News

E.g., 14/06/2021
Kshetra Samachara
Kshetra Samachara
Subject ನಹೀ ಚಾಹಿಯೇ ನಹೀ ಚಾಹಿಯೇ.. ಅಚ್ಛೇ ದಿನ ನಹೀ ಚಾಹಿಯೇ..

ಧಾರವಾಡ: ತೈಲ ಬೆಲೆ ಏರಿಕೆ ಖಂಡಿಸಿ ಶಾಸಕರಾದ ಆರ್.ವಿ.ದೇಶಪಾಂಡೆ ಹಾಗೂ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ಧಾರವಾಡದ ನರೇಗಲ್ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಪೆಟ್ರೋಲ್ ಬಂಕ್ ಎದುರು ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರ, ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಆರ್.ವಿ.ದೇಶಪಾಂಡೆ, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ತೈಲ ಬೆಲೆ 60 ರೂಪಾಯಿ ಇತ್ತು. ಈಗ 100 ರೂಪಾಯಿ ಆಗಿದೆ...
Category: Politics
Post date: 14-06-2121
City: Hubballi-Dharwad

Kshetra Samachara
Kshetra Samachara
Subject ಮಂಗಳೂರು: ನಿರಂತರ ವರ್ಷಧಾರೆ; ರಸ್ತೆ ಜಲಾವೃತ, ನದಿ ನೀರಿನ ಮಟ್ಟ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಬೆಳಗ್ಗಿನಿಂದಲೇ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕೂಡ ನಿರಂತರ ಮಳೆ ಪರಿಣಾಮ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ನಗರದ ಅಲ್ಲಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗಲಾಗದೆ ರಸ್ತೆ ತುಂಬಿಕೊಂಡಿದೆ.

ಕೊಡಿಯಾಲ್ ಬೈಲ್, ಅಳಕೆ ಸುತ್ತಮುತ್ತ ಮತ್ತು ಪಡೀಲ್, ತೊಕ್ಕೊಟ್ಟು, ಪಂಪ್‌ವೆಲ್ ಮೇಲ್ಸೇತುವೆ ತಳದಲ್ಲಿ ನೀರು ನಿಂತು ಕೆರೆಯಂತಾಗಿದೆ. ಜೂನ್ 16ರ ವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 115ರಿಂದ 204 ಮಿ.ಮೀ....
Category: Nature
Post date: 14-06-2121
City: Udupi, Mangalore

Public News
Public News
Subject ಸಂಚಾರಿ ವಿಜಯ ಉಸಿರಾಡುತ್ತಿದ್ದಾರೆ : ಸಿಎಂ ಸಂತಾಪದ ಬೆನ್ನಲ್ಲೆ ವೈದ್ಯರಿಂದ ಮಾಹಿತಿ

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ ಎನ್ನುವ ಸುದ್ದಿ ಈಗಾಗಲೇ ಎಲ್ಲರ ಕಿವಿಗೆ ಬಿದ್ದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು, ಸಿನಿಮಾ ನಟರು ಸಂತಾಪ ಸೂಚಿಸಿದ ಬೆನ್ನಲ್ಲೆ ವೈದ್ಯರು ಸಂಚಾರಿ ವಿಜಯ ಸತ್ತಿಲ್ಲ ಎಂದಿದ್ದಾರೆ. ಹೌದು ನಟ ಸಂಚಾರಿ ವಿಜಯ್ ಇನ್ನು ಉಸಿರಾಡುತ್ತಿದ್ದಾರೆ. ಮೆದುಳು ನಿಷ್ಕ್ರಿಯವಾದ ತಕ್ಷಣ ಯಾವುದೇ ವ್ಯಕ್ತಿ ಸಾಯಲ್ಲ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಪೊಲೋ ಆಸ್ಪತ್ರೆ ನ್ಯೂರೋ ಸರ್ಜನ್ ಡಾ.ಅರುಣ್ ನಾಯ್ಕ್ ತಿಳಿಸಿದ್ದಾರೆ.

ವಿಜಯ್ ಮೃತಪಟ್ಟಿರುವುದಾಗಿ ನಾವು ಘೋಷಿಸಿಲ್ಲ. ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು...
Category: Cinema
Post date: 14-06-2121

Public News
Public News
Subject ಮುಂಬೈನಲ್ಲಿ ಮಳೆ ಅಬ್ಬರ ಸಿಂಕ್ ಹೋಲ್ ನಲ್ಲಿ ಮುಳುಗಿದ ಕಾರು : ವಿಡಿಯೋ ವೈರಲ್

ಮುಂಬೈ : ವರ್ಷಧಾರೆಯ ಅಬ್ಬರಕ್ಕೆ ಮುಂಬೈ ತತ್ತರಿಸಿ ಹೋಗಿದೆ. ಮಳೆಯ ಅಬ್ಬರಕ್ಕೆ ಮಹಾರಾಷ್ಟ್ರದ ಹಲವು ಪ್ರದೇಶಗಳು ನಲುಗಿವೆ.
ಮುಂಬೈ ನಗರದಲ್ಲಿಯೂ ಮಳೆಯ ಅಬ್ಬರ ಜೋರಾಗಿದ್ದು, ನೋಡ ನೋಡುತ್ತಿದ್ದಂತೆಯೇ ಮಳೆಯ ಅಬ್ಬರಕ್ಕೆ ಬೃಹತ್ ಸಿಂಕ್ ಹೋಲ್ ನಲ್ಲಿ ಕಾರು ಮುಳುಗಿರುವ ವಿಡಿಯೋ ವೈರಲ್ ಆಗಿದೆ.

ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಬಾವಿ ಇತ್ತು. ಆದರೆ ಅದನ್ನು ಪಾರ್ಕಿಂಗ್ ಉದ್ದೇಶಕ್ಕೆ ಬಳಕೆ ಮಾಡುವ ಕಾರಣದಿಂದ ರಾಮ್ ನಿವಾಸ್ ಸೊಸೈಟಿಯ ನಿವಾಸಿಗಳು ಸಿಮೆಂಟ್ ನಿಂದ ಆ ಪ್ರದೇಶವನ್ನು ಮುಚ್ಚಿ ಪಾರ್ಕಿಂಗ್ ಪ್ರದೇಶವನ್ನಾಗಿ ಮಾಡಿಕೊಂಡಿದ್ದರು. ಮಳೆಯ ತೀವ್ರತೆಗೆ ಸಿಮೆಂಟ್ ಅಸ್ತವ್ಯಸ್ತಗೊಂಡಿದ್ದು ಬೃಹತ್...
Category: Nature
Post date: 14-06-2121

Public News
PublicNext--514857--node-nid
Subject ರಾಮಮಂದಿರ ದೇಣಿಗೆ ದುರುಪಯೋಗ ಭಕ್ತರ ನಂಬಿಕೆಗೆ ಅವಮಾನ: ಪ್ರಿಯಾಂಕಾ ಗಾಂಧಿ

ನವದೆಹಲಿ: ರಾಮಮಂದಿರ ಭಕ್ತರು ನೀಡಿರುವ ದೇಣಿಗೆಯನ್ನು ದುರುಪಯೋಗ ಮಾಡಿಕೊಳ್ಳುವುದು ಭಕ್ತರ ನಂಬಿಕೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜಮೀನು ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ, "ಕೋಟ್ಯಂತರ ಜನರು ನಂಬಿಕೆ ಮತ್ತು ಭಕ್ತಿಯಿಂದ ದೇವರ ಪಾದಗಳಿಗೆ ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಆ ದೇಣಿಗೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಅನ್ಯಾಯ. ಪಾಪ ಮತ್ತು ಅವರ ನಂಬಿಕೆಗೆ ಮಾಡಿದ ಅವಮಾನ" ಎಂದು ಹೇಳಿದ್ದಾರೆ.

ಇದೇ...
Category: Politics, Religion
Post date: 14-06-2121

Public News
PublicNext-474973-514820-Politics-Cinema-node
Subject ಕೆಡುಕು ಬಿತ್ತುವ ನಿಮ್ಮ ಮನಸ್ಸನ್ನು ಶುದ್ಧಗೊಳಿಸಬೇಕಿದೆ: ನಟ ಚೇತನ್ ಮೇಲೆ ರಕ್ಷಿತ್ ಶೆಟ್ಟಿ ಗರಂ

ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅವರ ಲೇಖನವೊಂದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಕನ್ನಡ ಚಿತ್ರರಂಗದ ಮತ್ತೋರ್ವ ನಟ ರಕ್ಷಿತ್ ಶೆಟ್ಟಿ, ಕೆಟ್ಟ ಸುಳ್ಳುಗಳಿಂದ ಕೆಡುಕು ಬಿತ್ತುತ್ತಿರುವ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟ ಚೇತನ್ ಅವರು ಬರೆದ ಜಾತಿ ಬಗೆಗಿನ ಬರಹವೊಂದನ್ನು ಬೆಂಬಲಿಸಿದ ಪತ್ರಕರ್ತ ಸುದಿಪ್ತೋ ಮೊಂಡಲ್ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ನಟ ರಕ್ಷಿತ್ ಶೆಟ್ಟಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.


Category: Politics, Cinema
Post date: 14-06-2121
Kshetra Samachara
Kshetra Samachara
Subject ಉಚ್ಚಿಲ-ಪಣಿಯೂರು ರಸ್ತೆ ಗುಂಡಿಗೆ ಕೊನೆಗೂ ಬಿತ್ತು ಜಲ್ಲಿ; ಸಂಚಾರಿಗಳ ನಿಟ್ಟುಸಿರು

ವರದಿ: ಶಫೀ ಉಚ್ಚಿಲ

ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ-ಪಣಿಯೂರು ರಸ್ತೆ ಅಗಲೀಕರಣದ ಕಾಮಗಾರಿ ಹಿನ್ನೆಲೆಯಿಂದಾಗಿ ಈ ಹಿಂದೆ ರಸ್ತೆಯ ಎರಡೂ ದಿಕ್ಕಿನಲ್ಲಿ ಸುಮಾರು 5 ಅಡಿಗಳಷ್ಟು ಅಗಲಕ್ಕೆ ಗುಂಡಿ ನಿರ್ಮಾಣವಾಗಿತ್ತು.

ಈ ಅಪಾಯಕಾರಿ ಹೊಂಡ ದೊಡ್ಡ ಅನಾಹುತಕ್ಕೂ ಕಾರಣವಾಗಿತ್ತು. ಈ ಕುರಿತು 'ಪಬ್ಲಿಕ್ ನೆಕ್ಸ್ಟ್' ಮಾಡಿದ ವರದಿಗೆ ಸ್ಪಂದಿಸಿದ ಗುತ್ತಿಗೆದಾರರು ಈಗ ಕೊನೆಗೂ ಗುಂಡಿಗೆ ಜಲ್ಲಿ ತುಂಬಿಸಿ, ಮುಚ್ಚುವ ಮೂಲಕ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ. ಇದರಿಂದಾಗಿ ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

- ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್


Category: Infrastructure
Post date: 14-06-2121
City: Udupi, Mangalore
Kshetra Samachara
Kshetra Samachara
Subject ಕುಂದಗೋಳ : ಸಂಕಷ್ಟದ ಕುಟುಂಬಕ್ಕೆ ನೀವೂ ನೀಡಿದ ಸೇವೆ ಸಹಕಾರ ಸಾರ್ಥಕ

ಕುಂದಗೋಳ : ಇದ್ದಂತಹ ಬಿಡಾ ಅಂಗಡಿಯನ್ನು ಲಾಕ್ ಡೌನ್ ಹೊಡೆತಕ್ಕೆ ಬಾಗಿಲು ಮುಚ್ಚಿ, ಹಾಸಿಗೆ ಹಿಡಿದ ತಾಯಿ, ತೀರಿ ಹೋದ ಅಣ್ಣನ ಮಕ್ಕಳನ್ನು ಸಲಹುವುದೇ ಕಷ್ಟವಾಗಿ, ಅತ್ತಿಗೆಯ ಸೇವೆಯಲ್ಲಿ ಅಂಗವಿಕಲ ವೇತನದಲ್ಲಿ ಬದುಕು ಸಾಗಿಸುತ್ತಿದ್ದ ಶಿರಾಜ್ ಅಹಮ್ಮದಖಾನ್ ಕುಟುಂಬ ಸಂಕಷ್ಟದ ಪರಿಸ್ಥಿತಿ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸ್ಟೋರಿ ಬಿತ್ತರಿಸಿ ಸಹಾಯಹಸ್ತಕ್ಕೆ ನೆರವಾಗುವಂತೆ ಜನತೆಯಲ್ಲಿ ಮನವಿ ಮಾಡಿತ್ತು.

ಈ ಸ್ಟೋರಿ ಪ್ರಕಟವಾಗಿದ್ದೇ ತಡ ಶಿರಾಜ್ ಅಹಮ್ಮದಖಾನ್ ಕುಟುಂಬದ ಕಷ್ಟಕ್ಕೆ ಧ್ವನಿಯಾದವರು ಒಬ್ಬರಾ ಇಬ್ಬರಾ ಇಸ್ರೈಲ್, ಅಮೇರಿಕಾ ದೇಶದಿಂದ ಹಿಡಿದು ಹುಬ್ಬಳ್ಳಿ ಕುಂದಗೋಳ ಜನತೆ ದಿನಸಿ, ಸಾಮಾನು ಹಾಗೂ ಧನ...
Category: Human Stories
Post date: 14-06-2121
City: Hubballi-Dharwad

Kshetra Samachara
Kshetra Samachara
Subject ಕಾಪು : ಬಲಿಗಾಗಿ ಕಾಯುತ್ತಿದೆ ಮರಣ ಗುಂಡಿ, ಗುಂಡಿಯನ್ನು ಕಾಯುತ್ತಿದೆ ಪ್ಲಾಸ್ಟಿಕ್ ಬಕೆಟ್

ಕಾಪು : ಕಾಪು ಪೇಟೆಯ ವೈಶಾಲಿ ಹೋಟೆಲ್ ಪಕ್ಕದಲ್ಲಿ ನೂರಾರು ಜನ ಓಡಾಡುವ ಮುಖ್ಯ ರಸ್ತೆಯಲ್ಲಿ ಚರಂಡಿಯು ಬಾಯಿ ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೆ.

ಕಳೆದ ಮಳೆಗಾಲದಲ್ಲೂ ಇದೆ ರೀತಿಯಲ್ಲಿ ಮ್ಯಾನ್ ಹೋಲ್ ಕುಸಿದಿದ್ದು ಬಳಿಕ ಪುರ ಸಭೆಯು ಮಣ್ಣು ತುಂಬಿ ದುರಸ್ಥಿ ಪಡಿಸಿತ್ತು. ಈಗ ಅದೇ ರೀತಿಯಲ್ಲಿ ಬಾಯಿ ತೆರೆದು ಕೊಂಡಿddu ಮತ್ತಷ್ಟು ಅಪಾಯದ ಭೀತಿ ಎದುರಾಗಿದೆ. ಆದಷ್ಟು ಶೀಘ್ರದಲ್ಲಿ ಇಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವಲ್ಲಿ ಪುರಸಭೆ ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದರೆ


Category: Infrastructure
Post date: 14-06-2121
City: Udupi, Mangalore

Pages