News

E.g., 14/06/2021
Kshetra Samachara
PublicNext-474690-514323-Mangalore-News-node
Subject ಪಡುಪಣಂಬೂರು: ಸ್ವಚ್ಛತೆ ಮೂಲಕ ಕೊರೊನಾ ನಿರ್ಮೂಲನೆ ಸಾಧ್ಯ: ಹರಿಪ್ರಸಾದ್

ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಎರಡನೇ ವಾರ್ಡಿನ ಮೂಡು ತೋಟ ರಸ್ತೆ ಬದಿಯ ಗಿಡಗಂಟಿಗಳನ್ನು ಹಾಗೂ ಪೊದೆಗಳನ್ನು ಸ್ಥಳೀಯ ಪಂಚಾಯತ್ ಸದಸ್ಯ ಹರಿಪ್ರಸಾದ್, ಪಿಸಿಎ ಬ್ಯಾಂಕ್ ನಿರ್ದೇಶಕ ಶ್ಯಾಮ್ ಪಡುಪಣಂಬೂರು ನೇತೃತ್ವದಲ್ಲಿ ಜ್ವಾಲಿ ಫ್ರೆಂಡ್ಸ್ ನ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಪಡಿಸಿದ್ದಾರೆ.

ಈ ಸಂದರ್ಭ ಹರಿಪ್ರಸಾದ್ ಮಾತನಾಡಿ ಗ್ರಾಮ ಗ್ರಾಮಗಳಲ್ಲಿ ಯುವಕರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಮೂಲಕ ಕೊರೊನಾ ನಿರ್ಮೂಲನೆ ಸಾಧ್ಯ ಎಂದರು. ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಶಾಸಕರ ಮುಖಾಂತರ ಮತ್ತಷ್ಟು ಒತ್ತು ನೀಡಲಾಗುವುದು ಎಂದರು.


Category: News
Post date: 14-06-2121
City: Mangalore
Public News
PublicNext--514262--node-nid
Subject ಪಕೋಡ ಮಾರಿ ಅಂದ್ರು, ಆದ್ರೀಗ ಅಡುಗೆ ಎಣ್ಣೆ 250 ರೂ.: ಡಿಕೆಶಿ ಕಿಡಿ

ತುಮಕೂರು: ಪಕೋಡ ಮಾರಿ ಅಂದ್ರು, ಅದನ್ನು ಮಾಡೋಣ ಅಂದ್ರೆ ಎಣ್ಣೆ 250 ರೂಪಾಯಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ತೈಲ ಬೆಲೆ ಹೆಚ್ಚಳ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ 100 ನಾಟ್​​ಔಟ್ ಎಂಬ​ ಕಾರ್ಯಕ್ರಮದ ನಡೆಸುತ್ತಿದ್ದು, ಇಂದು ಮೂರನೇ ದಿನ ಪ್ರತಿಭಟನೆ ಮುಂದುವರೆದಿದೆ. ನಗರದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರವು ಜನರ ಜೇಬಿಗೆ ಕತ್ತರಿ ಹಾಕಿ ಪಿಕ್ ಪಾಕೆಟ್​​ ಮಾಡುತ್ತಿದೆ. ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಬಂದು ಜನರನ್ನು ಕ್ಯೂನಲ್ಲಿ...
Category: Politics
Post date: 13-06-2121

Kshetra Samachara
PublicNext--514205--node-nid
Subject ಐಕಳ: ವಿದ್ಯುತ್ ಪ್ರವಹಿಸಿ ಮನೆ ಯಜಮಾನ ಸಾವು; ಮೆಸ್ಕಾಂ ನಿರ್ಲಕ್ಷ್ಯ ಆರೋಪ

ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಪಂ ವ್ಯಾಪ್ತಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ಮನೆಯಲ್ಲಿ ವಿದ್ಯುತ್ ಪ್ರವಹಿಸಿ ಮನೆ ಯಜಮಾನ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ. ಮಾಧವ ಆಚಾರ್ಯ (55) ಮೃತಪಟ್ಟವರು.

ಶನಿವಾರ ಸಂಜೆ ಭಾರಿ ಮಳೆ- ಗಾಳಿಯಿಂದ ಮಾಧವ ಅವರ ಮನೆ ಮೇಲೆ ಮರದ ಗೆಲ್ಲು ಬಿದ್ದಿದ್ದು, ವಿದ್ಯುತ್ ಕಡಿತಗೊಂಡಿತ್ತು. ಈ ಬಗ್ಗೆ ಕಿನ್ನಿಗೋಳಿ ಮೆಸ್ಕಾಂ ಸಂಪರ್ಕಿಸಿದಾಗ ಸಿಬ್ಬಂದಿ ಮರದ ಗೆಲ್ಲು ಕಡಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಆಗ ಮನೆಯವರೇ ಗೆಲ್ಲು ತುಂಡರಿಸಿದ್ದು, ಭಾನುವಾರ ಮೆಸ್ಕಾಂ ಸಿಬ್ಬಂದಿ ಬಂದು ತಾತ್ಕಾಲಿಕ ನೆಲೆಯಲ್ಲಿ ಮನೆಯೆದುರಿನ ಭಾಗದಲ್ಲಿ ವಿದ್ಯುತ್...
Category: Crime, WaterPower
Post date: 13-06-2121
City: Udupi, Mangalore

Kshetra Samachara
PublicNext--514277--node-nid
Subject ಮಂಗಳೂರು: ಟ್ವೀಟ್ ಮೂಲಕ ತುಳು ಭಾಷೆಗೆ ಅಧಿಕೃತ ರಾಜ್ಯಭಾಷೆ ಮಾನ್ಯತೆಯ ಭರವಸೆ ನೀಡಿದ ನಳಿನ್

ಮಂಗಳೂರು: ತುಳುಭಾಷೆಗೆ ನಮ್ಮ ಅವಧಿಯಲ್ಲಿಯೇ ರಾಜ್ಯಭಾಷೆಯ ಸ್ಥಾನಮಾನ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ‌.

ಒಂದಷ್ಟು ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ನಮ್ಮ ಅವಧಿಯಲ್ಲಿಯೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುತ್ತೇವೆ ಎಂದು ಹೇಳಿರುವ ಅವರು, ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಸರಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿ, ತುಳುವರ ಸಾಕಷ್ಟು ವರ್ಷಗಳ ಕೂಗಿಗೆ ಬಲ ನೀಡುವಂತಹ ಬೆಂಬಲ ನೀಡಿದ್ದಾರೆ‌.

ತುಳುಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂದು...
Category: Politics
Post date: 13-06-2121
City: Udupi, Mangalore

Public News
PublicNext--514254--node-nid
Subject ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು- ಸರ್ಕಾರದ ಜೊತೆ ಮಾತುಕತೆ: ಕಟೀಲ್

ಬೆಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ವಿಚಾರವಾಗಿ ತುಳುವಿನಲ್ಲಿ ಟ್ವೀಟ್ ಮಾಡಿದ ಕಟೀಲ್ ಅವರು, "ನನ್ನ ಮಾತೃ ಭಾಷೆಗೆ ರಾಜ್ಯ ಭಾಷೆ ಸಂಬಂಧ ನಡೆಯುವ ಆಗ್ರಹಕ್ಕೆ ಸಂಪೂರ್ಣ ಬೆಂಬಲವಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.


Category: Politics
Post date: 13-06-2121
Kshetra Samachara
PublicNext--514204--node-nid
Subject ಮಂಗಳೂರು: ಜಿಲ್ಲೆಯ 17 ಗ್ರಾಮಗಳು ಜೂ.14 ರಿಂದ 21ರವರೆಗೆ ಸಂಪೂರ್ಣ ಸೀಲ್ ಡೌನ್

ಮಂಗಳೂರು: ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ 17 ಗ್ರಾಮಗಳು ಜೂನ್ 14ರ ಬೆಳಗ್ಗೆ 9ರಿಂದ ಜೂನ್ 21ರ ಬೆಳಗ್ಗೆ 9ರ ವರೆಗೆ ಸಂಪೂರ್ಣ ಸೀಲ್ ಡೌನ್ ಆಗಲಿದೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

ದ.ಕ. ಜಿಪಂ ಸಿಇಒ ವರದಿ ಆಧರಿಸಿ 50ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗಿರುವ ಗ್ರಾಪಂಗಳನ್ನು ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಮಂಗಳೂರಿನ ಕೊಣಾಜೆ, ನೀರುಮಾರ್ಗ, ಬೆಳ್ತಂಗಡಿಯ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ, ಸುಳ್ಯ ತಾಲೂಕಿನ ಐವರ ನಾಡು, ಅಮರಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು...
Category: Health & Fitness, COVID
Post date: 13-06-2121
City: Udupi, Mangalore

Kshetra Samachara
PublicNext--514273--node-nid
Subject ಅಣ್ಣಿಗೇರಿ: ನಲವಡಿಯ ರಾಡಿಹಳ್ಳ, ಯರನಹಳ್ಳ ಹೂಳೆತ್ತಲು ಜಿಲ್ಲಾಧಿಕಾರಿಗೆ ಒತ್ತಾಯ

ಅಣ್ಣಿಗೇರಿ: ತಾಲೂಕಿನ ನಲವಡಿ ಗ್ರಾಮ ಹದ್ದಿನ ರಾಡಿಹಳ್ಳ ಮತ್ತು ಯರನಹಳ್ಳದ ಹೂಳೆತ್ತಿ ರೈತರಿಗೆ ಅನುಕೂಲ ಮಾಡಬೇಕು ಎಂದು ರೈತ ಮುಖಂಡ ಪ್ರದೀಪ ಲೆಂಕನಗೌಡ್ರ ಒತ್ತಾಯಿಸಿದ್ದಾರೆ.

ಈ ಎರಡು ಹಳ್ಳಗಳಲ್ಲಿ ಮುಳ್ಳು ಕಂಟೆಗಳು ಮತ್ತು ಮಣ್ಣು ತುಂಬಿ ಹಳ್ಳಗಳಲ್ಲಿ ನೀರು ಸರಿಯಾಗಿ ಹೋಗುತ್ತಿಲ್ಲ. ಈ ಕುರಿತು ಮೌಖಿಕವಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಇದರ ಕಡೆ ಗಮನ ಹರಿಸಿ ಹಳ್ಳಗಳಲ್ಲಿರುವ ಮುಳ್ಳು ಕಂಟೆಗಳು ಮತ್ತು ಮಣ್ಣನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಬೇಕು. ರೈತರು ಹೊಲಗಳಿಗೆ ಹೋಗಲು ಸುಸಜ್ಜಿತವಾದ ರಸ್ತೆ ನಿರ್ಮಿಸಿ ಕೊಡಬೇಕು ಎಂದು...
Category: Others
Post date: 13-06-2121
City: Hubballi-Dharwad

Public News
Public News
Subject ಕುದುರೆ ಜೊತೆ ರೇಸ್​​ಗಿಳಿದ ಧೋನಿ

ರಾಂಚಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮೈದಾನದ ಹೊರಗೂ ಫುಲ್‌ ಆ್ಯಕ್ಟಿವ್ ಆಗಿರುತ್ತಾರೆ. ಮೈದಾನದಲ್ಲಿ ರನ್​ಗಳ ಹಿಂದೆ ಓಡುವ ಧೋನಿ ಇದೀಗ ಕುದುರೆಯೊಂದರ ಜೊತೆಗೆ ರೇಸ್​ಗೆ ಇಳಿದಿದ್ದಾರೆ.

ಎಂ.ಎಸ್‌.ಧೋನಿ ಪತ್ನಿ ಸಾಕ್ಷಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಧೋನಿ ಕುದುರೆಯ ಬೆನ್ನತ್ತಿದ್ದಾರೆ. ಇದಕ್ಕೆ "ಧೋನಿ ಮತ್ತಷ್ಟು ವೇಗಿಯಾಗಿದ್ದಾರೆ" ಎಂದು ಶೀರ್ಷಿಕೆ ಹಾಕಿ ಕುತೂಹಲ ಮೂಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಧೋನಿ ಚೇತಕ್ ಹಾಗೂ ಲಿಲ್ಲಿ ಎಂಬ ಹೆಸರಿನ ಎರಡು ಕುದುರೆಗಳನ್ನು ಖರೀದಿಸಿದ್ದರು. ಕುದುರೆಯೊಂದಿಗಿನ ಫೋಟೋವನ್ನು...
Category: Sports
Post date: 13-06-2121

Public News
PublicNext--514201--node-nid
Subject ರಾಜಸ್ಥಾನದಲ್ಲಿ 'ಕೈ' ನಾಯಕರ ಕಿತ್ತಾಟ ಮತ್ತೆ ಬಹಿರಂಗ: ಸಚಿನ್ ಪೈಲಟ್ ಬಣದಿಂದ ಫೋನ್ ಟ್ಯಾಪ್!

ಜೈಪುರ: ರಾಜಸ್ಥಾನ ಕಾಂಗ್ರೆಸ್ ನಾಯಕರ ಕಿತ್ತಾಟ ಮುಂದುವರಿದಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣದ ವಿರುದ್ಧ ಸಚಿನ್ ಪೈಲಟ್ ಬಂಡಾಯ ಬಣವು ಗಂಭೀರ ಆರೋಪ ಮಾಡಿದೆ.

ಸಚಿನ್ ಪೈಲಟ್ ಬಣದ ಶಾಸಕ ವೇದ ಪ್ರಕಾಶ್ ಸೋಲಂಕಿ ಅವರು, "ಕೆಲ ಶಾಸಕರು, ನಾಯಕರ ಫೋನ್ ಟ್ಯಾಪ್ ಆಗಿದೆ. ಇದೀಗ ಶಾಸಕರಿಗೆ ತಾವು ಯಾವುದಾರು ಎಜೆನ್ಸಿ ಬಲೆಗೆ ಬೀಳುವ ಅಪಾಯವಿದೆ. ನನ್ನ ಫೋನ್ ಟ್ಯಾಪ್ ಮಾಡಲಾಗಿದೆಯಾ ಎನ್ನವುದು ತಿಳಿದಿಲ್ಲ. ಆದರೆ ಕೆಲ ಶಾಸಕರು ತಮ್ಮ ತಮ್ಮ ಫೋನ್ ಟ್ಯಾಪ್ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ" ಎಂದು ತಮ್ಮ ಪಕ್ಷ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.

ಅಶೋಕ್ ಗೆಹ್ಲೋಟ್ ವಿರುದ್ಧ...
Category: Politics
Post date: 13-06-2121

Pages