News

E.g., 14/06/2021
Public News
PublicNext--514502--node-nid
Subject ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯತೆ ಹಂತದಲ್ಲಿದೆ: ವೈದ್ಯರ ಮಾಹಿತಿ

ಬೆಂಗಳೂರು: ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯತೆ ಹಂತಕ್ಕೆ ತಲುಪಿದೆ ಎಂದು ಅಪೊಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಜಯ್ ಅವರು ಆಸ್ಪತ್ರೆಗೆ ದಾಖಲಾಗಿ 36 ಗಂಟೆಗಳ ಅವಧಿಯಲ್ಲಿ ‍ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ‌. ಬಲಭಾಗದ ಮಿದುಳಿಗೆ ಮಿದುಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೊಡಬೇಕಿದ್ದ ಎಲ್ಲ ಚಿಕಿತ್ಸೆಯನ್ನೂ ಕೊಟ್ಟಿದ್ದೇವೆ. ಸದ್ಯ ಅವರು ಕೋಮಾದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


Category: Cinema, Accident
Post date: 14-06-2121
Public News
PublicNext--514485--node-nid
Subject ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್ ಪಾಕಿಸ್ತಾನ ಪರ ಇದ್ದಾರೆ: ಈಶ್ವರಪ್ಪ

ಶಿವಮೊಗ್ಗ: ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್‍ ಪಾಕಿಸ್ತಾನದ ಪರ ಇರುವ ಕಾಂಗ್ರೆಸ್ಸಿಗರು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370ನ್ನು ರದ್ದು ಮಾಡುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ ಇದು ದಿಗ್ವಿಜಯ್ ಸಿಂಗ್ ಅವರ ರಾಷ್ಟ್ರದ್ರೋಹದ ಹೇಳಿಕೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವುಗಳನ್ನು ಪೂಜೆ ಮಾಡುತ್ತೇವೆ. ಅದೇ ರೀತಿ ಗೋವುಗಳನ್ನು ಹತ್ಯೆಯನ್ನು ಮಾಡುತ್ತೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಪರ ಇದ್ದೇವೆ...
Category: Politics
Post date: 14-06-2121

Kshetra Samachara
PublicNext--514456--node-nid
Subject ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ

ಧಾರವಾಡ: ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಜೂನ್.21 ರಿಂದ ಮತ್ತೆ ಪುನರಾರಂಭಗೊಳ್ಳಲಿದೆ.

ವ್ಯಾಕ್ಸಿನೇಷ್ ಡ್ರೈವ್ ನಡೆಸಲು ಧಾರವಾಡ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಈ ಸಂಬಂಧ ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೋವಿನ್ ಪೋರ್ಟಲ್ ಪ್ರಕಾರ ಜಿಲ್ಲೆಯಲ್ಲಿ 3,23,471 ಜನರು ಮೊದಲ ಡೋಸ್ ಪಡೆದಿದ್ದಾರೆ. ಅದರಲ್ಲಿ 73,999 ಫಲಾನುಭವಿಗಳು ಎರಡನೇ ಡೋಸ್...
Category: Politics, Health & Fitness, COVID
Post date: 14-06-2121
City: Hubballi-Dharwad

Public News
PublicNext--514492--node-nid
Subject ಮಟನ್ ಸುಕ್ಕಾ ಮಾಡುವುದು ತುಂಬಾ ಸುಲಭ

ಬೇಕಾಗುವ ಸಾಮಗ್ರಿಗಳು: ಬೇಯಿಸಿಕೊಂಡ ಮಟನ್ ಮಾಂಸ – 300 ಗ್ರಾಂ, ಗುಂಟೂರು ಮೆಣಸು– 8, ಕೊತ್ತಂಬರಿಕಾಳು –2 ಚಮಚ, ಜೀರಿಗೆ – 1/2 ಚಮಚ, ಕಾಳುಮೆಣಸು – 2 ಚಮಚ, ಈರುಳ್ಳಿ – 2, ಕೊತ್ತಂಬರಿ ಸೊಪ್ಪು – 1/4 ಕಪ್, ಕರಿಬೇವು – 1/4 ಕಪ್, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ, ಹಸಿಮೆಣಸಿನಕಾಯಿ – 2, ಒಗ್ಗರಣೆಗೆ – ಒಣ ಮೆಣಸು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಬಾಣಲೆಗೆ ಕೊತ್ತಂಬರಿ ಕಾಳು, ಜೀರಿಗೆ, ಕಾಳುಮೆಣಸು, ಒಣ ಮೆಣಸು ಹಾಕಿ ಹುರಿಯಬೇಕು. ತಣ್ಣಗಾದ ಮೇಲೆ ನೀರು ಬೆರೆಸದೇ ರುಬ್ಬಬೇಕು. ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ, ಹಸಿಮೆಣಸು, ಕರಿಬೇವು, ಶುಂಠಿ, ಬೆಳ್ಳುಳ್ಳಿ ಪೇಸ್ಟ್...
Category: LadiesCorner
Post date: 14-06-2121

Kshetra Samachara
Kshetra Samachara
Subject ಭಾರೀ ಮಳೆ: ಉಡುಪಿಯಲ್ಲಿ 18 ರವರೆಗೆ ಆರೆಂಜ್ ಅಲರ್ಟ್

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮುಂಗಾರು ಮಳೆ ಅಬ್ಬರ ಜೋರಾಗಿದೆ.ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.ನಾಳೆಯವರೆಗೆ ಇದ್ದ ಆರೆಂಜ್ ಅಲರ್ಟ್
ಜೂನ್ 18 ರ ವರೆಗೆ ವಿಸ್ತರಣೆಯಾಗಿದೆ.

ರಾಜ್ಯ ಹವಾಮಾನ ಇಲಾಖೆಯಿಂದ ಕಡಲಿಗೆ ಇಳಿಯುವ ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಪ್ರತಿದಿನ 80 - 117 ಮಿಲಿ ಮೀಟರ್ ಮಳೆ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.


Category: Others
Post date: 14-06-2121
City: Udupi
Public News
PublicNext--514447--node-nid
Subject ಇಸ್ರೆಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್: ನೆತನ್ಯಾಹು 12 ವರ್ಷಗಳ ಅಧಿಕಾರ ಅಂತ್ಯ

ಇಸ್ರೇಲ್​ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಈಮೂಕ ಬೆಂಜಮಿನ್ ನೆತನ್ಯಾಹು ಅವರ 12 ವರ್ಷಗಳ ಅಧಿಕಾರ ಅಂತ್ಯವಾಗಿದೆ. ಅವರನ್ನು ಕುರ್ಚಿಯಿಂದ ಇಳಿಸಲು ಅವರದೇ ಮೈತ್ರಿಕೂಟದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಈ ಮುನ್ನ ಒಟ್ಟುಗೂಡಿದ್ದರು.

ಬೆಂಜಮಿನ್ ನೆತನ್ಯಾಹು ಸರ್ಕಾರದ ಭಾಗವೇ ಆಗಿದ್ದ ನಫ್ತಾಲಿ ಬೆನೆಟ್ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು 2009ರಿಂದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಕೆಳಗಿಳಿಸುವಲ್ಲಿ ಸಫಲರಾಗಿದ್ದಾರೆ. ಹೊಸದಾಗಿ ರೂಪಿಸಿರುವ ಸಮಿಶ್ರ ಸರ್ಕಾರಕ್ಕೆ ಸಂಸತ್ ಸದಸ್ಯರ ಅಂಗೀಕಾರ ದಕ್ಕಿದ್ದು, ಮಿಲೇನಿಯರ್, ಮಾಜಿ ಟೆಕ್...
Category: Politics
Post date: 14-06-2121

Public News
PublicNext--514487--node-nid
Subject ಜಲಪಾತಕ್ಕೆ ದಾರಿ : ಧರೆಗುರುಳಿದ ಮರ

ಯಲ್ಲಾಪುರ : ಅರಣ್ಯ ಇಲಾಖೆ ಎಚ್ಚರಿಕೆಯನ್ನು ಧಿಕ್ಕರಿಸಿ ರಾತ್ರೋರಾತ್ರಿ ಯಲ್ಲಾಪುರ ತಾಲ್ಲೂಕಿನ ಕುಂಬ್ರಾಳದಲ್ಲಿ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ನೂರಾರು ಮರಗಳ ಹನನ ಮಾಡಿ ರಸ್ತೆ ನಿರ್ಮಿಸಲಾಗಿದೆ. ದೇಹಳ್ಳಿ ಗ್ರಾಮ ಪಂಚಾಯಿತಿಯು ರಸ್ತೆ ನಿರ್ಮಿಸಿದ್ದು, ಶಿವಪುರದ ತೂಗುಸೇತುವೆ ಪಕ್ಕದಿಂದ ಸಾಗುತ್ತದೆ. ಕಾಮಗಾರಿಗಾಗಿ ಸೀಸಂ, ಸಾಗವಾನಿಯಂಥ ಬೆಲೆ ಬಾಳುವ ಮರಗಳನ್ನು ಕತ್ತರಿಸಲಾಗಿದೆ.

ಇನ್ನು ಧರೆಗೆ ಬಿದ್ದ ಮರಗಳು ಒಂದಷ್ಟು ಮಣ್ಣಿನಡಿಯಲ್ಲಿ ಹೂತು ಹೋಗಿದ್ರೆ ಕೆಲವು ಕಾಳಿನದಿಯ ಹಿನ್ನೀರಿನ ಪಾಲಾಗಿವೆ. ಇನ್ನೂ ಕೆಲವು ರಸ್ತೆಯ ಪಕ್ಕದಲ್ಲಿ ಬಿದ್ದಿವೆ. ಹೊಸ ರಸ್ತೆಯ ಎಡಭಾಗದ ಗುಡ್ಡದ ಮಣ್ಣು...
Category: Nature
Post date: 14-06-2121

Kshetra Samachara
Kshetra Samachara
Subject ಅನ್ಲಾಕ್ ಡೇ ಒನ್ :ಕೃಷ್ಣನಗರಿಯಲ್ಲಿ ವಾಹನಗಳ ದಟ್ಟಣೆ,ಜನಸಂಚಾರ ಬಿರುಸು

ಉಡುಪಿ: ರಾಜ್ಯಾದ್ಯಂತ ಇಂದು ಹಂತಹಂತವಾಗಿ ಲಾಕ್ ಡೌನ್ ಅನ್ ಲಾಕ್ ಆಗುತ್ತಿದೆ.ಮೊದಲ ದಿನವಾದ ಇಂದು ಉಡುಪಿಯಲ್ಲಿ ಜನ ಸಂಚಾರ ಹೆಚ್ಚಿದ್ದು ನಗರದೆಲ್ಲೆಡೆ ವಾಹನಗಳ ಸಂಚಾರ ಕಂಡು ಬಂತು.ನಗರದ ಪ್ರಮುಖ ರಸ್ತೆಗಳಲ್ಲಂತೂ ಕೆಲವೆಡೆ ಟ್ರಾಫಿಕ್ ಜಾಮ್ ಆಯ್ರು.ಇಷ್ಟು ದಿನಗಳ ಕಾಲ ಮನೆಯಲ್ಲೇ ಕುಳಿತ ಜನ ಒಮ್ಮೆಲೇ ತಮ್ಮ ತಮ್ಮ ಕೆಲಸಗಳಿಗಾಗಿ ಹೊರಗಡೆ ಬಂದಿದ್ದಾರೆ.

ಮದ್ಯಾಹ್ನ ಎರಡು ಗಂಟೆತನಕ ಅಗತ್ಯ ವಸ್ತುಗಳ ಅಂಗಡಿಗಳಿಗೆ ತೆರೆಯಲು ಅವಕಾಶಗಳಿದ್ದು ,ಕೆಲವು ಸೇವೆಗಳಿಗೆ ಇಂದಿನಿಂದ ವಿನಾಯಿತಿ ಇದೆ.ಕಾರ್ಖಾನೆ ಮತ್ತಿತರ ಫ್ಯಾಕ್ಟರಿಗಳಲ್ಲಿ ಅರ್ಧದಷ್ಟು ಜನರಿಗೆ ಅವಕಾಶ ಇರುವುದರಿಂದ ನಗರದಲ್ಲಿ ಜನಸಂದಣಿ ಜಾಸ್ತಿ ಇದೆ.ಇದೇ...
Category: COVID
Post date: 14-06-2121
City: Udupi, Mangalore

Kshetra Samachara
Kshetra Samachara
Subject ಉಡುಪಿಯಲ್ಲೊಬ್ಬ ಮ್ಯಾಗ್ನೆಟಿಕ್ ಮ್ಯಾನ್: ದೇಹಕ್ಕೆ ಅಂಟಿಕೊಳ್ಳುತ್ತೆ ಲೋಹದ ವಸ್ತುಗಳು!

ಉಡುಪಿ: ಉಡುಪಿಯಲ್ಲಿ ವ್ಯಕ್ತಿಯೊಬ್ಬರ ದೇಹದಲ್ಲಿ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿದ್ದು ಅಚ್ಚರಿಗೆ ಕಾರಣವಾಗಿದೆ. ಉಡುಪಿಯ ರಾಮ್ ದಾಸ್ ಶೇಟ್ ನಿನ್ನೆ ರಾತ್ರಿ ವಾಟ್ಸಾಪ್ ನಲ್ಲಿ ಬಂದ ವಿಡಿಯೋ ಒಂದನ್ನು ನೋಡಿ ತಾವೂ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಚ್ಚರಿ ಯೊಂದು ಅವರಿಗೆ ಕಾದಿತ್ತು! ಮನೆಯ. ಸ್ಪೂನ್ ,ಸವುಟು ,ಕಾಯಿನ್ ಇತ್ಯಾದಿ ವಸ್ತುಗಳನ್ನು ಅವರ ದೇಹ ಅಯಸ್ಕಾಂತದಂತೆ ಹಿಡಿದುಕೊಳ್ಳತೊಡಗಿದ್ದವು.

ಈ ವಿಷಯ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿ ವೈರಲ್ ಆಗಿತ್ತು. ಈ ಹಿಂದೆ ವ್ಯಕ್ತಿಯೊಬ್ಬರ ದೇಹದಲ್ಲಿ ಇಂತಹದ್ದೇ ಅಯಸ್ಕಾಂತೀಯ ಶಕ್ತಿ ಇದ್ದದ್ದು ಪತ್ತೆಯಾಗಿತ್ತು.

ಉಡುಪಿಯ ಪಿಪಿಸಿ ಕಾಲೇಜು...
Category: Viral
Post date: 14-06-2121
City: Udupi, Mangalore

Pages