News

E.g., 14/06/2021
Kshetra Samachara
Kshetra Samachara
Subject ಕಟಪಾಡಿ: ಮನೆ ಕಟ್ಟಿ, ಕೊಟ್ಟು ಮಾನವೀಯತೆ ಎತ್ತಿ ಹಿಡಿದ 'ಸತ್ಯದ ತುಳುವೆರ್'; ಬಡ ಮಹಿಳೆಗೊಂದು ಚೆಂದದ ನಿವಾಸ

ವರದಿ: ಶಫೀ ಉಚ್ಚಿಲ

ಕಟಪಾಡಿ: ಇಲ್ಲಿನ ಶಂಕರಪುರ ಶಿವಾನಂದ ನಗರದ ನಿವಾಸಿ ಪ್ರೇಮಾ ಎಂಬ ಅಸಹಾಯಕ ವೃದ್ಧ ಮಹಿಳೆಗೆ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಟಪಾಡಿಯ" ಸತ್ಯದ ತುಳುವೆರ್" ಸಂಸ್ಥೆ, ನೂತನ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.

ತೀರಾ ಬಡತನದಲ್ಲಿದ್ದ ಪ್ರೇಮಾ ಅವರು, ಗಂಡ ತೀರಿ ಹೋದ ಬಳಿಕ ಮಗನೊಂದಿಗೆ ಶಂಕರಪುರದ ಶಿವಾನಂದ ನಗರದಲ್ಲಿರುವ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಚಿಕ್ಕ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದರು. ಇವರ ದುಸ್ಥಿತಿ ಅರಿತ 'ಸತ್ಯದ ತುಳುವೆರ್', ದಾನಿಗಳ ಸಹಕಾರದಿಂದ ಕಾಮಗಾರಿಗಿಳಿದು ಹೊಸ ಮನೆ ನಿರ್ಮಿಸಿ, ಹಸ್ತಾಂತರಿಸಿದೆ...
Category: Human Stories
Post date: 14-06-2121
City: Udupi, Mangalore

Public News
Public News
Subject ಇದು ಬಿಹಾರ, ಯುಪಿಯಲ್ಲ ನಿಮ್ಮದೇ ಸರ್ಕಾರವಿರುವ ರಾಜಸ್ಥಾನ: ರಾಹುಲ್‌ಗೆ ಬಿಜೆಪಿ ಡಿಚ್ಚಿ

ನವದೆಹಲಿ: ರಾಜಸ್ಥಾನದಲ್ಲಿ ಹಾಡಹಗಲೇ ಯುವಕರ ಗುಂಪೊಂದು ವ್ಯಾಪಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ ವಿಡಿಯೋವನ್ನು ರಾಜಸ್ಥಾನದ ಬಿಜೆಪಿ ಮುಖಂಡ ಲಕ್ಷ್ಮಿಪತಿ ಭಾರದ್ವಾಜ್ ಅವರು ಟ್ವೀಟ್ ಮಾಡಿದ್ದು, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

"ಇದು ಹಳೆಯ ಬಿಹಾರ, ಉತ್ತರ ಪ್ರದೇಶವಲ್ಲ. ನಿಮ್ಮದೇ ಸರ್ಕಾರವಿರುವ ಇಂದಿನ ರಾಜಸ್ಥಾನ. ಕೋಟಾದಲ್ಲಿ ಹಾಡ ಹಗಲೇ ಗುಂಪೊಂದು ವ್ಯಾಪಾರಿಗಳ ಮೇಲೆ ಗುಂಡು ಹಾರಿಸುತ್ತಿದ್ದಾರೆ. ಇದು ರಾಜಸ್ಥಾನವನ್ನು ನಾಚಿಕೆಗೇಡು ಮಾಡಿದೆ" ಎಂದು ಬರೆದು ಟ್ವೀಟ್‌ ಅನ್ನು ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿದ್ದಾರೆ.


Category: Crime
Post date: 14-06-2121
Kshetra Samachara
PublicNext--515117--node-nid
Subject ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮತ್ತೆ ಏರಿದ ಕೊರೊನಾ- 707 ಜನ ಡಿಸ್ಚಾರ್ಜ್

ಮಂಗಳೂರು: ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಏರಿಕೆಯಾಗಿದೆ. ಇಂದು 648 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 707 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ಸಮಯದಲ್ಲಿ ಆರು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 84,393ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 76,456ಕ್ಕೆ ಏರಿಕೆಯಾಗಿದೆ. ಈವರೆಗೂ ಒಟ್ಟು 981 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಇನ್ನೂ 6,954 ಸಕ್ರಿಯ ಪ್ರಕರಣಗಳಿವೆ.


Category: Health & Fitness, COVID
Post date: 14-06-2121
City: Mangalore
Public News
PublicNext--515161--node-nid
Subject 40 ಸಾವಿರ ಕೋಟಿ ಸಾಲವಿದ್ದರೂ ಅಧಿಕಾರಿಗಳಿಗೆ ಐಷಾರಾಮಿ- ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿ

ಹೈದರಾಬಾದ್​: ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ತೆಲಂಗಾಣದಲ್ಲಿ ಮೂವತ್ತೆರಡು ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದ್ದು, ಅವರಿಗೆ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಐಷಾರಾಮಿ ಕಿಯಾ ಕಾರ್ನಿವಲ್ ಕಾರುಗಳನ್ನು ಖರೀದಿಸಿದ್ದಾರೆ.

ಈ ಪ್ರತಿಯೊಂದು ಕಾರಿಗೆ 25ರಿಂದ 30 ಲಕ್ಷ ವೆಚ್ಚವಾಗಿದೆ. ಕೋವಿಡ್ ವಿರುದ್ಧ ಹೋರಾಡಲು ರಾಜ್ಯವು ಸುಮಾರು 40 ಸಾವಿರ ಕೋಟಿ ರೂ. ಸಾಲಕ್ಕೆ ತುತ್ತಾಗಿದ್ದು, ಈ ಸಮಯದಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಪ್ರತಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಹೈದರಾಬಾದ್‌ನಲ್ಲಿರುವ ಮುಖ್ಯಮಂತ್ರಿಯವರ ನಿವಾಸವಾದ ಪ್ರಗತಿ...
Category: Politics
Post date: 14-06-2121

Kshetra Samachara
Kshetra Samachara
Subject ಬುಡೋಳಿ: ಗುಡ್ಡ ಕುಸಿದು 4 ಮನೆಗಳಿಗೆ ಹಾನಿ; ನುಗ್ಗಿದ ಕೆಸರು ನೀರು

ಬಂಟ್ವಾಳ: ಮಾಣಿ ಸಮೀಪದ ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಭಾರಿ ಗಾಳಿ- ಮಳೆಗೆ ಗುಡ್ಡ ಕುಸಿದು ನಾಲ್ಕು ಮನೆಗಳಿಗೆ ಹಾನಿಯಾಗಿದೆ.

ಜೋಹರಾ ಅಬೂಬಕ್ಕರ್, ಬಶೀರ್, ಅವ್ವಮ್ಮ ಅಬ್ದುಲ್ ರಹಿಮಾನ್ ಮತ್ತು ಸುಲೈಮಾನ್ ಅವರ ಮನೆಯೊಳಗೆ ಮಣ್ಣು ಮತ್ತು ಕೆಸರು ನೀರು ತುಂಬಿ ವಾಸಿಸಲು ಅಯೋಗ್ಯವಾಗಿದೆ. ಗುಡ್ಡ ಕುಸಿದ ಮಣ್ಣು ಜೋಹರಾ ಅಬೂಬಕ್ಕರ್ ಅವರ ಕುಡಿಯುವ ನೀರಿನ ಬಾವಿಯನ್ನು ಮುಚ್ಚಿಬಿಟ್ಟಿದೆ.

ಬಾವಿಯಿಂದ ಎದ್ದ ನೀರು ಮತ್ತು ಬಿರುಮಳೆಗೆ ಬಂದ ಕೆಸರುನೀರು ಈ ಮನೆಗಳಿಗೆ ತುಂಬಿಕೊಂಡಿದೆ. ಸ್ಥಳಕ್ಕೆ ಪೆರಾಜೆ ಗ್ರಾಪಂ ಅಧ್ಯಕ್ಷೆ ರೋಹಿಣಿ, ಪಿಡಿಒ ಶಂಭು ಕುಮಾರ್ ಶರ್ಮ ಮತ್ತು ಗ್ರಾಮಕರಣಿಕರಾದ ಸುರಕ್ಷಾ ಭೇಟಿ...
Category: Nature
Post date: 14-06-2121
City: Udupi, Mangalore

Kshetra Samachara
Kshetra Samachara
Subject ಅನ್‌ಲಾಕ್‌ ಆಯ್ತು ಧಾರವಾಡ ಬನ್ರಪ್ಪಾ..!

ಧಾರವಾಡ: ಹಾ ನಮಸ್ಕಾರ್ರಿ ಧಾರವಾಡ ಮಂದಿಗೆ.. ಧಾರವಾಡ ಜಿಲ್ಲಾ ಅಂತೂ ಇವತ್ತಿಂದ ಅನ್‌ಲಾಕ್ ಆಗೇತಿ. ಮಧ್ಯಾಹ್ನ 2 ಗಂಟೆಮಟಾ ಬೇಕಾದಂಗ ನಿಮಗ ನಿಮಗ ಬೇಕಾದ ಸಾಮಾನ ಖರೀದಿ ಮಾಡಬಹುದು ನೋಡ್ರಿ.

ಇವತ್ತಿಂದ ಧಾರವಾಡ ಸಾಮಾನ್ಯ ಸ್ಥಿತಿಗೆ ಬಂದಂಗ ಆಗೇತಿ ನೋಡ್ರಿ. ಧಾರವಾಡದ ಪ್ರಮುಖ ರಸ್ತೆಗಳಂತೂ ವಾಹನ ದಟ್ಟನೆಯಿಂದ ಸಂಪೂರ್ಣ ಜಾಮ್ ಆಗಿದ್ದು. ಇನ್ನ ಮಾರ್ಕೆಟ್ ಕಥಿ ಹೆಂಗ ಅತೀರೆನು? ಮಾರ್ಕೆಟ್‌ನ್ಯಾಗೂ ಹಂಗರೀ ಜನಾ ಫುಲ್ ಜಾಮ್ ಆಗಿದ್ರು. ಇನ್ನ ಸಿಗ್ನಲ್‌ಗಳಂತೂ ಇವತ್ತಿಂದ ಮತ್ತ ಕೆಲಸಾ ಚಾಲೂ ಮಾಡಿದ್ದು ನೋಡ್ರಿ.

ಮಧ್ಯಾಹ್ನ 2 ಗಂಟೆಮಟಾ ದಿನಸಿ, ತರಕಾರಿ, ಹಣ್ಣು, ಹಾಲು, ಮದ್ಯ, ಮಾಂಸ ಸೇರಿದಂಗ ಬೇರೆ...
Category: Law and Order
Post date: 14-06-2121
City: Hubballi-Dharwad

Kshetra Samachara
PublicNext-475123-515152-Udupi-Mangalore-Others-node
Subject ಪರ್ಕಳ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಭೂಕುಸಿತ- ಅಪಾಯಕ್ಕೆ ಆಹ್ವಾನ!

ಪರ್ಕಳ: ಉಡುಪಿಯ ಪರ್ಕಳ ಪೇಟೆಯಲ್ಲಿ ಮಾಜಿ ನಗರಸಭಾ ಸದಸ್ಯರ ಮನೆಯ ಎದುರೇ ಭೂಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಗಾಗಿ ತರಾತುರಿಯಲ್ಲಿ ಕಟ್ಟಡಗಳನ್ನು ಕೆಡವಿ ಅಗಲೀಕರಣ ಮಾಡಿದ ಜಾಗದಲ್ಲಿಯೇ ಭೂ ಕುಸಿತ ಕಂಡುಬಂದಿದ್ದು, ವಾಹನ ಚಾಲಕರು ಅಪ್ಪಿತಪ್ಪಿ ಪಕ್ಕಕ್ಕೆ ಚಲಿಸಿದರೆ ಹೊಂಡದ ಒಳಗೆ ಬೀಳುವುದು ಖಂಡಿತ.

ತರಾತುರಿಯಲ್ಲಿ ಒಕ್ಕಲೆಬ್ಬಿಸಿದ ಜಾಗದಲ್ಲಿ ಈ ಹಿಂದೆ ಬಾವಿಯಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈಗಾಗಲೇ ಇಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಜನನಿಬಿಡ ಪ್ರದೇಶವಾಗಿರುವುದರಿಂದ ಬಸ್‌ ನಿಲುಗಡೆಯಾಗುವ ಜಾಗ ಕೂಡ ಈ ಪ್ರದೇಶವಾಗಿದೆ. ಕೂಡಲೇ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡಬೇಕು....
Category: Others
Post date: 14-06-2121
City: Udupi, Mangalore

Kshetra Samachara
PublicNext--515120--node-nid
Subject ಉಡುಪಿ: ಜಿಲ್ಲೆಯಲ್ಲಿ ಇಂದು 122 ಜನರಿಗೆ ಕೊರೊನಾ- 345 ಜನ ಡಿಸ್ಚಾರ್ಜ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಕೊಂಚ ಕಡಿಮೆಯಾಗಿದೆ. ಇಂದು 122 ಮಂದಿಗೆ ಸೋಂಕು ತಗುಲಿದ್ದು, ಕೊರೊನಾ ಸೋಂಕಿನಿಂದ 460 ಮಂದಿ ಗುಣಮುಖರಾಗಿದ್ದಾರೆ. ಇದೇ ಸಮಯದಲ್ಲಿ ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಇಂದು ಜಿಲ್ಲೆಯಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 64,390ಕ್ಕೆ ಏರಿಕೆಯಾದರೆ, ಚೇತರಿಸಿಕೊಂಡವರ ಸಂಖ್ಯೆ 61,055ಕ್ಕೆ ತಲುಪಿದೆ. ಈವರೆಗೆ ಒಟ್ಟು 358 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.


Category: Health & Fitness, COVID
Post date: 14-06-2121
City: Udupi
Kshetra Samachara
PublicNext--515107--node-nid
Subject ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಭಾರೀ ಇಳಿಕೆ- 220 ಮಂದಿ ಡಿಸ್ಚಾರ್ಜ್

ಧಾರವಾಡ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ತಗ್ಗಿದ್ದು, ದಿನದಿಂದ ದಿನಕ್ಕೆ ಕೇಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದು ಕೂಡ ಕಡಿಮೆ ಜನರಿಗೆ ಸೋಂಕು ದೃಢಪಟ್ಟಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಜಿಲ್ಲೆಯ 103 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 59,001ಕ್ಕೆ ಏರಿಕೆಯಾಗಿದೆ. ಇನ್ನು ಇಂದು 220 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 56,251ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 10 ಮಂದಿ...
Category: Health & Fitness, COVID
Post date: 14-06-2121
City: Hubballi-Dharwad

Pages