲ್ಲಿ ಸುಳ್ಳು ಮತ್ತು ಖಾಲಿ ಘೋಷಣೆ ಹೊರಡಿಸುವ ರಹಸ್ಯ ಇಲಾಖೆ ದಕ್ಷವಾಗಿದೆ ಎಂದು ಅವರು ಟೀಕಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಲಸಿಕೆ ಕೊರತೆ, ಜಿಎಸ್​ಟಿ ಮತ್ತು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮುಂತಾದ...
Category: Politics
Post date: 14-06-2121

Kshetra Samachara
Kshetra Samachara
Subject ವ್ಯಾಕ್ಸಿನ್ ನಿಂದ ಅಯಸ್ಕಾಂತೀಯ ಗುಣ ಬರಲ್ಲ: ಉಡುಪಿ ಡಿ.ಸಿ ಸ್ಪಷ್ಟನೆ

ಉಡುಪಿ: ಉಡುಪಿಯಲ್ಲಿ ವ್ಯಕ್ತಿಯೊಬ್ಬರಿಗೆ ಮ್ಯಾಗ್ನೆಟಿಕ್ ಪವರ್ ಬಂದಿರುವ ಬಗ್ಗೆ ವರದಿಯಾಗಿದೆ.ಆದರೆ ಅದಕ್ಕೂ ಕೋವಿಡ್ ಲಸಿಕೆಗೂ ಸಂಬಂಧ ಇಲ್ಲ ಎಂದು ಉಡುಪಿ ಡಿ.ಸಿ.ಜಿ.ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಜಿಲ್ಲಾಧಿಕಾರಿಗಳು ಆ ವ್ಯಕ್ತಿಗೆ ಬಿ.ಪಿ, ಶುಗರ್ ಇದೆ.ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗಿದೆ.ಅವರಿಗೆ ಹಣೆ, ಭುಜ ,ಬೆನ್ನು ,ಕೈಯಲ್ಲಿ ಅಯಸ್ಕಾಂತೀಯ ಗುಣ ಇದೆ.ಆದರೆ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ,ಅದರಲ್ಲಿ ವ್ಯಾಕ್ಸಿನ್ ನಿಂದ ಹೀಗಾಗಿದೆ ಎಂದು ಹೇಳಿದ್ದಾರೆ.ಆ ವ್ಯಕ್ತಿ ಮೊದಲ ಡೋಸ್ ಲಸಿಕೆ...
Category: Offers
Post date: 14-06-2121
City: Udupi, Mangalore

Kshetra Samachara
PublicNext--514787--node-nid
Subject ಸುಳ್ಳು ಸುದ್ದಿ : ಮೆಸ್ಕಾಂ ಕಚೇರಿಗೆ ದೌಡಾಯಿಸಿದ ಗ್ರಾಹಕರು

ಬ್ರಹ್ಮಾವರ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಮೆಸ್ಕಾಂ) ನಿಂದ ಕೊರೊನಾ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದ ಬಿಪಿಎಲ್ ಕಾರ್ಡ್ ದಾರರಿಗೆ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು. ಪ್ರತಿ ಶಾಖೆಯವರು ತಮ್ಮ ವ್ಯಾಪ್ತಿಯ ಬಿ.ಪಿ.ಎಲ್. ಕಾರ್ಡ್ ಹೊಂದಿದ ಬಳಕೆದಾರರ ವಿವರ ನೀಡಬೇಕೆನ್ನುವ ಸುಳ್ಳು ಆದೇಶ ಪ್ರತಿಯನ್ನೊಳಗೊಂಡ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಗ್ರಾಮಾಂತರ ಭಾಗದ ಒಂದಷ್ಟು ಮಂದಿ‌ ಗ್ರಾಹಕರು ಬಿ.ಪಿ.ಎಲ್. ಕಾರ್ಡ್ ನೊಂದಿಗೆ ಮೆಸ್ಕಾಂ ಕಚೇರಿಗೆ ದೌಡಾಯಿಸಿ ತಮ್ಮ‌ಬಿಲ್ ರದ್ದಾಗಲಿದೆಯೇ ಎಂದು ವಿಚಾರಿಸಿದ ಘಟನೆ ಉಡುಪಿ, ಮಂಗಳೂರು ಸೇರಿದಂತೆ ಹಲವು...
Category: WaterPower
Post date: 14-06-2121
City: Udupi, Mangalore

Kshetra Samachara
Kshetra Samachara
Subject ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೂ ತಟ್ಟಿದ ಟ್ರಾಫಿಕ್ ಜಾಮ್ ಅನುಭವ...!

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹು-ಧಾ ಮಹಾನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರಿಂದ ಜನಪ್ರತಿನಿಧಿಗಳ ವಾಹನ ಹಾಗೂ ಅಂಬ್ಯುಲೆನ್ಸ್ ಕೂಡ ಪರದಾಡುವಂತಾಗಿದೆ.

ಹೌದು.. 48 ದಿನಗಳ ಬಳಿಕ ಅನ್ ಲಾಕ್ ಆದ ಹುಬ್ಬಳ್ಳಿಯಲ್ಲಿ ಸಾವಿರಾರು ವಾಹನಗಳು ರಸ್ತೆಗೆ ಇಳಿದಿದ್ದು, ಕೋರೊನಾ ವೈರಸ್ ಹರಡದಂತೆ ಕೈಗೊಂಡಿರುವ ಲಾಕ್ ಡೌನ ಗೆ ಜಿಲ್ಲಾಡಳಿತ ಇವತ್ತು ರೀಲಿಫ್ ನೀಡಿರುವ ಹಿನ್ನಲೆಯಲ್ಲಿ ಪ್ರಮುಖ ರಸ್ತೆಗಳೆಲ್ಲ ಟ್ರಾಫಿಕ್ ಜಾಮ್ ಆಗಿದ್ದು, ಕೇಂದ್ರ ಸಚಿವ್ ಪ್ರಹ್ಲಾದ ಜೋಶಿಯವರಿರಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ....
Category: Infrastructure
Post date: 14-06-2121
City: Hubballi-Dharwad

Public News
PublicNext--514802--node-nid
Subject ಒಂದು ಟ್ವೀಟ್‌ನಿಂದ ಗೌತಮ್ ಅದಾನಿಗೆ ಷೇರು ಶೇಕ್- 43,500 ಕೋಟಿ ರೂ. ಹೂಡಿಕೆ ಫ್ರೀಜ್

ಮುಂಬೈ: ಒಂದೇ ಒಂದು ಟ್ವೀಟ್ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಗ್ರೂಪ್‌ಗೆ ಬಿಗ್ ಶಾಕ್ ನೀಡಿದೆ.

ಹೌದು. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ನಾಲ್ಕು ವಿದೇಶಿ ನಿಧಿಗಳಾದ ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ನಾಲ್ಕು ಅದಾನಿ ಗ್ರೂಪ್ ಕಂಪನಿಗಳಲ್ಲಿ 43,500 ಕೋಟಿ ರೂ. ಹೂಡಿಕೆ ಮಾಡಿದ್ದು, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕಾರ ಲಾಭದಾಯಕ ಮಾಲೀಕತ್ವದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಾರಣ ಈ ಮೂರು ಖಾತೆಗಳನ್ನು ಅಮಾನತುಗೊಳಿಸಬಹುದು...
Category: Business
Post date: 14-06-2121

Public News
PublicNext--514786--node-nid
Subject ಪೊಲೀಸರಿಗೆ ಸ್ಟಾರ್ ಬದಲು ಬಿಜೆಪಿ ಬ್ಯಾಡ್ಜ್ ಕೊಡಿ : ಡಿಕೆಶಿ ಗರಂ

ಬೆಂಗಳೂರು: ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ. ಅವರು ತಮ್ಮ ಸ್ಟಾರ್ ತೆಗೆದು ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.ಕಾಂಗ್ರೆಸ್ ನಾಯಕರು ತಮ್ಮ ಹಣದಲ್ಲಿ ಜನರಿಗೆ ಸಹಾಯ ಮಾಡಲು ಹೋದರೆ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಬೋರ್ಡ್ ಗಳನ್ನು ಕಿತ್ತು ಹಾಕಿಸಿದ್ದಾರೆ. ಪಾಪ ಆ ಪೊಲೀಸ್ ಅವರಿಗೆ ನಮ್ಮ ಸಹವಾಸ ಗೊತ್ತಿಲ್ಲ ಎಂದಿದ್ದಾರೆ.

ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ನೆರವು ವಿತರಣೆ ಕಾರ್ಯಕ್ರಮ ನಿಲ್ಲಿಸಿದರೆ ಠಾಣೆ ಮುಂದೆ ಧರಣಿ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಷ್ಟದ...
Category: Politics
Post date: 14-06-2121

Public News
PublicNext--514760--node-nid
Subject ಆಸ್ತಿಗಾಗಿ ಪೋಷಕರನ್ನೇ ಕೊಂದ ಪಾಪಿ ಅರೆಸ್ಟ್‌

ಲಕ್ನೋ: ವ್ಯಕ್ತಿಯೊಬ್ಬ ಆಸ್ತಿಗಾಗಿ ತನ್ನ ಪೋಷಕರನ್ನೇ ಕೊಲೆಗೈದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ನಡೆದಿದೆ.

ಆರೋಪಿ ರವಿ ಢಾಕಾ 40 ವರ್ಷದವನಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ರವಿ ಪೋಷಕರು ಆಸ್ತಿಯನ್ನು ತಮ್ಮ ದಿವಂಗತ ಪುತ್ರನ ಪತ್ನಿ ಹಾಗೂ ಮಗನ ಹೆಸರಿಗೆ ವರ್ಗಾಯಿಸಲು ಬಯಸಿದ್ದರು. ಇದು ರವಿಯ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ ಭಾನುವಾರ ತಂದೆ-ತಾಯಿಯನ್ನೇ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.


Category: Crime
Post date: 14-06-2121

Pages