News

E.g., 15/06/2021
Kshetra Samachara
Kshetra Samachara
Subject ಸೆಮಿ ಲಾಕ್ ಡೌನ್ ಇದ್ರೂ ಸಹ ಮಾರುಕಟ್ಟೆಯಲ್ಲಿ ಜನ ಇಲ್ಲಾ

ನವಲಗುಂದ : ರಾಜ್ಯಾದ್ಯಂತ ಇಂದಿನಿಂದ 20 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ಹಿನ್ನೆಲೆ ಸೋಮವಾರ ನವಲಗುಂದ ಪಟ್ಟಣದಲ್ಲಿ ಜನರು ಮಾರುಕಟ್ಟೆಯತ್ತ ಬರುವ ನಿರೀಕ್ಷೆ ಇತ್ತು, ಆದರೆ ಪಟ್ಟಣದ ಮಾರುಕಟ್ಟೆ ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿತ್ತು.

ಹೌದು ಇಂನಿಂದ ಧಾರವಾಡ ಜಿಲ್ಲೆಯಾದ್ಯಂತ ಸೆಮಿ ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಬೆಳ್ಳಂಬೆಳಿಗ್ಗೆ ಮಾರುಕಟ್ಟೆಗೆ ಮುಗಿಬಿಳುವ ದೃಶ್ಯಗಳು ಕಂಡು ಬರಬಹುದು ಎಂಬ ಆತಂಕ ವಿತ್ತು. ಆದರೆ ಸಾರ್ವಜನಿಕರು ಜಾಗೃತರಾಗಿದ್ದು, ಮಧ್ಯಾಹ್ನದ ವರೆಗೆ ಸಮಯ ಇರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಕೊರತೆ ಇತ್ತು. ಇದರಿಂದ ವ್ಯಾಪಾರಸ್ತರಿಗೂ ಕೊಂಚ ನಿರಾಸೆ ಮುಡಿತ್ತು...
Category: COVID
Post date: 14-06-2121
City: Hubballi-Dharwad

Public News
PublicNext--514366--node-nid
Subject ತುಂಬ ದಪ್ಪ, ಆಂಟಿ ತರ ಕಾಣಿಸ್ತೀರಿ ಅಂದ್ರು: ಬೇಸರ ಹೊರಹಾಕಿದ ಪ್ರಿಯಾಮಣಿ

ಎರಡನೇ ಆವೃತ್ತಿಯ ಫ್ಯಾಮಿಲಿ ಮ್ಯಾನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಿಯಮಾಣಿ ಪಾತ್ರ ಮೆಚ್ಚುಗೆ ಗಳಿಸಿಕೊಂಡಿದೆ. ಮದುವೆ ಆದ್ಮೇಲೆ ಒಳ್ಳೊಳ್ಳೆ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುತ್ತಿರುವ ಪ್ರಿಯಾಮಣಿ, ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರ ಪ್ರಶಸ್ತಿ ವಿಜೇತೆ ''ನನ್ನ ಆಂಟಿ ಅಂದ್ರು, ಕಪ್ಪು ಆಗಿ ಕಾಣ್ತಿಯಾ ಅಂದ್ರು, ಡುಮ್ಮಿ ಅಂದ್ರು'' ಎಂದು ಬೇಸರ ಹೊರಹಾಕಿದ್ದಾರೆ.

'ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ತೂಕ 65 ಕೆಜಿವರೆಗೂ ಏರಿಕೆಯಾಗಿತ್ತು. ಈಗ ಇರುವುದಕ್ಕಿಂತ ದಪ್ಪ ಕಾಣುತ್ತಿದ್ದೆ. ಆ ಸಂದರ್ಭದಲ್ಲಿ...
Category: Health & Fitness, Cinema
Post date: 14-06-2121

Public News
PublicNext-474715-514354-Politics-Agriculture-node
Subject ಜೂನ್ 15ರಂದು ಸಿಎಂ ಹಾಗೂ ಸಚಿವರ ಮನೆ ಎದುರು ರೈತರ ಪ್ರತಿಭಟನೆ

ಬೆಂಗಳೂರು: ಕೊರೊನಾ ಗಂಡಾಂತರದ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಬೀರಿದೆ. ಅದರಂತೆ ಕೃಷಿ ಕ್ಷೇತ್ರ ಕೂಡ ತತ್ತರಿಸಿದೆ. ಬೆಳೆಗೆ ಮಾರುಕಟ್ಟೆ ಇಲ್ಲದೇ, ಸೂಕ್ತ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಈ ಸನ್ನಿವೇಶದಲ್ಲಿ ವಿಶೇಷ ಪ್ಯಾಕೇಜ್ ಒದಗಿಸುವಂತೆ ಮತ್ತು ಕೊರೋನಾ ಮೂರನೇ ಅಲೆಗೆ ತಕ್ಷಣವೇ ಸಿದ್ಧತೆ ಮಾಡಿಕೊಳ್ಳುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ.

ಇದೇ 15ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದ ಎದುರು ಮತ್ತು ಸಚಿವರು ಹಾಗೂ ಬಿಜೆಪಿಯ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.


Category: Politics, Agriculture
Post date: 14-06-2121
Public News
PublicNext--514414--node-nid
Subject ಜೂನ್ 16ರಂದು ರಾಜ್ಯಕ್ಕೆ ಅರುಣ್ ಸಿಂಗ್: ಶಾಸಕರಿಂದ ಅಭಿಪ್ರಾಯ ಸಂಗ್ರಹ

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ಮೂರು ದಿನಗಳ ಅಗ್ನಿ ಪರೀಕ್ಷೆ ಶುರುವಾಗಲಿದೆ. ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಜೂ.16 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಅವರೊಬ್ಬರೇ ಬಂದು ಶಾಸಕರ ಅಭಿಪ್ರಾಯ ಸಂಗ್ರಹಿಸಿದರೆ ಏಕಾಭಿಪ್ರಾಯ ವ್ಯಕ್ತವಾಗಬಹುದು. ಹಾಗಾಗಿ ಕನಿಷ್ಠ ಇಬ್ಬರು ನಾಯಕರನ್ನು ಹೈಕಮಾಂಡ್ ಕಳುಹಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆದರೆ ಹೈಕಮಾಂಡ್ ಈ ಬಗ್ಗೆ ಇನ್ನು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು 2011ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಮಾದರಿಯಲ್ಲಿ ಶಾಸಕಾಂಗ ಸಭೆ...
Category: Politics
Post date: 14-06-2121

Kshetra Samachara
PublicNext--514363--node-nid
Subject ಹುಬ್ಬಳ್ಳಿ: ಕೊರೊನಾಗೆ ಹೆದರಿ ಕಿಮ್ಸ್ ನಲ್ಲಿ ನೇಣಿಗೆ ಶರಣಾದ ವೃದ್ಧ

ಹುಬ್ಬಳ್ಳಿ: ಕೊರೋನಾ ಪಾಸಿಟಿವ್ ಆಗಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧನೋರ್ವ ಕಿಮ್ಸ್ ಆಸ್ಪತ್ರೆಯ ಬಾತ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಕಿಮ್ಸ್ ಕೋವಿಡ್ ವಾರ್ಡ್ ನಂ 303 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಕೆಲ ದಿನಗಳಿಂದ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಮೃತ ವ್ಯಕ್ತಿ ಸುಮಾರು 78 ವಯಸ್ಸಿನವರಾಗಿದ್ದು, ಹುಬ್ಬಳ್ಳಿಯ ರಣದಮ್ಮ ಕಾಲೋನಿಯ ನಿವಾಸಿ ಎಂದು ಹೇಳಲಾಗಿದ್ದು, ಹಿಟ್ಟಿನ ಗಿರಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನೆಂದು ಗೊತ್ತಾಗಿದೆ.

ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ, ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಈ ಸಮಯದಲ್ಲಿ...
Category: Crime, COVID
Post date: 14-06-2121
City: Hubballi-Dharwad

Public News
PublicNext--514341--node-nid
Subject 'ಬಬ್ರುವಾಹನ' ಚಿತ್ರದ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ

ಬೆಂಗಳೂರು: 'ಹುಲಿ ಹಾಲಿನ ಮೇವು', 'ಬಬ್ರುವಾಹನ' ಚಿತ್ರಗಳ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್(69) ನಿಧನರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಚಂದ್ರಶೇಖರ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಚಂದ್ರಶೇಖರ್ ಆಯ್ಕೆ ಆಗಿದ್ದರು. ಶಿವಾನಂದ ಸರ್ಕಲ್ ಬಳಿ ಇರುವ ಮೃತರ ನಿವಾಸದಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಅಂತಿಮ ದರ್ಶನ ಪಡೆಯಬಹುದಾಗಿದೆ.


Category: Cinema
Post date: 14-06-2121
Kshetra Samachara
Kshetra Samachara
Subject ಬೆಳಪು: ಕರುಳ ಕಾಯಿಲೆಗೆ ತುತ್ತಾದ ಎಳೆಯ; ಬಡಕುಟುಂಬದಿಂದ ಶಸ್ತ್ರಚಿಕಿತ್ಸೆಗೆ ನೆರವು ಯಾಚನೆ

ವರದಿ: ಶಫೀ ಉಚ್ಚಿಲ

ಕಾಪು: 14ರ ಹರೆಯದ ಬಾಲಕನೋರ್ವ ಕಳೆದ 4 ತಿಂಗಳಿನಿಂದ ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದು, ಬಡ ಕುಟುಂಬ ಚಿಕಿತ್ಸೆ ನೀಡಲಾಗದೆ ಅಸಹಾಯಕ ಸ್ಥಿತಿಯಲ್ಲಿದೆ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿರುವ ರಹ್ಮತ್ ಎಂಬವರ ಇಬ್ಬರು ಮಕ್ಕಳಲ್ಲಿ ಕಿರಿಯನಾದ ಇಮಾಮ್ ಖಾನ್ ಕಾಯಿಲೆಗೆ ತುತ್ತಾದ ಬಾಲಕ. ತಂದೆ 2 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ.
8ನೇ ತರಗತಿಯಲ್ಲಿ ಕಲಿಯುತ್ತಿದ್ದ ಇಮಾಮ್ 4 ತಿಂಗಳಿನಿಂದ ಕರುಳ ಕಾಯಿಲೆ ವಿರುದ್ಧ ಹೋರಾಡುತ್ತಿದ್ದಾನೆ.
ಅನಾರೋಗ್ಯ ಪೀಡಿತ ಮಗನ ಚಿಂತೆಯಲ್ಲಿ ತಾಯಿ...
Category: Human Stories
Post date: 14-06-2121
City: Udupi, Mangalore

Public News
PublicNext--514358--node-nid
Subject ದಿನ ಭವಿಷ್ಯ: 14 ಜೂನ್ 2021

ಮೇಷ ರಾಶಿ:
ಭೂ ಖರೀದಿ, ವಾಹನ ಖರೀದಿ,ಗೃಹ ನಿರ್ಮಾಣ, ಇದು ಸಕಾಲ ,ವಿಚ್ಛೇದನ ಅಥವಾ ವಿಧವಾ ಮಹಿಳೆಯ ಅಥವಾ ಪುರುಷರಿಗೆ ಮರು ಮದುವೆ ಸಾಧ್ಯತೆ ಇದೆ, ಉದ್ಯೋಗ ಕ್ಷೇತ್ರದಲ್ಲಿ ಒತ್ತಡವಿದ್ದರೂ ಮುನ್ನಡೆಯಿರಿ, ನಿಮ್ಮ ಅನಿಸಿಕೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ, ವ್ಯಾಪಾರ ವಹಿವಾಟಿನಲ್ಲಿ ಲಾಭಾಂಶ ಉತ್ತಮವಾಗಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಸದ್ಯಕ್ಕೆ ಬಂಡವಾಳ ಹಾಕುವುದು ಬೇಡ, ಕೆಲಸದಲ್ಲಿ ಧನಾಗಮನವಿದೆ, ದಾಯಾದಿಗಳಿಂದ ಆಗಾಗ ವಾದ-ವಿವಾದಗಳು ಸೃಷ್ಟಿ, ನಿಮ್ಮ ನೆಮ್ಮದಿ ಕೆಡಿಸಲಿದೆ.

ವೃಷಭ ರಾಶಿ:
ಕೆಲಸ ಪಡೆಯುವುದಕ್ಕಾಗಿ ಪ್ರಯತ್ನಬಲದ ಅಗತ್ಯವಿದೆ, ಉದ್ಯೋಗದಲ್ಲಿ ಶತ್ರುಗಳ ಕಾಟ ಕಿರಿಕಿರಿ...
Category: Astrology
Post date: 14-06-2121

Public News
PublicNext--514336--node-nid
Subject ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹೋರಾಡಿದ್ದು ಯಾವ ಉದ್ದೇಶಕ್ಕಾಗಿ?: ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಹೋರಾಡುತ್ತಿರುವುದು ತೆರಿಗೆ ಇಳಿಸಲೋ ಅಥವಾ ಪೆಟ್ರೋಲ್‌ ಅನ್ನು ಜಿಎಸ್ ಟಿಗೆ ಸೇರಿಸಲೋ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ, ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧದ ಹೋರಾಟಗಳು ತೆರಿಗೆ, ಸುಂಕ ಇಳಿಕೆಯ ಉದ್ದೇಶದ್ದಾಗಿರಬೇಕೇ ವಿನಾ ಜಿಎಸ್ ಟಿ ಗೆ ಸೇರಿಸುವುದಾಗಿರಬಾರದು. ಈಗ ಕಾಂಗ್ರೆಸ್‌ ಪ್ರತಿಭಟಿಸುತ್ತಿರುವುದು ತೆರಿಗೆ ಇಳಿಸಲೋ ಅಥವಾ ಪೆಟ್ರೋಲನ್ನು ಜಿಎಸ್ ಟಿಗೆ ಸೇರಿಸಲೋ ಎಂಬುದು ಸ್ಪಷ್ಟವಾಗಬೇಕು. ಜಿಎಸ್ ಟಿಗೆ ಸೇರಿಸುವುದೇ ಕಾಂಗ್ರೆಸ್‌...
Category: Politics
Post date: 14-06-2121

Pages