News

E.g., 15/06/2021
Kshetra Samachara
Kshetra Samachara
Subject ಪಡುಬಿದ್ರಿ: ಕಡಲಬ್ಬರ ಹೆಚ್ಚಳ; ಅಪಾಯದಲ್ಲಿ ಬೀಚ್, ತೀರ ವಾಸಿಗಳಲ್ಲಿ ತಳಮಳ

ಪಡುಬಿದ್ರಿ: ಕರಾವಳಿಯಲ್ಲಿ 3-4 ದಿನಗಳಿಂದ ಭಾರಿ ಗಾಳಿ- ಮಳೆಯಾಗಿದ್ದು, ಕಡಲ ಅಬ್ಬರ ಹೆಚ್ಚಾಗಿ ರಕ್ಕಸ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ.

ಸಮುದ್ರದಬ್ಬರಕ್ಕೆ ಪಡುಬಿದ್ರಿಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆ ಅಪಾಯದಲ್ಲಿದೆ. ತೀರದಲ್ಲಿರುವ ಲೈಟ್ ಕಂಬಗಳ ಬುಡದ ಮರಳು ಕೊಚ್ಚಿ ಹೋಗಿದ್ದು, ಕಂಬಗಳು ಬೀಳುವ ಸ್ಥಿತಿಯಲ್ಲಿದೆ. ಸನಿಹದಲ್ಲಿರುವ ಮರಗಳು ಮುರಿದು ಬಿದ್ದಿದೆ. ಕೆಲವೆಡೆ ತೆಂಗಿನ‌ ಮರಗಳು ಸಮುದ್ರ ಪಾಲಾಗುವುದರಲ್ಲಿದೆ.

ಕಳೆದ ವರ್ಷ ಪಡುಬಿದ್ರಿ ಬೀಚ್‌ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರವಾಗಿತ್ತು. ಕಾಂಕ್ರೀಟ್ ತಡೆಗೋಡೆ, ಇಂಟರ್ ಲಾಕ್, ತೆಂಗಿನ ಮರಗಳು
...
Category: Infrastructure, Nature
Post date: 14-06-2121
City: Udupi, Mangalore

Public News
PublicNext--515228--node-nid
Subject ಬೇಗ ಮದ್ವೆ ಮಾಡಿ ಅಂತ ಟವರ್ ಕಂಬವೇರಿದ ಭೂಪ..!

ವಿಜಯನಗರ: ಹುಡುಗಿ ಫಿಕ್ಸ್ ಆಗಿ ತಿಂಗಳುಗಳೇ ಕಳೆದರೂ ಮನೆಯಲ್ಲಿ ಬೇಗ ಮದುವೆ ಮಾಡಿಲಿಲ್ಲ ಅಂತ ಯುವಕನೋರ್ವ ಟವರ್ ಕಂಬವೇರಿ ಕುಳಿತ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.

23 ವರ್ಷದ ಚಿರಂಜೀವಿ ಟವರ್ ಏರಿ ಕುಳಿತ ಯುವಕ. ಚಿರಂಜೀವಿ ಪೋಷಕರು ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಮಾತುಕತೆ ಕೂಡ ಮೂಗಿಸಿದ್ದಾರೆ. ಆದರೆ ಇಬ್ಬರು ಗಂಡು ಮಕ್ಕಳಿರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಮಗನಿಗೆ ಮದುವೆ ಮಾಡಿದ ನಂತರ ಚಿರಂಜೀವಿಗೆ ಮದುವೆ ಅಂತ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ, ನನಗೆ ಹುಡುಗಿ ಫೀಕ್ಸ್ ಮಾಡಿದ್ದಿರಿ ಮದುವೆಗೆ ತಡ ಯಾಕ್​ ಮಾಡ್ತೀರಾ? ಮದುವೆ ಮಾಡಿ. ನನಗೆ...
Category: Crime
Post date: 14-06-2121

Public News
Public News
Subject ಬೆಳಗಾವಿ- ಹುಲಿಯನ್ನು‌ ದತ್ತು ಪಡೆದ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ- ಅಳಿಯನ ಜನ್ಮದಿನದ ಪ್ರಯುಕ್ತ ಶೌರ್ಯ ಎಂಬ ಹೆಸರಿನ ಹುಲಿಯನ್ನು‌, ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ದತ್ತು‌ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಕಿತ್ತೂರ ರಾಣಿಚನ್ನಮ್ಮ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ 1ಲಕ್ಷ ರೂ.ಗಳ ಚೆಕ್ ನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹಸ್ತಾಂತರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀ, ಮಹಾಮಾರಿ‌ ಕೊರೊನಾದಿಂದ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಮೃಗಾಲಯದಲ್ಲಿ ಪ್ರಾಣಿಗಳಿಗೆ ತುಂಬಾ ಕಷ್ಟ ಆಗುತ್ತಿದೆ. ಈ ಮೊದಲು ‌ಮೃಗಾಲಯಕ್ಕೆ ಜನರು ಬರುತ್ತಿದ್ದರು. ಆದರೀಗ ಕೊರೊನಾ‌...
Category: Politics, Human Stories
Post date: 14-06-2121

Public News
PublicNext--515247--node-nid
Subject ಮುಂದಿನ 3 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ- ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕದ ಕೆಲವೆಡೆ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ವ್ಯಾಪಕ ಮಳೆಯ ಎಚ್ಚರಿಕೆ ಕೊಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ರೆಡ್, ಆರೇಂಜ್ ಹಾಗೂ ಯೆಲ್ಲೋ​ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ದಿನಗಳಲ್ಲಿ, ಹಲವು ಪ್ರದೇಶಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, ಜಾರ್ಖಂಡ್‌ನಲ್ಲಿ ವಾಯುಭಾರ ಕುಸಿತವಾಗಿರುವುದರಿಂದ...
Category: Nature
Post date: 14-06-2121

Public News
PublicNext--515222--node-nid
Subject ಬ್ರೇಕಿಂಗ್: ಜೂ.21ರಿಂದ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ಜೂನ್‌ 21ರಿಂದ ಜುಲೈ 5ರವೆಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.‌

ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಪರೀಕ್ಷೆಗೂ ಮೊದಲು ಪರೀಕ್ಷಾ ಸಿಬ್ಬಂದಿಗೆ ಲಸಿಕೆ ಹಾಕಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ಆರೋಗ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಪತ್ರ ಬರೆದಿದ್ದು, 2021-22ನೇ...
Category: Education, Government
Post date: 14-06-2121

Kshetra Samachara
Kshetra Samachara
Subject ಉಡುಪಿ: 60 ಬಾರಿ ರಕ್ತದಾನ ಮಾಡಿದ್ದಾರೆ ಕಾರ್ಕಳದ ಶೈಲೇಂದ್ರ ರಾವ್ !

ಕಾರ್ಕಳ: ರಕ್ತದಾನ ಶ್ರೇಷ್ಠದಾನ ಅಂತಾರೆ.ಅನಿವಾರ್ಯ ಸಂದರ್ಭಗಳಲ್ಲಿ ಇದು ಜೀವ ಉಳಿಸುವ ದ್ರವ.ಸಕಾಲಕ್ಕೆ ಸಿಗದೇ ಹೋದರೆ ಜೀವಕ್ಕೇ ಸಂಚಕಾರ.

ಇಂದು ವಿಶ್ವ ರಕ್ತದಾನಿಗಳ ದಿನ.ಕಾರ್ಕಳದ ಕೆ. ಶೈಲೇಂದ್ರ ರಾವ್ ಈತನಕ ಬಾರಿ ರಕ್ತದಾನ ಮಾಡಿ ಹಲವರ ಜೀವ ಉಳಿಸಿದ್ದಾರೆ ಎಂದರೆ ನೀವು ನಂಬಲೇಬೇಕು.

ಉದ್ಯಮಿಯಾಗಿರುವ ಇವರು ಕಾಲೇಜಿನಲ್ಲಿರುವಾಗಲೇ ಎನ್ನೆಸ್ಸೆಸ್ ಕಾರ್ಯಕರ್ತರಾಗಿ ಪ್ರಥಮವಾಗಿ ರಕ್ತದಾನ ಮಾಡುವ ಮೂಲಕ ಈ ರಕ್ತದಾನ ಸೇವೆಗೆ ಅಡಿ ಇಟ್ಟವರು.ಅಲ್ಲಿಂದ ವಿವಿಧ ಸೇವಾ ಸಂಸ್ಥೆಗಳ ಪರಿಚಯವಾಗಿ ರೋಟರಿ ,ರೋಟರ್ಯಾಕ್ಟ್ ,ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಿ ಹಲವಾರು ಬಾರಿ ರಕ್ತದಾನ ಮಾಡುವ ಅವಕಾಶ...
Category: Health & Fitness, Human Stories
Post date: 14-06-2121
City: Udupi, Mangalore

Kshetra Samachara
Kshetra Samachara
Subject ಬ್ರಹ್ಮಾವರ: ಲಾಕ್ ಡೌನ್ ನಡುವೆ ಮಂದಾರ್ತಿ ದುರ್ಗಾಪರಮೇಶ್ವರಿ ಐದು ಯಕ್ಷಗಾನ ಮೇಳಗಳ ಕೊನೆಯ ದೇವರ ಸೇವೆ ಆಟ ಸರಳ ರೀತಿಯಲ್ಲಿ ಸಂಪನ್ನ

ಬ್ರಹ್ಮಾವರ: ಲಾಕ್ ಡೌನ್ ಕಾರಣದಿಂದಾಗಿ ಕರಾವಳಿಯ ಯಕ್ಷಗಾನ ಮೇಳಗಳ ಪ್ರದರ್ಶನ ಎ.26 ರಿಂದ ಸ್ಥಗಿತಗೊಂಡಿದೆ ಹಾಗೂ ದೇಗುಲಗಳಲ್ಲಿ ಪೂಜೆ, ಪುನಸ್ಕಾರ ಭಕ್ತರ ಆಗಮಿಸುವಿಕೆಗೆ ನಿಷೇಧವಿರುವುದರಿಂದ ಸಂಪ್ರದಾಯದಂತೆ ಯಕ್ಷಗಾನ ಮೇಳಗಳ ಕೊನೆಯ ದೇವರ ಸೇವೆಗೂ ಹಿನ್ನಡೆಯಾಗಿತ್ತು. ಪ್ರತಿಯೊಂದು ಯಕ್ಷಗಾನ ಮೇಳಗಳು ಪ್ರದರ್ಶನ ಆರಂಭವಾಗುವ ಪ್ರಥಮ ದಿನ ಹಾಗೂ ಪ್ರದರ್ಶನದ ಕೊನೆಯ ದಿನ ದೇಗುಲದಲ್ಲೇ ಸೇವಾ ಪ್ರದರ್ಶನವನ್ನು ನೀಡಿ ದೇವರಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ ಮತ್ತು ಇದಕ್ಕೆ ಚ್ಯುತಿಯಾಗಬಾರದು ಎನ್ನುವ ನಂಬಿಕೆ ಇದೆ. ಆದರೆ ಈ ಬಾರಿ ಲಾಕ್ ಡೌನ್ ಕಾರಣದಿಂದ ತೆಂಕು- ಬಡಗಿನ ಬಹುತೇಕ ಯಕ್ಷಗಾನ ಮೇಳಗಳ ಕೊನೆಯ ದೇವರ...
Category: Cultural Activity
Post date: 14-06-2121
City: Udupi, Mangalore

Public News
Public News
Subject ಗೋಕಾಕ- ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ಮೋದಿಯನ್ನು ಸನ್ಮಾನಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಗೋಕಾಕ- ಪೆಟ್ರೋಲ್ 100 ನಾಟೌಟ್" ಹೋರಾಟದ ಭಾಗವಾಗಿ ಗೋಕಾಕನಲ್ಲಿ ಇಂದು, ಕೆಪಿಸಿಸಿ ಅಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಂದ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ತೈಲ ಬೆಲೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ವೇಷಧಾರಿಯನ್ನು ಸತೀಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಮಹಿಳಾ ಕಾರ್ಯಕರ್ತರು ಮೋದಿ ವೇಷಧಾರಿಗೆ ಆರುತಿ ಎತ್ತಿ ತಿಲಕ ಹಚ್ಚಿದರು. ತಾಂಬೂಲ ಕೂಡ ನೀಡಲಾಯಿತು. ಮೋದಿಗೆ ಜೈಕಾರ ಕೂಗಿ, ವ್ಯಂಗ್ಯ ಮಾಡಲಾಯಿತು.

ಕಾರ್ಯಕರ್ತರು ಎತ್ತಿನ ಬಂಡಿ ಚಲಾಯಿಸುವ ಮೂಲಕ ಪೆಟ್ರೋಲ್, ಡೀಸೆಲ್...
Category: Politics
Post date: 14-06-2121

Kshetra Samachara
PublicNext--515173--node-nid
Subject ಬೆಳಗಾವಿ: ತಲೆ ಬುರುಡೆ ಸಮೇತ ಜಿಂಕೆ ಕೊಂಬು ಸಾಗಾಣಿಕೆ- ಇಬ್ಬರ ಬಂಧನ

ಬೆಳಗಾವಿ: ತಲೆ ಬುರುಡೆ ಸಮೇತ ಜಿಂಕೆ ಕೊಂಬನ್ನು ಅಕ್ರಮವಾಗಿ ಸಾಗಿಸು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ‌ ಸಿಬ್ಬಂದಿ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪದ ಗ್ರಾಮದ ನಾಗೇಶ ಇಟಗಿ (47) ಹಾಗೂ ಅಭಿಷೇಕ್ ಕೊರವರ (18) ಬಂಧಿತರು. ಇದಲ್ಲದೇ ರಾಯಬಾಗ ತಾಲೂಕಿನ ಹಾರೋಗೇರೆ ಗ್ರಾಮದ ಬಾಬು ಜಮಾದಾರ (45) ಮತ್ತು ಬೆಳಗಾವಿ ತಾಲೂಕಿನ ಸಾಂಬ್ರಾ ನಿವಾಸಿ ಶಂಕರ ಲಕ್ಷ್ಮಣ ದೇಸಾಯಿ (32) ಆರೋಪಿಗಳು ತಪ್ಪಿಸಿಕೊಂಡು ತಲೆ ಮರಿಸಿಕೊಂಡಿದ್ದಾರೆ.

ನಾಲ್ವರು ಆರೋಪಿಗಳು ಹಣದಾಸೆಗೆ ಕಾಡಿನಲ್ಲಿರುವ ಜಿಂಕೆ ಕೊಂದು ಮಾರಾಟಕ್ಕೆ ತೆಗೆದುಕೊಂಡು ಹೋಗಲು,...
Category: Crime
Post date: 14-06-2121
City: Hubballi-Dharwad

Pages