News

E.g., 15/06/2021
Public News
PublicNext--515097--node-nid
Subject ರಾಜ್ಯದಲ್ಲಿ 4.56%ಕ್ಕೆ ಇಳಿಕೆಯಾದ ಕೊರೊನಾ: ಇಂದು 6,835 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 6,835 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 120 ಜನ ಬಲಿಯಾಗಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇಂದು 15,409 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 25,66,774ಕ್ಕೆ ಏರಿಕೆಯಾಗಿದೆ. ಇನ್ನು 1,72,141 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೂ 27,71,969 ಜನರಿಗೆ ಸೋಂಕು ತಗುಲಿದ್ದು, 33,033 ಮಂದಿ ಬಲಿಯಾಗಿದ್ದಾರೆ.

...

Category: Health & Fitness, COVID
Post date: 14-06-2121
Kshetra Samachara
Kshetra Samachara
Subject ಹುಬ್ಬಳ್ಳಿ: ರಕ್ತದಾನಕ್ಕೂ ತಟ್ಟಿದ ಕೊರೋನಾ ಸಂಕಷ್ಟ: ತುರ್ತು ಚಿಕಿತ್ಸೆಗೆ ಸಿಗುತ್ತಿಲ್ಲ ರಕ್ತ...!

ಹುಬ್ಬಳ್ಳಿ: ಕಿಲ್ಲರ್ ಕೊರೋನಾ ವೈರಸ್ ಎಲ್ಲ ವಲಯದಲ್ಲಿ ಕೂಡ ಸಮಸ್ಯೆಗಳನ್ನು ತಂದೊಡ್ಡಿದೆ. ಅಲ್ಲದೇ ಜೀವ ಉಳಿಸುವ ಜೀವ ರಕ್ಷಕ ರಕ್ತದಾನಕ್ಕೂ ಕೂಡ ಕೊರೋನಾ ಸಂಕಷ್ಟ ಎದುರಾಗಿದೆ.

ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಚಿಕಿತ್ಸೆಗೆ ನೀಡುವ ರಕ್ತದ ಕೊರತೆ ಉಂಟಾಗಿದೆ. ಕೊರೋನಾ ಸಂದರ್ಭದಲ್ಲಿ ಯಾರಿಗಾದರೂ ರಕ್ತ ಬೇಕಾದರೇ ಯಾರಾದರೂ ದಾನಿಗಳು ರಕ್ತ ನೀಡುತ್ತಿದ್ದರು. ಇಲ್ಲವೇ ಬ್ಲಡ್ ಬ್ಯಾಂಕ್ ಗಳಲ್ಲಿ ಆದರೂ ರಕ್ತ ದೊರೆಯುತ್ತಿತ್ತು. ಪ್ರಸ್ತುತ ದಿನಮಾನಗಳಲ್ಲಿ ರಕ್ತದಾನಕ್ಕೆ ಕೂಡ ಈಗ ದಾನಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬ್ಲಡ್ ಬ್ಯಾಂಕ್ ಕೂಡ ಸಮರ್ಪಕವಾದ ರಕ್ತ ಸಂದಾಯವಾಗದೇ ಸಮಸ್ಯೆ...
Category: Health & Fitness
Post date: 14-06-2121
City: Hubballi-Dharwad

Public News
Public News
Subject ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ಮೋದಿಯನ್ನು ಸನ್ಮಾನಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಗೋಕಾಕ: "ಪೆಟ್ರೋಲ್ 100 ನಾಟೌಟ್" ಹೋರಾಟದ ಭಾಗವಾಗಿ ಗೋಕಾಕನಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ತೈಲ ಬೆಲೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ವೇಷಧಾರಿಯನ್ನು ಸತೀಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಮಹಿಳಾ ಕಾರ್ಯಕರ್ತರು ಮೋದಿ ವೇಷಧಾರಿಗೆ ಆರುತಿ ಎತ್ತಿ ತಿಲಕ ಹಚ್ಚಿದರು. ತಾಂಬೂಲ ಕೂಡ ನೀಡಲಾಯಿತು. ಮೋದಿಗೆ ಜೈಕಾರ ಕೂಗಿ, ವ್ಯಂಗ್ಯ ಮಾಡಲಾಯಿತು.

ಕಾರ್ಯಕರ್ತರು ಎತ್ತಿನ ಬಂಡಿ ಚಲಾಯಿಸುವ ಮೂಲಕ ಪೆಟ್ರೋಲ್, ಡೀಸೆಲ್...
Category: Politics
Post date: 14-06-2121

Public News
Public News
Subject ಜೂ.17ಕ್ಕೆ ಅರುಣ್ ಸಿಂಗ್ ರನ್ನು ಶಾಸಕರು ಭೇಟಿ ಮಾಡ್ತೇವೆ: ರೇಣುಕಾಚಾರ್ಯ

ದಾವಣಗೆರೆ: ನಾಯಕತ್ವ ಬದಲಾವಣೆ ಇಲ್ಲ ಎಂಬುದಾಗಿ ವರಿಷ್ಠರೇ ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರಕ್ಕೆ ತಂದ ಯಡಿಯೂರಪ್ಪರ ಶ್ರಮ ಹೇಳಬೇಕಾಗಿಲ್ಲ. ಅದು ರಾಜ್ಯದ ಜನರಿಗೆ ಗೊತ್ತಿದೆ. ಅರುಣ್ ಸಿಂಗ್ ರಿಗೆ ಕರೆ ಮಾಡಿದಾಗ ಅವರ
ಆಪ್ತ ಕಾರ್ಯದರ್ಶಿಗೆ ಸ್ವೀಕರಿಸಿದರು. ಆಗ ಹೊನ್ನಾಳಿಯಲ್ಲಿ ಇದ್ದೇನೆ. ಯೋಗಾಸನ, ಪ್ರಾಣಾಯಾಮ, ಕ್ರಿಕೆಟ್‌ ಸೇರಿದಂತೆ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದೇನೆ. ಕೊರೊನಾ ವೈರಸ್ ಜೊತೆ ಬದುಕುತ್ತಿದ್ದೇನೆ. ಜೂನ್ 17ಕ್ಕೆ ಭೇಟಿಗೆ ಅವಕಾಶ ಕೋರಿದ್ದು, ಇದಕ್ಕೆ ಒಪ್ಪಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

...
Category: Politics
Post date: 14-06-2121

Kshetra Samachara
Kshetra Samachara
Subject ಕಲಘಟಗಿ: ಸೈಕಲ್ ನಿಂದ ತಯಾರಿಸಿದ ಕುಂಟೆಯಿಂದ ಕೃಷಿ ಮಾಡಿದ ರೈತ

ಕಲಘಟಗಿ: ತಾಲೂಕಿನ ಮುಕ್ಕಲ್ ಗ್ರಾಮದ ರೈತರೊಬ್ಬರು ಸ್ವತಃ ಸೈಕಲ್ ನಿಂದ ತಯಾರಿಸಿದ ಸೈಕಲ್ ಕುಂಟೆಯ ಸಹಾಯದಿಂದ ಎಡಿ ಹೊಡೆದು ಕೃಷಿ ಮಾಡಿದ್ದಾರೆ.

ಗ್ರಾಮದ ಶರಣಪ್ಪ ಸಹದೇವಪ್ಪ ಗ್ಯಾನಪ್ಪ ನವರ್ ಎಂಬ ರೈತ ಇಂತಹ ವಿನೂತನ ಪ್ರಯೋಗ ಮಾಡಿದ್ದಾರೆ.
ಬಡ ರೈತನಾಗಿರುವ ಶರಣಪ್ಪ ಎತ್ತುಗಳನ್ನು ಖರೀದಿಸಲಾಗದ ಕಾರಣ ತಮ್ಮ ಹಳೆಯ ಸೈಕಲ್ ನ್ನೇ ಪರಿವರ್ತನೆ ಮಾಡಿ ಎಡಿ ಹೊಡೆಯಲು ಬಳಕೆ ಮಾಡಿದ್ದಾರೆ.

ಮುಂಗಾರಿನ ಗೋವಿನಜೋಳವನ್ನು ಮೂರು ಎಕರೆ ಕೃಷಿ ಭೂಮಿಯಲ್ಲಿ ಬಿತ್ತಿದ್ದು , ಚೆನ್ನಾಗಿ ಬೆಳೆ ಹುಟ್ಟಿ ಬಂದಿರುತ್ತದೆ.ಎತ್ತುಗಳು ಇಲ್ಲದ ಕಾರಣ ಇವರು ಮನೆಯಲ್ಲಿಯೇ ಸ್ವತಃ ಸೈಕಲ್ ನಿಂದ ತಯಾರಿಸಿದ ಸೈಕಲ್ ಕುಂಟೆ...
Category: Agriculture
Post date: 14-06-2121
City: Hubballi-Dharwad

Kshetra Samachara
Kshetra Samachara
Subject ಎರ್ಮಾಳ್ : 800 ಮೆಟ್ರಿಕ್ ಟನ್ ಮರಳು ಅಕ್ರಮ ದಾಸ್ತಾನು; ತಹಸೀಲ್ದಾರ್ ಮುಟ್ಟುಗೋಲು

ಕಾಪು: ಲಾಕ್ ಡೌನ್ ರಿಲೀಫ್ ಆಗುತ್ತಿದ್ದಂತೆಯೇ ಕಾಪು ತಾಲೂಕಿನ ಖಡಕ್ ತಹಸೀಲ್ದಾರ್ ಎಂದೆನಿಸಿರುವ ಪ್ರತಿಭಾ ಆರ್. ಅವರು ಅಕ್ರಮ ದಂಧೆಕೋರರ ಬೇಟೆಗೆ ಇಳಿದಿದ್ದಾರೆ.

ತಾಲೂಕಿನ ಎರ್ಮಾಳ್ ನಲ್ಲಿ ಅಕ್ರಮವಾಗಿ ಸುಮಾರು 800 ಮೆಟ್ರಿಕ್ ಟನ್ ಮರಳನ್ನು ದಾಸ್ತಾನಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತಹಸೀಲ್ದಾರ್ ಮತ್ತವರ ತಂಡ ದಾಳಿ ನಡೆಸಿ ಎಲ್ಲ ಮರಳನ್ನು ಸೀಝ್ ಮಾಡಿದ್ದಾರೆ.

ಈ ಮರಳು ಸಂಗ್ರಹಿಸಲಾದ ಜಾಗ ತೆಂಕ ಗ್ರಾಮದ ಅಶೋಕ್ ರಾಜ್ ಅವರಿಗೆ ಸೇರಿದ್ದು, ಗಿರೀಶ್ ಎಂಬವರು ಮರಳು ರಾಶಿ ಹಾಕಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ನೀಡಿ ಮಹಜರು...
Category: Crime, Law and Order
Post date: 14-06-2121
City: Udupi, Mangalore

Public News
Public News
Subject ಅನಾನಸ್ (ಪೈನಾಪಲ್) ಜಾಮ್ ಮಾಡುವ ವಿಧಾನ

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡುತ್ತಾರೆ. ಎಲ್ಲ ಹಣ್ಣಿನ ಜಾಮ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ನೀವು ಮನೆಯಲ್ಲಿ ಅದನ್ನು ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು, ಮಕ್ಕಳಿಗೂ ಖುಷಿ. ಮಕ್ಕಳು ಆಸೆಯಿಂದ ತಿನ್ನುವ ಜಾಮ್ ಗಳಲ್ಲಿ ಅನಾನಸ್ ಜಾಮ್ ಕೂಡ ಒಂದು.


Category: LadiesCorner
Post date: 14-06-2121
Kshetra Samachara
PublicNext--515062--node-nid
Subject ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15-06-2021) ನೀರು ಸರಬರಾಜು ಮಾಡಲಾಗುವುದು.

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15-06-2021) ನೀರು ಸರಬರಾಜು ಮಾಡಲಾಗುವುದು.

ನೆಹರು ನಗರ,ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಸೆಂಟ್ರಲ್ ಎಕ್ಸೆಂಜ್ ಕಾಲನಿ, ರಾಮಲಿಂಗೇಶ್ವರ ನಗರ ಭಾಗ,ಗೋಕುಲ, ಆನಂದ ನಗರ ಭಾಗ, ಹೊಸೂರ,ಚನ್ನಪೇಟ್ ಅಂಬೇಡ್ಕರ ನಗರ,ದಾಳಿಂಬರ ಪೇಟ್,ದೋಭಿ ಘಾಟ, ಗಿರಣಿ ಚಾಳ, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ,ಕುಲಕರ್ಣಿ ಚಾಳ, ಅಯೋಧ್ಯ ನಗರ, ಅಲ್ತಾಫ್ ಪ್ಲಾಟ್ ಭಾಗ 2, ಮಸ್ತಾನ ಸೋಫಾ,ಕಾಳೇಕರ ಪ್ಲಾಟ್ ಭಾಗ 1,ಕುಂಬಾರ ಓಣಿ, ಇಂದ್ರಾನಗರ ದತ್ತಾತ್ರೇಯ ಗುಡಿ ಲೈನ್,ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್....
Category: WaterPower
Post date: 14-06-2121
City: Hubballi-Dharwad

Public News
Public News
Subject ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ಯುವಕ

ಕಂಪ್ಲಿ: ತನಗೆ ಕಚ್ಚಿದ ನಾಗರಹಾವನ್ನು ಯುವಕ ಕೈಯಲ್ಲಿ ಹಿಡಿದು 13ಕಿ.ಮೀ ಬೈಕ್‍ನಲ್ಲಿ ಕ್ರಮಿಸಿ ಅರೋಗ್ಯ ಕೇಂದ್ರಕ್ಕೆ ಬಂದಿದ್ದಾನೆ. ದಾರಿಯುದ್ದಕ್ಕೂ ಈ ದೃಶ್ಯ ಕಂಡ ಜನ ಕಕ್ಕಾಬಿಕ್ಕಿಯಾಗಿದ್ದಾರೆ. ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದ ವಾಲ್ಮೀಕಿ ಕಾಡಪ್ಪ(25) ಅವರಿಗೆ ನಾಗರಹಾವು ಕಚ್ಚಿದೆ ಕೂಡಲೇ ಇನ್ನೊಬ್ಬರ ನೆರವಿನಿಂದ ಬೈಕ್ ಮೂಲಕ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾನೆ.

ಈ ವೇಳೆ ಹಾವನ್ನು ಬಿಟ್ಟು ಬರುವಂತೆ ಸ್ಥಳೀಯರು ಯುವಕನಿಗೆ ಹೇಳಿದ್ದಾರೆ. ಒತ್ತಯಕ್ಕೆ ಮಣಿದ ಯುವಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಹಾವನ್ನು ಬಿಟ್ಟು ಬಂದಿದ್ದಾನೆ. ನಂತರ ಸ್ಥಳೀಯರು...
Category: Human Stories
Post date: 14-06-2121

Pages